Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಇಂದು ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್.

Asia cup 2022 ಇಂದು ಏಷ್ಯಾ ಕಪ್​ 2022ಲ್ಲಿ ಹೈವೋಲ್ಟೇಜ್​ ಪಂದ್ಯವೊಂದು ನಡೆಯಲಿದೆ. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ದುಬೈನ ರಣಾಂಗಣದಲ್ಲಿ ಮುಖಾಮುಖಿಯಾಗಲಿದೆ. ಈ ಒಂದು ಪಂದ್ಯಕ್ಕಾಗಿ ಕೋಟ್ಯಾಂತರ ಅಬಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಏಷ್ಯಾ ಕಪ್​ 2022ರ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ನೋಡಬಹುದಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಈ ಮೈದಾನವು ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಹೆಚ್ಚು ಆಕ್ರಮಣಕಾರಿಯಾಗಿ ದಾಳಿ ಮಾಡಲು ಪಿಚ್​ ಸಹಾಯಕವಾಗುತ್ತದೆ.ಇದರಿಂದಾಗಿ ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಆದರೆ ಪಾಕ್​ ಕಳೆದ ಕೆಲ ವರ್ಷಗಳಿಂದ ದುಬೈ ಮೈದಾನದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವವನ್ನು ಹೊಂದಿದೆ. ಹಾಗೆಯೇ ಭಾರತದ ಆಟಗಾರರು ಐಪಿಎಲ್​ನಲ್ಲಿ ಈ ಮೈದಾನದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಹೊಸ ಬೌಲ್​ನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಪಿಚ್​ನಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆಲುವು ದಾಖಲಿಸಿದೆ. ಪಿಚ್​ನ ಮೊದಲ ಇನ್ನಿಂಗ್ಸ್ ಸರಾಸರಿ 142 ರನ್ ಅಗಿದೆ. 211 ರನ್ ಗರಿಷ್ಠ ಸ್ಕೋರ್​ ಆಗಿದೆ.ಇಂದಿನ ಪಂದ್ಯಕ್ಕೆ ಮಳೆಯ ಅಡ್ಡಿ ಆಗುವ ಯಾವುದೇ ಸಾಧ್ಯತೆಗಳಿಲ್ಲ.

IND vs PAK ಹೆಡ್​ ಟು ಹೆಡ್​:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 14 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 8 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಅಲ್ಲದೇ ಉಭಯ ತಂಡಗಳು ಟಿ20 ಅಲ್ಲಿ ಈವರೆಗೆ ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 6ರಲ್ಲಿ ಭಾರತ ಮತ್ತು ಕೇವಲ 2ರಲ್ಲಿ ಪಾಕ್​ ಗೆದ್ದಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್
ಪಾಕಿಸ್ತಾನ ತಂಡ: ಬಾಬರ್ ಅಜಮ್ (C), ಮೊಹಮ್ಮದ್ ರಿಜ್ವಾನ್ (WK), ಫಖರ್ ಜಮಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಹೈದರ್ ಅಲಿ, ಶಾದಾಬ್ ಖಾನ್ (VC), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ.

Related posts

ಪರಿಷ್ಕೃತ ಪ್ರಕಟಣೆ *ಡಿ.16 ರಂದು ಕೊಪ್ಪಳ ವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕರ ಅಹವಾಲು ಸ್ವೀಕಾರ ಸಭೆ

satyadarshana

ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ: 48.55 ಕೋ. ರೂ. ಆಸ್ತಿ ಪತ್ತೆ

satyadarshana

ಸ್ವಚ್ಚತಾ ಹೀ ಸೇವಾ ಆಂದೋಲನ: ಪ್ರತಿಜ್ಞಾ ವಿಧಿ ಸ್ವೀಕಾರ

satyadarshana

Leave a Comment