Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ರಸ್ತೆಯುದ್ದಕ್ಕೂ ತಗ್ಗು-ಗುಂಡಿ ಬಿದ್ದಿದ್ದು, ಅಲ್ಲಲ್ಲಿ ಬಿದ್ದ ತಗ್ಗುನಲ್ಲಿ ಮಳೆ ನೀರು ನಿಂತು ನಿರ್ಮಾಣಗೊಂಡ ಬೃಹತ್ ಹೊಂಡಗಳು.

ಗದಗ: (ಸತ್ಯ ದರ್ಶನ )  ಗಜೇಂದ್ರಗಡ ತಾಲೂಕಿನ    ಸೂಡಿ ಗ್ರಾಮ . ಇದೇನು ರಸ್ತೆ. ಎಲ್ಲೆಂದರಲ್ಲಿ ತುಂಬಿದ ಕೆಸರು ರಾಡಿ ರಸ್ತೆಗಳು. ಸಂಪೂರ್ಣ ಹಾಳಾದ ಒಳರಸ್ತೆಗಳು. ರಸ್ತೆಯುದ್ದಕ್ಕೂ ತಗ್ಗು-ಗುಂಡಿ ಬಿದ್ದಿದ್ದು, ಅಲ್ಲಲ್ಲಿ ಬಿದ್ದ ತಗ್ಗುನಲ್ಲಿ ಮಳೆ ನೀರು ನಿಂತು ನಿರ್ಮಾಣಗೊಂಡ ಬೃಹತ್ ಹೊಂಡಗಳು. ಜಿನಿ ಜಿನಿ ಮಳೆಗೆ ಸುಸ್ತಾದ ಜನತೆ...

 ಸೂಡಿ 3ನೇ ವಾರ್ಡ್  ಬಹುತೇಕ ಒಳರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಮಳೆ ನೀರಿನಿಂದ ಕೆಸರು ಆಗಿದೆ. ಹೀಗಾಗಿ ಪಾದಚಾರಿಗಳು, ವಾಹನ ಸವಾರರು ಸುಗಮ ಸಂಚಾರಕ್ಕೆ ಪರಿತಪ್ಪಿಸುವಂತಾಗಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ಜಿನಿ ಜಿನಿ ಮಳೆ ಬರುತ್ತಿದೆ. ಇದ್ದರಿಂದ ಜನತೆ ರಾಡಿ ರಸ್ತೆಯಲ್ಲಿ ತಿರುಗಾಡು ತ್ತಾ ಗ್ರಾಮ ಪಂಚಾಯಿತಿ  ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಆದರೂ ಕೂಡ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಯಾವುದೇ ರೀತಿಯಿಂದ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಹಿನ್ನೆಲೆ ಸಾರ್ವ ಜನಿಕರು ತೀವ್ರ ಆಕ್ರೋಶಗೊಂಡಿದ್ದಾರೆ.

Related posts

ಸತ್ಯದರ್ಶನ ಕನ್ನಡ ದಿನಪತ್ರಿಕೆ ಮಂಗಳವಾರ 10. 2024

satyadarshana

ಸೂಡಿ: ಮಾರುತೇಶ್ವರ ಕಾರ್ತಿಕೋತ್ಸವ ಸಂಭ್ರಮ.

satyadarshana

ಡಾ. ಅಂಬೇಡ್ಕರ್ ಸಂವಿಧಾನದಿಂದ ರಾಜಕೀಯದಲ್ಲಿ ಸಮಾನತೆ ಇದೆ, ಸಾಮಾಜಿಕವಾಗಿ ಸಮಾನತೆ ಇನ್ನು ಆಗಬೇಕಿದೆ : ಸಚಿವ ಎಚ್.ಕೆ. ಪಾಟೀಲ

satyadarshana

Leave a Comment