Asia cup 2022 ಇಂದು ಏಷ್ಯಾ ಕಪ್ 2022ಲ್ಲಿ ಹೈವೋಲ್ಟೇಜ್ ಪಂದ್ಯವೊಂದು ನಡೆಯಲಿದೆ. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ದುಬೈನ ರಣಾಂಗಣದಲ್ಲಿ ಮುಖಾಮುಖಿಯಾಗಲಿದೆ. ಈ ಒಂದು ಪಂದ್ಯಕ್ಕಾಗಿ ಕೋಟ್ಯಾಂತರ ಅಬಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಏಷ್ಯಾ ಕಪ್ 2022ರ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ನೋಡಬಹುದಾಗಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಈ ಮೈದಾನವು ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಹೆಚ್ಚು ಆಕ್ರಮಣಕಾರಿಯಾಗಿ ದಾಳಿ ಮಾಡಲು ಪಿಚ್ ಸಹಾಯಕವಾಗುತ್ತದೆ.ಇದರಿಂದಾಗಿ ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಆದರೆ ಪಾಕ್ ಕಳೆದ ಕೆಲ ವರ್ಷಗಳಿಂದ ದುಬೈ ಮೈದಾನದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವವನ್ನು ಹೊಂದಿದೆ. ಹಾಗೆಯೇ ಭಾರತದ ಆಟಗಾರರು ಐಪಿಎಲ್ನಲ್ಲಿ ಈ ಮೈದಾನದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಹೊಸ ಬೌಲ್ನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಪಿಚ್ನಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆಲುವು ದಾಖಲಿಸಿದೆ. ಪಿಚ್ನ ಮೊದಲ ಇನ್ನಿಂಗ್ಸ್ ಸರಾಸರಿ 142 ರನ್ ಅಗಿದೆ. 211 ರನ್ ಗರಿಷ್ಠ ಸ್ಕೋರ್ ಆಗಿದೆ.ಇಂದಿನ ಪಂದ್ಯಕ್ಕೆ ಮಳೆಯ ಅಡ್ಡಿ ಆಗುವ ಯಾವುದೇ ಸಾಧ್ಯತೆಗಳಿಲ್ಲ.
IND vs PAK ಹೆಡ್ ಟು ಹೆಡ್:
ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ನಲ್ಲಿ ಈವರೆಗೆ ಒಟ್ಟು 14 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 8 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಅಲ್ಲದೇ ಉಭಯ ತಂಡಗಳು ಟಿ20 ಅಲ್ಲಿ ಈವರೆಗೆ ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 6ರಲ್ಲಿ ಭಾರತ ಮತ್ತು ಕೇವಲ 2ರಲ್ಲಿ ಪಾಕ್ ಗೆದ್ದಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್
ಪಾಕಿಸ್ತಾನ ತಂಡ: ಬಾಬರ್ ಅಜಮ್ (C), ಮೊಹಮ್ಮದ್ ರಿಜ್ವಾನ್ (WK), ಫಖರ್ ಜಮಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಹೈದರ್ ಅಲಿ, ಶಾದಾಬ್ ಖಾನ್ (VC), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ.

