ಸತ್ಯ ದರ್ಶನ
ಗದಗ : ಜಿಲ್ಲೆಯ ಗಜೇಂದ್ರಗಡದ ಬಿ ಕೆ ಮಾದಿಯವರಿಗೆ ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಕೊಡಮಾಡುವ ೨೦೨೦-೨೦೨೨ ನೇ ಸಾಲಿನ ರಾಜ್ಯ ಪತ್ರಕರ್ತರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು ೧೯೯೫ ರಿಂದಲೂ ಕಾಲಕಾಲೇಶ್ವರ, ಟಿಪ್ಪುಸ್ವರ್ಡ್ಬಿ ಕೆ ಮಾದಿ ಸೇರಿಂದತೆ ಹಲವಾರು ಪತ್ರಿಕೆಯಲ್ಲಿ ಸಂಪಾದಕರಾಗಿ, ಉಪಸಂಪಾದಕರಾಗಿ, ಲೋಕದರ್ಶನ, ವಿನಯವಾಣಿ, ಸತ್ಯಮಿಥ್ಯ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ, ವರದಿಗಾರರಾಗಿ, ಕಾರ್ಯನಿರ್ವಹಿಸಿರುವ ಶ್ರೀಯುತರಿಗೆ ಈ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡಿರುವುದು ಸಂತಸದ ಸಂಗತಿ ಎಂದು ಪತ್ರಕರ್ತರು ಅಭಿನಂದಿಸಿದ್ದಾರೆ.
ಸಮಜಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಕಳಕೇಶ ಉಕ್ಕಿಸಲ ಆಯ್ಕೆ
೨೦೨೦-೨೦೨ ನೇ ಸಾಲಿನ ಸಮಾಜಸೇವಾ ರತ್ನ ೨ ಪ್ರಶಸ್ತಿಗೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಸಮಾಜ ಸೇವಕ ಯುವ ಮುಖಂಡ ಶೋಷಿತರ ಧ್ವನಿ ಎನಿಸಿರುವ ಕಳಕೇಶ ಉಕ್ಕಿಸಲ ಅವರು ಆಯ್ಕೆಯಾಗಿದ್ದಾರೆ. ಶ್ರೀಯುತಿರಿಗೆ ಡಿಸೆಂಬರ್ ೦೫ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ ಟಿಪ್ಪುವರ್ಧನ್ ತಿಳಿಸಿದ್ದಾರೆ.
ಸಮಾಜದ ವಿವಿಧ ರಂಗಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿರುವ ಕಳಕೇಶ ಉಕ್ಕಿಸಲ ರವರಿಗೆ ಸಮಾಜಸೇವಾರತ್ನ ರಾಜ್ಯ ಪ್ರಶಸ್ತಿ ದೊರೆತಿರುವುದು ಜಿಲ್ಲಿಗೆ ಸಂತಸ ತಂದಿದೆ.
