Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ರಾತ್ರಿ ಕಾಮಗಾರಿ.ಸರ್ಕಾರಿ ನಿಯಮಕ್ಕಿಲ್ಲ ಬೆಲೆ | ಅಕ್ರಮ ಕಂಡರೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು

ಭೂ ಪರಿವರ್ತಿಸದೇ ಪ್ಲಾಂಟ್ ಅಳವಡಿಕೆ: ಆರೋಪ

ಸರ್ಕಾರಿ ನಿಯಮಕ್ಕಿಲ್ಲ ಬೆಲೆ | ಅಕ್ರಮ ಕಂಡರೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು

ಯಲಬುರ್ಗಾ: ತಾಲೂಕಿನ ಮುಧೋಳ  ಗ್ರಾಪಂ ವ್ಯಾಪ್ತಿಯ

ಜಮೀನುಗಳಲ್ಲಿ ಖಾಸಗಿ ಪವನ ಶಕ್ತಿ ಕಂಪನಿಯೊಂದು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ವಿದ್ಯುತ್ ಸಂಪರ್ಕ ಕಾಮಗಾರಿ ಪ್ರಾರಂಭಿಸಿದೆ. ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಉಳುಮೆ ಭೂಮಿ ಅನ್ಯ ಕಾರ್ಯಕ್ಕೆ ಬಳಸುವಾಗ ಎನ್ಎ ಭೂಮಿಯನ್ನಾಗಿ ಪರಿವರ್ತನೆ ಮಾಡಿಸಬೇಕು. ಆದರೆ, ಇಲ್ಲಿ ಆ ಕೆಲಸವಾಗಿಲ್ಲ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವುದು ಸ್ಥಳೀಯರ ಗಂಭೀರ ಆರೋಪ.

ತಾಲೂಕಿನ ವಿವಿಧೆಡೆ ಲಗ್ಗೆ: ತಾಲೂಕಿನ   ಮುಧೋಳ ಕರಮಡಿ , ವಜ್ರಬಂಡಿ ಗ್ರಾಪಂ ವ್ಯಾಪ್ತಿಯ ಜಿ.ಜರಕುಂಟಿ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಪವನ ವಿದ್ಯುತ್ ಘಟಕಗಳಿವೆ. ಅವುಗಳಿಂದ ಉತ್ಪಾದನೆಯಾಗುವ ವಿದ್ಯುತ್ ಸಂಗ್ರಹಿಸಿ, ಬೇರೆಡೆ ಸ್ಥಳಾಂತರಿಸಲು ವಿದ್ಯುತ್ ಕಂಬ ಅಳವಡಿಸಲು ಎಸ್‌ಎಂಪಿ ಕನ್‌ಟ್ರಕ್ಷನ್ ಲಿಮಿಟೆಡ್ ಕಂಪನಿ ಗ್ರಾಮದ ಹಲವು ಕೃಷಿ ಜಮೀನಿನಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಕಾಮಗಾರಿ ಪ್ರಾರಂಭಿಸಿದೆ. ಪವನ್ ವಿದ್ಯುತ್ ಕಂಬಗಳನ್ನು ಹಾಕಲು ಬೇಕಾಗುವ ವಸ್ತುಗಳನ್ನು ಸಂಗ್ರಹಿಸಲು ವಿದ್ಯುತ್ ಸ್ಥಾವರಗಳ ನಿರ್ವಣಕ್ಕೆ ಬೇಕಾಗಿರುವ ಕಾಂಕ್ರೀಟ್ ಮಿಕ್ಸರ್(ಆರ್‌ಎಂಸಿ ಪ್ಲಾಂಟ್) ಅಳವಡಿಕೆಗೆ ರೈತರ ಕೃಷಿ ಭೂಮಿಯನ್ನು ಎರಡು ವರ್ಷ ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ.

ಯಾವುದೇ ಕೈಗಾರಿಕೆ ಪ್ರಾರಂಭಿಸಲು ವಿವಿಧ ಇಲಾಖೆಗಳಿಂದ

ನಿರಾಕ್ಷೇಪಣಾ ಪತ್ರಗಳನ್ನು ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ಸ್ಥಳೀಯ ಗ್ರಾಪಂನಿಂದ ಯಾವುದೇ ಪರವಾನಗಿ ಪಡೆದಿಲ್ಲ. ಪರವಾನಗಿ ಪಡೆಯದೇ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂನಿಂದ ಈಗಾಗಲೇ ನೋಟಿಸ್ ನೀಡಿದ್ದರೂ,

ಮುಧೋಳ ಗ್ರಾಮದ ರೈತರ ಕೃಷಿ ಜಮೀನಿನಲ್ಲಿ ಖಾಸಗಿ | ಪವನ ವಿದ್ಯುತ್ ಕಂಪನಿ ಆರ್‌ಎಂಸಿ ಪ್ಲಾಂಟ್ ಅಳವಡಿಕೆಗೆ ಕಾಮಗಾರಿ ಆರಂಭಿಸಿರುವ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲಿಸಿ ನೋಟಿಸ್ ನೀಡಲಾಗಿದೆ. ಆದರೂ, ಕಂಪನಿಯಿಂದ ಯಾವುದೇ ಉತ್ತರ ಬಂದಿಲ್ಲ. ಈ ಬಗ್ಗೆ ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ.

