Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕಾಣೆಯಾದ ಮಗನನ್ನ ಹುಡುಕಿಕೊಟ್ಟವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ

 

ಗದ ಗ : ತಿಂಗಳಿಂದ ಕಾಣೆಯಾಗಿರೋ ಮಗುವನ್ನ ಹುಡುಕಿ ಕಂಗಾಲಾಗಿರೋ ಪೊಷಕರು, ಮಗುವನ್ನ ಹುಡುಕಿ ಕೊಟ್ಟವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ಕೊಡೋದಾಗಿ ಘೋಷಣೆ ಮಾಡಿದ್ದಾರೆ..

ಗದಗ ನಗರದ ಹೊಂಬಳನಾಕಾ ಜನತಾ ಕಾಲನಿ ನವಾಸಿ ಮೌಲಾ ಸಾಬ್, ಖಾಜಾಬಿ ದಂಪತಿಯ ಮಗ ಅಫ್ಜಲ್ ಕಾಣೆಯಾಗಿದ್ದಾನೆ.. ಮೇ ತಿಂಗಳ 30 ತಾರೀಕು ಮಧ್ಯಾಹ್ನ ಶಾಲೆಯಿಂದ ಬಂದಿದ್ದ ಅಫ್ಜಲ್ ಮನೆ ಪಕ್ಕ ಆಟವಾಡುತಿದ್ದ.. ಸಹೋದರನ ಮಗ ಸೇರಿ ಎಲ್ಲರೂ ಅಲ್ಲೇ ಆಟಾಡ್ತಿದ್ರು.. ಸಂಜೆಯಾಗ್ತಿದ್ದಂತೆ ಏಕಾ ಏಕಿ ಮಗು ನಾಪತ್ತೆಯಾಗಿತ್ತು.. ನಾಲ್ವರು ಮಕ್ಕಳಿದ್ದು ಚಿಕ್ಕವನು ಅಫ್ಜಲ್, ಅಫ್ಜಲ್ ಕಾಣೆಯಾದಾಗಿನಿಂದ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ.. ತಾಯಿ ಖಾಜಾಬಿ ಚಿಂತೆಯಲ್ಲೇ ಹಾಸಿಗೆ ಹಿಡಿದ್ದಾಳೆ.. ಹಿಂದೂ ದೇವರು ಸೇರಿದಂತೆ ಮಂದಿರ ಮಸೀದಿಗಳಲ್ಲಿ ಮೊರೆ ಇಟ್ಟಿದ್ದೇವೆ.. ಆದ್ರೆ ಮಗು ಪತ್ತೆಯಾಗಿಲ್ಲ, ಯಾರಿಗಾದ್ರೂ ಮಗು ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ಬಿಡಿ ಇಲ್ವೆ ನಮ್ಮನ್ನ ಸಂಪರ್ಕಿಸಿ ಅಂತಾ ನಾಪತ್ತೆಯಾದ ಬಾಲಕನ ತಂದೆ ಮೌಲಾ ಮನವಿ ಮಾಡಿಕೊಂಡಿದ್ದಾರೆ..

ಮೌಲಾ ಸಾಬ್ ಕುಟುಂಬ, ಪೊಲೀಸರಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ.. ಸಂಬಂಧಿಕರ ಊರುಗಳಲ್ಲೂ ಹುಟುಕಾಟ ನಡೆಸಿದ್ದೇವೆ.. ಸಣ್ಣ ಸುಳಿವೂ ಸಿಗ್ತಿಲ್ಲ.. ಕನ್ನಡ ಹಿಂದಿ ಮಾತ್ನಾಡೋ ಅಫ್ಜಲ್, ತಂದೆಯ ಫೋನ್ ನಂಬರ್ ನೆನಪಿಟ್ಟುಕೊಂಡಿದ್ದಾನೆ.. ಆದ್ರೆ ಮಗು ಈವರೆಗೂ ಕುಟುಂಬದ ಸಂಪರ್ಕಕ್ಕೆ ಸಿಕ್ಕಿಲ್ಲ.. ಹೀಗಾಗಿ ಬಹುಮಾನ ಘೋಷಣೆ ಮಾಡಿದ್ದು, ಮಗು ಕಂಡು ಬಂದಲ್ಲಿ ಮೌಲಾ ಸಾಬ್ (9741977678) ಅವರನ್ನ ಸಂಪರ್ಕಿಸಿ ಅಂತಾ ದಾವಲಖಾನವರ್ ಕುಟುಂಬ ಮನವಿ ಮಾಡಿಕೊಂಡಿದೆ..

Related posts

ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗಾಗಿದ್ದು ಆತ್ಮಹತ್ಯೆಯನ್ನು ಎಲ್ಲರೂ ಸೇರಿ ತಡೆಗಟ್ಟೋಣ ಕೆ. ಗುರುಪ್ರಸಾದ

satyadarshana

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನ ಅರಿವು ಹಾಗೂ ಮನಸ್ಥಿತಿ ಬದಲಾವಣೆ ಅಗತ್ಯ :ಜಿಲ್ಲಾ ನ್ಯಾ. ಬಸವರಾಜ

satyadarshana

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗಾಂಧೀಜಿ ಗ್ರಾಮ ಸ್ವರಾಜ್ಯ ಕನಸನ್ನು ನನಸಾಗಿಸಲು ಶ್ರಮಿಸೋಣ.ವೈಶಾಲಿ ಎಂ.ಎಲ್

satyadarshana

Leave a Comment