Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಎರಡು ದಿನಗಳ ಸ್ವಕ್ಷೇತ್ರದ ಪ್ರವಾಸದಲ್ಲಿ ಬಾದಾಮಿ ಜನರನ್ನ ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಸಿದ್ದರಾಮಯ್ಯ.

ಬಾಗಲಕೋಟೆ (ಎ.8): ವಿಧಾನ ಸಭೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಈ ಬಾರಿ ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡದೆ ಹಿಂದೆ ಸರಿಯುತ್ತಿದ್ದಾರಾ ಎಂಬ ಶಂಕೆ ಮೂಡಲಾರಂಭಿಸಿದೆ. ಕಳೆದ ಎರಡು ಬಾರಿ ಸ್ವಕ್ಷೇತ್ರ ಬಾದಾಮಿ  ಪ್ರವಾಸದಲ್ಲಿ ಉಂಟಾಗಿರೋ ವಿವಿಧ ಬೆಳವಣಿಗೆಗಳಿಂದ ಸಿದ್ದರಾಮಯ್ಯನವರಿಗೆ ಇರುಸು ಮುರುಸು ಉಂಟಾಗಿದ್ದು, ಹೀಗಾಗಿ ಬಾದಾಮಿಯಿಂದ ಸ್ಪರ್ಧೆ ಮಾಡೋದು ಅನುಮಾನ ಮೂಡತೊಡಗಿದೆ.

ವಿಧಾನ ಸಭೆ ಅಧಿವೇಶನ ಮುಗಿದ ಬೆನ್ನಲ್ಲೆ ಎರಡು ದಿನಗಳ ಕಾಲ ಸ್ವಕ್ಷೇತ್ರ ಬಾದಾಮಿ ಪ್ರವಾಸ ದಲ್ಲಿದ್ದ ಸಿದ್ದರಾಮಯ್ಯ , ವಿವಿಧ ಅಭಿವೃದ್ದಿ ಕಾಮಗಾರಿಗಳು ಹಾಗೂ ಶಾಲೆಯ ಕಟ್ಟಡ ಉದ್ಘಾಟನೆ ಸೇರಿದಂತೆ ವಿವಿಧ ಸಮಾರಂಭ ದಲ್ಲಿ ಭಾಗವಹಿಸಿದರಲ್ಲದೆ, ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಹೋದ ಕಡೆಗೆಲ್ಲಾ ಜನರಿಗೆ ಕೈಮುಗಿದು, ಅವರು ತಮ್ಮನ್ನು ಗೆಲ್ಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಕೈಮುಗಿದು ಭಾಷಣ ಮಾಡುವ ಪರಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನು ಬಾದಾಮಿಯ ಪುರಸಭೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ, ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಅಭಿಮಾನಿಗಳ ಮನವಿಗೆ ಸಿದ್ದು ಪ್ರತಿಕ್ರಿಯೆ ನೀಡಿ, ನೋಡೋಣ, ಎಲೆಕ್ಷನ್ ಇನ್ನೂ ಒಂದು ವರ್ಷ ಇದೆ. ಕೂಸು ಹುಟ್ಟುವ ಮುನ್ನವೇ ಕುಲಾಯಿ ಹಾಕೋಳ್ಳೋಕೆ ಆಗುತ್ತಾ ಎಂದರು. ಬಾದಾಮಿ ದೂರ ಅನ್ನೋದು ಬಿಟ್ಟರೆ, ಬಾದಾಮಿ ಜನ ಬಹಳ ಒಳ್ಳೆಯವರು. ಕೇವಲ ಶಾಸಕನಾಗಿದ್ದರೆ ವಾರದಲ್ಲಿ ಎರಡು ದಿನ ಬಂದು ಜನರ ಸಮಸ್ಯೆ ಕೇಳಬಹುದಾಗಿತ್ತು.

ಸಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಅಭಿಮಾನಿಯಿಂದ ಕುರಿ ಗಿಪ್ಟ್:

ಬಾದಾಮಿಯಲ್ಲಿ ಅಭಿಮಾನಿ ಯೊಬ್ಬರು, ಸಿದ್ದರಾಮಯ್ಯನವರಿಗೆ ಕುರಿ ಗಿಫ್ಟ್ ನೀಡಿ ಗಮನ ಸೆಳೆದರು. ಗುರುಸಂಗಪ್ಪ ಕೊಡಲಿ ಎಂಬುವವರು, ಸಿದ್ದರಾಮಯ್ಯ ಅವರಿಗೆ ಕುರಿ ಗಿಫ್ಟ್ ನೀಡಿದರು. ಈ ಸಂದರ್ಭದಲ್ಲಿ ಇದು ಗಂಡು, ಹೆಣ್ಣೋ ಎಂದು ಕೇಳಿದ ಸಿದ್ದರಾಮಯ್ಯ, ಈ ಕುರಿ ನನಗೆ ಕೂಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಕೆಂದೂರ ಕೆರೆಗೆ ನೀರು ಹಾಯಿಸುವ ಯೋಜನೆಗೆ ಚಾಲನೆ ನೀಡಿ ವಾಪಸ್ಸು ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳಿದರು.

Related posts

ನಿಷ್ಪಾಪ ಹಸ್ತದಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ..ಸಿದ್ದರಾಮೇಶ್ವರ ಕೊಪ್ಪಳ

satyadarshana

ಕಾಂಗ್ರೆಸ್ ಸಂಘಟನಾ ಸಂಕಲ್ಪದ … ತಾಲ್ಲೂಕು ಪದಾದೀಕಾರಿಗಳ ಕಾರ್ಯಕ್ರಮ

satyadarshana

ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸರು ತಮ್ಮ ದೇಹಗಳಿಗೆ ಕ್ಯಾಮರ ಕಡ್ಡಾಯ ಮಾಡಿ ಆದೇಶ

satyadarshana

Leave a Comment