Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ವಿಧಾನಸಭಾ ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ 601 ಅಬಕಾರಿ ಪ್ರಕರಣಗಳು ದಾಖಲು.

ಕೊಪ್ಪಳ ಏಪ್ರಿಲ್ 28: 2023ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟು ಮಾರ್ಚ್ 29 ರಿಂದ ಏಪ್ರಿಲ್ 25ರವರೆಗೆ ಜಿಲ್ಲೆಯಲ್ಲಿ ಒಟ್ಟು 601 ಅಬಕಾರಿ ಪ್ರಕರಣಗಳನ್ನು ದಾಖಲಿಸಿದೆ.

ಅಬಕಾರಿ ಉಪ ಆಯುಕ್ತರಾದ ಸೆಲೀನಾ ಸಿ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಘೋರ-62, ಸಾಮಾನ್ಯ-54 ಹಾಗೂ ಕಲಂ15(ಎ)-485 ಸೇರಿ ಒಟ್ಟು-601 ಪ್ರಕರಣಗಳು ದಾಖಲಿಸಿ ಸುಮಾರು 3848.230 ಲೀಟರ್ ಮದ್ಯ, 5543.510 ಲೀಟರ್ ಬಿಯರ್ ಹಾಗೂ 167.250 ಲೀಟರ್ ಗೋವಾ ಮದ್ಯ ಮತ್ತು ದ್ವಿ ಚಕ್ರ ವಾಹನಗಳು-50, ನಾಲ್ಕು ಚಕ್ರ ವಾಹನ-01, ಹೇವ್ವಿ ವೆಹಿಕಲ್ 01 ಜಪ್ತುಪಡಿಸಿಕೊಂಡು ಒಟ್ಟು 19 ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಜಪ್ತುಪಡಿಸಿದ ಮುದ್ದೆಮಾಲು ಹಾಗೂ ವಾಹನಗಳ ಒಟ್ಟು ಅಂದಾಜು ಮೌಲ್ಯ 96,26,279 ರೂ. ಗಳಾಗಿರುತ್ತದೆ ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.

Related posts

ಪರಿವರ್ತನಾ ಯುಗದ ಪ್ರತಿ ಮೂರ್ತಿಗಳು 

satyadarshana

ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ; ಫಲವತ್ತಾದ ಕೃಷಿ ಭೂಮಿಗೆ ಕುತ್ತು

satyadarshana

223ನೇ ದಿನದ ಬಲ್ಡೋಟ ಕಾರ್ಖಾನೆ, ಮಾಲಿನ್ಯ ವಿರೋಧಿ ಹೋರಾಟ ಯಶಸ್ವಿ;

satyadarshana

Leave a Comment