Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸುರಕ್ಷಿತ ಗದಗ-ಬೆಟಗೇರಿಗಾಗಿ ಸ್ಮಾರ್ಟ ಪೋಲಿಸಿಂಗ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಥರ್ಡ-ಐ ಕಮಾಂಡ ಮತ್ತು ಕಂಟ್ರೋಲ ಸೆಂಟರ್ ಉದ್ಘಾಟಿಸಿದ ಗೃಹ ಸಚಿವರು

ಗದಗ: ಸೆ.8: ಕಾನೂನು ಸುವ್ಯವಸ್ಥೆ, ಅಪರಾಧಗಳ ತಡೆಗಟ್ಟುವಿಕೆ ಹಾಗೂ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿರ್ಮಿಸಲಾದ ಥರ್ಡ-ಐ ಕಮಾಂಡ ಮತ್ತು ಕಂಟ್ರೋಲ್ ಸೆಂಟರ ಅನ್ನು ಗೃಹಸಚಿವರಾದ ಡಾ.ಜಿ.ಪರಮೇಶ್ವರ ಅವರು ಶುಕ್ರವಾರದಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರು ಹೊರತುಪಡಿಸಿದರೆ ಜಿಲ್ಲಾ ಕೇಂದ್ರಗಳಲ್ಲಿ ಪ್ರಥಮ ಬಾರಿಗೆ ಥರ್ಡ-ಐ ಕಮಾಂಡ ಹಾಗೂ ಕಂಟ್ರೋಲ್ ಸೆಂಟರ ಜಾರಿಗೊಳಿಸಿದ ಜಿಲ್ಲೆ ಗದಗ ಆಗಿದೆ. ಈ ತಂತ್ರಜ್ಞಾನ ಅಳವಡಿಕೆಗಾಗಿ ಸಹಕಾರ ನೀಡಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರಿಗೆ ಅಭಿನಂದನೆಗಳು ಎಂದರು.

ಗದಗ ಜಿಲ್ಲಾ ಕೇಂದ್ರದಲ್ಲಿ ಅಪರಾದಗಳ ತಡೆಗಾಗಿ ಆಧುನಿಕ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆ ಅಳವಡಿಸಿಕೊಂಡು ಮುನ್ನಡೆಯುತ್ತಿರುವದು ಸಂತಸ ತಂದಿದೆ. ಮುಂದಿನ ಹತ್ತು ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಗದಗ-ಬೆಟಗೇರಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಉತ್ತಮ ಗುಣಮಟ್ಟದ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅವುಗಳ ಸಹಾಯದಿಂದ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಲು ಸಹಕಾರಿ ಅಲ್ಲದೇ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಿಕೆಯಲ್ಲಿಯೂ ತುಂಬಾ ಸಹಕಾರಿಯಾಗಲಿದೆ ಎಂದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಮಾತನಾಡಿ ಥರ್ಡ-ಐ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಉತ್ಸುಕತೆ ಹಾಗೂ ಮುತುವರ್ಜಿ ವಹಿಸಿ ಪ್ರತಿಯೊಂದು ಹಂತಗಳನ್ನು ಖುದ್ದಾಗಿ ಪರಿಶೀಲಿಸಿ ಜಾರಿಗೊಳಿಸಿದ್ದಾರೆ. ಈ ಥರ್ಡ-ಐ ಕಮಾಂಡ ಮತ್ತು ಕಂಟ್ರೋಲ್ ಸೆಂಟರನಿಂದ ಸಂಚಾರಿ ನಿಯಮಗಳ ಉಲ್ಲಂಘನ ಪ್ರಕರಣಗಳು ನಿಯಂತ್ರಣವಾಗಲಿ ಹಾಗೂ ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಈ ಯೋಜನೆ ಉಪಯುಕ್ತವಾಗಲಿ ಎಂದರು. ಗದಗ-ಬೆಟಗೇರಿ ನಗರ ವ್ಯಾಪ್ತಿಯಲ್ಲಿ ಅಳವಡಿಸಿದಂತೆ ಜಿಲ್ಲೆಯ ಎಲ್ಲ ನಗರಗಳಿಗೂ ವಿಸ್ತರಿಸಲು ಅಗತ್ಯವಿರುವ ಅನುದಾನವನ್ನು ಗೃಹ ಮಂತ್ರಿಗಳು ಒದಗಿಸುವಂತೆ ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಮಾತನಾಡಿ ಥರ್ಡ-ಐ ಪರಿಕಲ್ಪನೆಯ ಪ್ರತಿಯೊಂದು ಹಂತಗಳನ್ನು ಹಾಗೂ ಕಾರ್ಯಚಟುವಟಿಕೆಯನ್ನು ಸಚಿವರುಗಳಿಗೆ ವಿವರಿಸಿದರು. ಅಲ್ಲದೇ ಥರ್ಡ-ಐ ಕಮಾಂಡ ಮತ್ತು ಕಂಟ್ರೋಲ್ ಸೆಂಟರ್ ನಿರ್ವಹಣೆಗಾಗಿ ಪೊಲೀಸ್ ಇಲಾಖೆಯಲ್ಲಿನ ತಾಂತ್ರಿಕ ಪದವಿ ಪಡೆದ ಅಧಿಕಾರಿ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಥರ್ಡ-ಐ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಥರ್ಡ-ಐ ಯೋಜನೆಯ ಅನುಷ್ಠಾನಕ್ಕೆ ಹುರುದುಂಬಿಸಿ ಮಾರ್ಗದರ್ಶನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಹಾಗೂ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರಿಗೂ ಧನ್ಯವಾದ ಸಲ್ಲಿಸಿದರು.

ಈ ವೇಳೆ ಶಾಸಕರಾದ ಜಿ.ಎಸ್.ಪಾಟೀಲ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಸಿದ್ದರಾಮಪ್ಪ, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಸೇರಿದಂತೆ ಗಣ್ಯರು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಪ್ರತಿಯೊಬ್ಬರ ಜೀವನದಲ್ಲಿ ಗುರಿ ಮತ್ತು ಗುರು ಅನಿವಾರ್ಯ: ಸಚಿವ ಸಿ.ಸಿ.ಪಾಟೀಲ

satyadarshana

ಮಾರ್ಚ್ 28 ರಿಂದ ಸಾರಿಗೆ ನೌಕರರ ಅನಿರ್ದಾಷ್ಟವಾದಿ ಉಪವಾಸ ಸತ್ಯಾಗ್ರಹ.

satyadarshana

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಪ್ರತಿವರ್ಷ ಗೊರವಯ್ಯ ನುಡಿಯುವ ಕಾರಣಿಕವನ್ನು ವರ್ಷದ ಭವಿಷ್ಯವಾಣಿ..

satyadarshana

Leave a Comment