Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಹನುಮ ಸಂಭ್ರಮ: ವಿದ್ಯುದೀಪಗಳಿಂದ ಅಲಂಕಾರಗೊAಡ ಅಂಜನಾದ್ರಿ

ಕೊಪ್ಪಳ: ಡಿಸೆಂಬರ್ 22: ಡಿಸೆಂಬರ್ 23 ಮತ್ತು ಡಿಸೆಂಬರ್ 24 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದೆ.

ಹಿಂದೆAದಿಗಿAತಲೂ ಈ ಭಾರಿ ಹೆಚ್ಚಿನ ರೀತಿಯಲ್ಲಿ ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ ಕಾಣಬೇಕು. ಜನರಿಗೆ ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಹಲವಾರು ಬಾರಿ ಸಭೆಯಲ್ಲಿ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಲಂಕಾರ ಸಮಿತಿಯನ್ನು ರಚಿಸಿ ಬೆಟ್ಟದ ಅಲಂಕಾರಕ್ಕು ಸಹ ಅಷ್ಟೇ ಆದ್ಯತೆ ನೀಡಬೇಕು ಎಂದು ಸಂಬAಧಿಸಿದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮೇಲಿಂದ ಮೇಲೆ ನಿರ್ದೇಶನ ನೀಡಿ ಮಾರ್ಗದರ್ಶನ ಮಾಡಿದ್ದರು.

ಹನುಮಮಾಲಾ ಕಾರ್ಯಕ್ರಮದ ಮುನ್ನಾ ದಿನವಾದ ಡಿಸೆಂಬರ್ 22ರಂದು ಅಂಜನಾದ್ರಿಯ ಬೆಟ್ಟವು ಬಗೆಬಗೆಯ ಬಣ್ಣದ ವಿದ್ಯೂದೀಪಗಳಿಂದ ಅಲಂಕಾರಗೊAಡು ಜನಮನ ಸೆಳೆಯುತ್ತಿದೆ.

ಅಲಂಕಾರಕ್ಕೆ ಮೆಚ್ಚುಗೆ: ಡಿಸೆಂಬರ್ 22ರಂದು ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಬಗೆಬಗೆಯ ವಿದ್ಯುದೀಪಗಳಿಂದ ಅಲಂಕೃತಗೊAಡು ಬಹುಚೆಂದವಾಗಿ ಕಂಡ ಅಂಜನಾದ್ರಿ ಬೆಟ್ಟದ ಸೊಬಗನ್ನು ಕಂಡು ಸಂಬAಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ನಿಮಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು- ಜಿಲ್ಲಾಧಿಕಾರಿ ನಲಿನ್ ಅತುಲ್

satyadarshana

ಪುನೀತ್ ಗೆ ಪದ್ಮಶ್ರೀ ನೀಡುವಂತೆ ರಾಜ್ಯ ಸರ್ಕಾರ ಒತ್ತಾಯ.

satyadarshana

2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ.

satyadarshana

Leave a Comment