Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗಜೇಂದ್ರಗಡ ಹೆಚ್ಚಿದ ಅಕ್ರಮ ಮರಳು ದಂಧೆ

ಗಜೇಂದ್ರಗಡ :ಹೌದು, ಗಜೇಂದ್ರಗಡ  ತಾಲೂಕಿನ ಸುತ್ತಮೂತ್ತಲಿರುವ ಮರಳು ಕಡ್ಡಾಗಳಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ಅಂತಹ ಮರಳು ಅಡ್ಡೆಗಳ ಮೇಲೆ ದಾಳಿ ಮಾಡುವ ಮೂಲಕ ಅಕ್ರಮ ಮರಳು ದಂಧೆ ತಡೆಯುವ ಕೆಲಸವಾಗಬೇಕಿದೆ.

ಅಧಿಕ ಬೆಲೆಗೆ ಅಕ್ರಮ ಮರಳು ಮಾರಾಟ: ಸರ್ಕಾರ ಮರಳು ನಿಯಮದ ಪ್ರಕಾರ ಮತ್ತು ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪಾಸ್‌ ಮೂಲಕ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಿದೆ. ಆದರೂ, ಅಕ್ರಮ ಮರಳು ದಂಧೆ ನಿರಂತರವಾಗಿ ತಾಲೂಕಿನಲ್ಲಿ ಎಲ್ಲೆಡೆ ನಿರಂತರವಾಗಿ ನಡೆಯುತ್ತಿದೆ. ಬಡ ಜನರಿಗೆ ಹೆಚ್ಚಿನ ಹಣಕ್ಕೆ ಮರಳು ಮಾರಾಟ ಮಾಡುವ ಮೂಲಕ ಹಣ ಸುಳಿಗೆ ಮಾಡುವ ಕೆಲಸ ನಡೆದಿದ್ದು, ಸೂಕ್ತ ಬೆಲೆಯಲ್ಲಿ ಮರಳು ಸಿಗದೆ ಜನರು ಪರದಾಡುವಂತಾಗಿದೆ.

ಹಲವು ವರ್ಷಗಳಿಂದ ಅಕ್ರಮ ಮರಳು ಮಾರಾಟ: ತಾಲೂಕಿನಲ್ಲಿ ಕಳೆದ ಹತ್ತು-ಹಲವು ವರ್ಷಗಳಿಂದ ಅಕ್ರಮ ಮರಳು ಸಾಗಾಣಿಕೆ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ತಾಲೂನಲ್ಲಿರುವ ಮರಳು ಸಾಗಾಣಿಕೆ ಅಡ್ಡೆಗಳಲ್ಲಿ ಮತ್ತಷ್ಟು ಅಕ್ರಮ ಮರಳು ಸಾಗಾಣಿಕೆ ಹೆಚ್ಚಾಗಿದ್ದು, ಕೂಡಲೇ ಸ್ಥಳೀಯ ಅಧಿ ಕಾರಿಗಳು ಎಚ್ಚೆತ್ತುಕೊಂಡು ಮರಳು ಅಡ್ಡಾಗಳ ಮೇಲೆ ದಾಳಿ ನಡೆಸುವ ಮೂಲಕ ಅಕ್ರಮ ಮರಳು ಸಾಗಾಣಿಕೆ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

 

Related posts

ಬಾಬಾ ಸಾಹೇಬ್ ಅಂಬೇಡ್ಕರ್ ಸರ್ವರಿಗೂ ಶಕ್ತಿ- ಸಂಸದ ಕೆ.ರಾಜಶೇಖರ ಹಿಟ್ನಾಳ

satyadarshana

ರೋಣ ಮತಕ್ಷೇತ್ರದ ಚುನಾವಣೆಯ ಸತ್ಯದರ್ಶನ.

satyadarshana

ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

satyadarshana

Leave a Comment