Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಬಾಬಾ ಸಾಹೇಬರ ಕಳೆದುಕೊಂಡ ಭಾರತ ಅನಾಥವಾಗಿದೆ: ಮಂಜು ಬುರುಡಿ

   ಬಾಬಾ ಸಾಹೇಬರ ಕಳೆದುಕೊಂಡ ಭಾರತ ಅನಾಥವಾಗಿದೆ:       ಮಂಜು ಬುರುಡಿ

ರೋಣ: ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಅನುಪಮ ಕೊಡಗೆ ನೀಡಿದ ಭಾರತೀಯ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಕಳೆದುಕೊಂಡ ಭಾರತ ಅನಾಥವಾಗಿದೆ.

ಶಿಕ್ಷಣ ಸಂಘಟನೆ ಹೋರಾಟದ ಮಾರ್ಗದಲ್ಲಿ ಸಮಾಜದ ಕಟ್ಟು ಕಡೆ ವ್ಯಕ್ತಿಗೂ ನ್ಯಾಯ ಒದಗಿಸಿದ ಮಹಾತ್ಮ ಯಾರಾದರೂ ಇದ್ದರೆ ಡಾ// ಬಾಬಾ ಸಾಹೇಬ ಅಂಬೇಡ್ಕರ ಆಗಿದ್ದಾರೆ ಅವರು ಬರೆದ ಸಂವಿಧಾನವು ಸರ್ವ ಧರ್ಮಗಳಿಗೂ ಸಮಭಾವ ಎಂಬ ಸಂದೇಶ ಸಂವಿಧಾನದ ಮುಖ್ಯ ಧ್ಯಯವಾಗಿದೆ.

ಸಮಾನತೆ ಸ್ವಾತಂತ್ರ್ಯಕ್ಕಾಗಿ ಅನೇಕ ನೋವುಗಳನ್ನು ಸಹಿಸಿಕೊಂಡು ಭಾರತ ದೇಶಕ್ಕೆ ಉತ್ತಮವಾದ ಸಂವಿಧಾನ ಬರೆದುಕೊಟ್ಟ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಕಳೆದುಕೊಂಡ ಭಾರತ ಅನಾಥವಾಗಿದೆ.

ಸಮಾಜದಲ್ಲಿ ಎಲ್ಲಾ ಯುವಕರು ಡಾ//ಬಾಬಾ ಸಾಹೇಬ ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟದ ಗುಣಗಳನ್ನು ಅಳವಡಿಸಿಕೊಳ್ಳಬೇಕು.

ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ.

ಎಂದು ಡಾ ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗ ಸಂಚಾಲಕ ಮಂಜು ಬುರುಡಿ ಅವರು ರೋಣ ನಗರದ ಲೋಕೋಪಯೋಗಿ ಇಲಾಖೆಯ ಪರಿವಿಕ್ಷಣಾ ಮಂದಿರದಲ್ಲಿ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಅವರ 68ನೇ ಪುಣ್ಯ ಸ್ಮರಣೆಯ ನಿಮಿತ್ಯ ಡಾ// ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಮೇಣದ ಬತ್ತಿ ಹಚ್ಚುವುದರ ಮೂಲಕ ಗೌರವ ಅರ್ಪಿಸಿದರು

Related posts

ಅಚಲ ಆತ್ಮವಿಶ್ವಾಸಕ್ಕೆ ಅತಿಥಿ  ಆಡಿ ತಪ್ಪುವೆನೆಂದು ಎಂದು  ಆಡುವುದು ಬಿಡಲಿಲ್ಲ.

satyadarshana

ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ

satyadarshana

ಸೋಮವಾರದಿಂದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ಮಕ್ಕಳಿಗೆ ಗುಲಾಬಿ ಹೂ, ಚಾಕೊಲೇಟ್‌ ನೀಡಿ ಸ್ವಾಗತ:

satyadarshana

Leave a Comment