॥ ಗ್ರಾಮ ಆಡಳಿತ ಅಧಿಕಾರಿಗಳು, ಮುಧೋಳ

ಯಲಬುರ್ಗಾ ತಾಲೂಕಿನ ಮುಧೋಳ  ಗ್ರಾಮದ ಕೃಷಿ ಭೂಮಿಯಲ್ಲಿ ಆರ್‌ಎಂಸಿ ಪ್ಲಾಂಟ್ ಅಳವಡಿಸುತ್ತಿರುವುದು.

ಯಾವುದಕ್ಕೂ ಕ್ಯಾರೆ ಎನ್ನದೇ ತಮ್ಮ ಪಾಡಿಗೆ ತಾವು ಕಾಮಗಾರಿ ಮುಂದುವರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಸಗಿ ಕಂಪನಿಯು ಯಾವುದೇ ಅನುಮತಿ ಪಡೆದುಕೊಳ್ಳದೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದು ಕರ್ನಾಟಕ ಭೂ ಕಂದಾಯ

+ 2 ಡ ರೈತ ತಮ್ಮ ಜಮೀನಿನಲ್ಲಿ ವಾಸಕ್ಕೆ ಅಥವಾ ದನಕರುಗಳಿಗೆ ಶೆಡ್ ನಿರ್ಮಾಣ ಮಾಡಿಕೊಂಡು ವಿದ್ಯುತ್ ಸಂಪರ್ಕ ಸೇರಿ ಇತರ ಸೌಲಭ್ಯಗಳನ್ನು ಕೇಳಿದಾಗ. ಹತ್ತು ಹಲವು ಕಾನೂನುಗಳನ್ನು ಅಧಿಕಾರಿಗಳು ಹೇಳುತ್ತಾರೆ. ಆದರೆ, ಖಾಸಗಿ ಕಂಪನಿಯೊಂದು ತಾಲೂಕಿನ ವಿವಿಧ ಗ್ರಾಮಗಳ ರೈತರ ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೆ ಆರ್‌ಎಂಸಿ ಪ್ಲಾಂಟ್ ಅಳವಡಿಕೆಗೆ ಕಾಮಗಾರಿ. ನಡೆಸಿದ್ದಾರೆ. ಕೈಗಾರಿಕೆ ಪ್ರಾರಂಭಿಸುವ ಮುನ್ನ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ಅಕ್ಕ-ಪಕ್ಕದ ರೈತರು ಕಾಮಗಾರಿ ಪ್ರಾರಂಭ ಮಾಡುವುದಕ್ಕೆ ತಕರಾರು ಕೊಟ್ಟರೂ, ಖಾಸಗಿ ಕಂಪನಿಗಳ ಮೇಲೆ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ತಕ್ಷಣ ಕಾಮಗಾರಿ ನಿಲ್ಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. *

ಮಂಜುನಾಥ್ ಬುರುಡಿ  ಸಾಮಾಜಿಕ ಕಾರ್ಯಕರ್ತ, ಯಲಬುರ್ಗಾ

1964 500 950 9 9. ಸರ್ಕಾರದ ನಿಯಮಾವಳಿ ಗಾಳಿಗೆ ತೂರಿದ್ದಲ್ಲದೆ, ಸರ್ಕಾರಕ್ಕೆ ಕಟಬೇಕಾದ ವಿವಿಧ ಕರ ಪಾವತಿಸದೇ ಕಾಮಗಾರಿ ನಡೆಸದೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ-95ರ ಅಡಿ ನೋಟಿಸ್ ಜಾರಿಗೊಳಿಸಿದರೂ ಕಂಪನಿಯಿಂದಾಗಲಿ, ಜಮೀನಿನ ಮಾಲೀಕರಿಂದಾಗಲಿ ಸಂಬಂಧಪಟ್ಟ ಇಲಾಖೆಗೆ ಉತ್ತರ ನೀಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಕಂದಾಯ ಇಲಾಖೆ ಅಧಿಕಾರಿಗಳ ಮಾತು.

Related posts

ರಾಜೂರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ:ಹದಗೆಟ್ಟ ಚರಂಡಿ ವ್ಯವಸ್ಥೆ..

satyadarshana

ಗದಗ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನಾತ್ಮಕ ಸಭೆ.

satyadarshana

2026ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

satyadarshana

Leave a Comment