Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ

ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ

 

ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನವು ದಿನಾಂಕ 7, 8, 9, 10 – ಮೇ – 2026 ರಂದು ಕೊಪ್ಪಳದಲ್ಲಿ 4 ದಿನ ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಂಗಮAದಿರದಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಇದರ ನೆನಪಿಗಾಗಿ ಮತ್ತು 15 ವರ್ಷದೊಳಗಿನ ಮಕ್ಕಳಿಗಾಗಿ ಸಾಹಿತ್ಯ ಸ್ಪಧೆ ನಡೆಯಲಿದೆ.

2005 ರಿಂದ 2025 ರವರೆಗೆ, 15 ವರ್ಷದೊಳಗಿನ ಮಕ್ಕಳು ಬರೆದ, ಯಾವುದೇ ಪ್ರಾಕಾರದ ಪ್ರಕಟವಾದ ಸಾಹಿತ್ಯ ಕೃತಿಗಳಿಗೆ ಈ ಸ್ಪರ್ಧೆಗೆ ಅರ್ಹ. ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಈ ಸ್ಪರ್ಧೆ ನಡೆಯಲಿದ್ದು, ತಮ್ಮ ಕೃತಿಗಳ 3 ಪ್ರತಿಯೊಂದಿಗೆ, ವಯಸ್ಸಿನ ದಾಖಲೆ ಸಮೇತ ಸಂಪೂರ್ಣ ಬಯೋಡಾಟಾ, 2 ಭಾವಚಿತ್ರದೊಂದಿಗೆ ದಿನಾಂಕ 15-10-2026 ರೊಳಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು. ಆಯ್ಕೆಯಾದ ಮಕ್ಕಳಿಗೆ ಡಿಸೆಂಬರ್ 26-2026ರಲ್ಲಿ ಪ್ರಶಸ್ತಿ ಪ್ರದಾನವಿರುತ್ತದೆ.

ಸಂಸ್ಥೆಯ ವಿಳಾಸ : ಅಧ್ಯಕ್ಷರು, ಮಕ್ಕಳ ಸಾಹಿತ್ಯ ಕೃತಿ ಸ್ಪರ್ಧೆ ವಿಭಾಗ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿAಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸೆ್ತ, ಮಂಜುನಾಥನಗರ, ಬೆಂಗಳೂರು-560010. ಮೊ : 9845307327.

ಆಯ್ಕೆಯಾದ ಎಲ್ಲ ಕೃತಿಗಳಿಗೆ, ತಲಾ 2000 ರೂ. ನಗದು ಬಹುಮಾನದೊಂದಿಗೆ, ರಾಜ್ಯಮಟ್ಟದ “ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ”ಯ ಗೌರವವಿರುತ್ತದೆ. ವಿ.ಸೂ. : ಈ ಹಿಂದೆ ನಡೆದ 2005ರ ಸ್ಪಧೆಯಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದವರು ಕಳುಹಿಸುವಂತಿಲ್ಲ. ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Related posts

ಗದಗಕ್ಕೆ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ

satyadarshana

ಕನ್ನಡ ಜನಪದವು ವಾಣಿಜ್ಯೀಕರಣದತ್ತ ಸಾಗಲಿ : ಪ್ರೊ. ಚಂದ್ರಶೇಖರ ವಸ್ತ್ರದ

satyadarshana

ಜನತಾ ಜಲಧಾರೆಯ ಗಂಗಾ ರಥಗಳಿಗೆ ಹಸಿರು ನಿಶಾನೆ

satyadarshana

Leave a Comment