Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ವಾ.ಕ.ರ.ಸಾ.ಸಂಸ್ಥೆಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಗದಗ:  ಅ.10: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ರವಿವಾರದಂದು ಮಹರ್ಷಿ ವಾಲ್ಮೀಕಿರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

  ಕಾರ್ಯಕ್ರಮದಲ್ಲಿ ಮಾತನಾಡಿದ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಆರ್.ಕಿರಣಗಿ ಅವರು, ಮಹರ್ಷಿ ವಾಲ್ಮೀಕಿ,ಯವರು ರಚಿಸಿದ ರಾಮಾಯಣವು ಇಡಿ ಜಗತ್ತಿಗೆ ಆದರ್ಶ ಹಾಗೂ ಸಾಂಸ್ಕøತಿಕ ಮೌಲ್ಯವನ್ನು ತಿಳಿಸುವ ಶ್ರೇಷ್ಠ ಮಹಾಕಾವ್ಯವಾಗಿದೆ ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶಶಿಧರ ಕುಂಬಾರ, ಮುಖ್ಯ ಕಾಮಗಾರಿ ಅಭಿಯಂತರರಾದ ಪ್ರಕಾಶ್ ಕಬಾಡಿ , ವಿ.ಎಫ್.ವಿಜಾಪೂರ, ಅರುಣ ಮುಶಣ್ಣವರ, ರಾಜು ಮಹೇಂದ್ರಕರ್, ಕಾರ್ಮಿಕ ಮುಖಂಡರಾದ ಆರ್.ಎಫ್.ಕವಳಿಕಾಯಿ ಕೇಂದ್ರ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರುಪಾಕ್ಷ ಕಟ್ಟಿಮನಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Related posts

2026ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

satyadarshana

ಕುಡಿಯುವ ನೀರು, ಮೇವು, ಉದ್ಯೋಗಕ್ಕೆ ಮೊದಲ ಆದ್ಯತೆ: ಪ್ರಕೃತಿ ವಿಕೋಪ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ನಿರ್ದೇಶನ

satyadarshana

ಕರಾಟಯಲ್ಲಿ ಕಂಟಿಗೆ ಚಿನ್ನಾ, ಸವಣೂರಿಗೆ ಬೆಳ್ಳಿ

satyadarshana

Leave a Comment