ಗಜೇಂದ್ರಗಡ : (10.ಡಿ) ತಾಲ್ಲೂಕಿನ ಸೂಡಿ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದಲೂ ನಡೆಯುತ್ತಿರುವ ಕಾರ್ತಿಕೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಂಡ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಇದಕ್ಕು ಮುನ್ನ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ವಿವಿಧ ವಾದ್ಯ ಮೇಳಗಳೊಂದಿಗೆ ನಡೆದ ಸಂದರ್ಭದಲ್ಲಿ ಉತ್ಸವ, ಕುಣಿತ ಹಾಗೂ ವಿವಿಧ ಮೇಳಗಳು ಆರ್ಭಟ ಭಕ್ತರನ್ನು ರಂಜಿಸಿದವು.
