ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಪತಿಯ ದಬ್ಬಾಳಿಕೆಗೆ ರೋಸಿ ಹೋದ ಉದ್ಯೊಗ ಖಾತ್ರಿ ಕೂಲಿಕಾರ್ಮಿಕರು ತಮಗೆ ರಕ್ಷಣೆ ನೀಡುವಂತೆ ಕುಷ್ಟಗಿ ತಾಲೂಕು ಪಂಚಾಯತ್ ಇಓ ಡಾ.ಜಯರಾಮ್ ಚೌವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡುವ ಕೂಲಿಕಾರರಿಗೆ ಗ್ರಾ.ಪಂ. ಅದ್ಯಕ್ಷೆಯ ಪತಿ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದ್ದು ಕೂಲಿಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಕೂಲಿಕಾರರು, ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಕೆಲಸ ಕೇಳಿದರೆ ಅದ್ಯಕ್ಷೆ ಪತಿರಾಯ ಅವಾಶ್ಚವಾಗಿ ನಿಂದಿಸುತ್ತಿದ್ದಾರೆಂದು ಆರೋಪಿಸಿದರು.
ಅದೇ ವೇಳೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸಿ, ತಾ.ಪಂ. ಇಓ ಸಮಕ್ಷಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚ್ಯವಾಗಿ ಹೇಳಿದರು.
