Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

70 ವರ್ಷಗಳಲ್ಲಿ ಆಗದ ಅಭಿವೃದ್ಧಿ 10 ವರ್ಷದಲ್ಲಿ ಆಗಿದೆ : ಡಾ. ಕ್ಯಾವಟರ್

ಕೊಪ್ಪಳ : ಕಳೆದ ಒಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೃಷಿ, ವಿಜ್ಞಾನ ತಂತ್ರಜ್ಞಾನ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿಯಾಗಿದೆ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೆ ಶರಣಪ್ಪ ಮಾತನಾಡಿದರು.

ಲೋಕಸಭಾ ಚುನಾವಣೆ ನಿಮಿತ್ತ ವಣಗೇರಿ ಹಾಗೂ ಮುಧೋಳ ಮಹಾಶಕ್ತಿ ಕೇಂದ್ರದಲ್ಲಿ ಕಲ್ಯಾಣ ಬಸವೇಶ್ವರ ದೇವಸ್ಥಾನ ಭೇಟಿ ನೀಡಿದ ನಂತರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ, ಮಂಗಳಯಾನ ಮತ್ತು ರೈತಹಿತ ಸೇರಿ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುವದರೊಂದಿಗೆ ಸರ್ವರನ್ನು ಹಿತ ಕಾಯುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದರು.

ಜಗತ್ತಿನ ಅತಿದೊಡ್ಡ ಆರ್ಥಿಕ ಕ್ಷೇತ್ರದಲ್ಲಿ ಭಾರತವು ಐದನೇ ಸ್ಥಾನಕ್ಕೇರಿದೆ. ಬರುವ ವರ್ಷಗಳಲ್ಲಿ 3 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಮೂಲಕ ಜಗತ್ತಿನ ಅತ್ಯಧಿಕ ದೊಡ್ಡ ಆರ್ಥಿಕತೆ ದೇಶ ಎಂದು ಹೊರಹೊಮ್ಮಲಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿದರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕೊಲೆಗಾರನ ಮನೆಗೆ ಭದ್ರತೆ ನೀಡುವ ಮೂಲಕ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.

ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಂತ್ರಿಯನ್ನಾಗಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ , ಮಾಜಿ ಸಚಿವ ಹಾಲಪ್ಪ ಆಚಾರ,

ಜೆಡಿಎಸ್ ಮುಖಂಡ ಮಲ್ಲನಗೌಡ ಕೋನಗೌಡ, ಬಸವರಾಜ ಗೌರಾ, ಶರಣಪ್ಪ ರಾವಣಕಿ, ಶಿವಶಂಕರ ದೇಸಾಯಿ, ಬಸಲಿಂಗಪ್ಪ, ಸೋಮಶೇಖರ್ ಗೌಡ್ರ, ಬಸವರಾಜ ಗುಳಗುಳಿ, ಶಿವಲೀಲಾ, ಅಮರೇಶ್ ಹುಬ್ಬಳ್ಳಿ, ಈಶ್ವಪ್ಪ, ಕೆಂಚಪ್ಪ ಹಳ್ಳಿ, ರಾಜಶೇಖರ್, ಶಿವಲೀಲಾ, ಕೊಟ್ರಪ್ಪ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

 

Related posts

ಮಹಾರಾಷ್ಟ್ರ ಬಿಕ್ಕಟ್ಟು ‘ಸುಪ್ರೀಂ’ಗೆ: ಭಿನ್ನರಿಗೆ ಶಿವಸೇನಾ ಬೆದರಿಕೆ

satyadarshana

ಸರ್ಕಾರಿ ಸಾವಲತ್ತುಗಳನ್ನು ಸಕಾಲದಲ್ಲಿ ಪಡೆದು ಮಹಿಳೆಯರು ಸಭಲರಾಗಿ-ಹಾಲಪ್ಪ ಆಚಾರ್.

satyadarshana

ನರೇಗಲ್‌ನಿಂದ ಗಡ್ಡಿ ಹಳ್ಳದವರೆಗೆ ರಸ್ತೆ ಸಂಚಾರಕ್ಕೆ ತೊಂದರೆ; ಒಂದೇ ವಾಹನ ಸಂಚಾರ

satyadarshana

Leave a Comment