Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಅವ್ಯವಸ್ಥೆಯ ಆಗರ ಗಜೇಂದ್ರಗಡ ಬಸ್ ನಿಲ್ದಾಣ -ಜಯ ಕರ್ನಾಟಕ ಸಂಘಟನೆಯಿಂದ ಹೋರಾಟ.

 

ಗಜೇಂದ್ರಗಡಸತ್ಯ ದರ್ಶನ

 ಗಜೇಂದ್ರಗಡದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆಯಿಲ್ಲದೆ ರಾತ್ರಿವೇಳೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆಮಾಡಿ ದುಡ್ಡು ಒಡವೆ ವಸ್ತುಗಳನ್ನು ದೋಚಿದ ಅಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಖಂಡಿಸಿ ಇಂದು ಜಯಕರ್ನಾಟಕ ಸಂಘಟನೆಯ ಗಜೇಂದ್ರಗಡ -ರೋಣ ತಾಲೂಕು ಘಟಕದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು.

     ನಗರದ ಪ್ರಮುಖ ಬೀದಿಗಳಲ್ಲಿ ಹಲವಾರು ಜನ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ವಾ.ಕ.ರ.ರಾ.ಸಾ.ಸಂಸ್ಥೆ ವಿರುದ್ಧ ಘೋಷಣೆ ಕೂಗುತ್ತಾ ನಿಲ್ದಾಣದಲ್ಲಿ ಜಮಾವಣೆಗೊಂಡು ನಿಲ್ದಾಣದ ಅವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿದರು. ಜಯಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ಕಳಕಪ್ಪ ಫೋತಾ ಮಾತನಾಡಿ ಗಜೇಂದ್ರಗಡ ಬಸ್ ನಿಲ್ದಾಣವು ಬಹುತೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಸಿ.ಸಿ. ಕ್ಯಾಮರಾ ಇಲ್ಲದೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ, ಅಲ್ಲದೆ ಸಿ. ಸಿ.ರಸ್ತೆ ಕಾಮಗಾರಿ ಪೂರ್ಣಗೊಳ್ಳದ್ದರಿಂದ ಸಾರ್ವಜನಿಕರು ಬಯಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ರೋಗಗಳ ತಾಣವಾಗಿ ಮಾರ್ಪಟ್ಟಿದೆ ಹಾಗೂ ಗುಜರಿಗೆ ಹೋಗುವ ಬಸ್ಸುಗಳನ್ನೇ ಚಾಲನೆಗೆ ಕಳುಹಿಸಿ ಅಪಘಾತ ಸಂಭವಿಸಿದ ಚಾಲಕನ ನಿರ್ಲಕ್ಷ್ಯದಿಂದ ಅಪಘಾತವಾಗಿದೆ ಎನ್ನುವ ಅಧಿಕಾರಿಗಳು ಸಿಬ್ಬಂದಿಗಳಿಗೂ ತೊಂದರೆ ನೀಡುತ್ತಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ, ಬಸ್ ನಿಲ್ದಾಣದ ಸುತ್ತಲು ವಿದ್ಯುದ್ದೀಪಗಳ ವ್ಯವಸ್ಥೆ ಸರಿಯಿಲ್ಲದ್ದರಿಂದ “ಜಂಗಲ್ ಬಸ್ ನಿಲ್ದಾಣ” ದಂತೆ ಗೋಚರಿಸುತ್ತಿದೆ ಎಂದು ಆಪಾದಿಸಿದರು.

          ಈ ಎಲ್ಲ ಸಮಸ್ಯೆಗಳನ್ನು 15 ದಿನದೊಳಗಾಗಿ ಸರಿಪಡಿಸದಿದ್ದರೆ ಜಯಕರ್ನಾಟಕ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

      ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗಜೇಂದ್ರಗಡ ಡಿಪೋ ಮ್ಯಾನೇಜರ್ ಚಂದ್ರು ಲೋಕಂಡೆ,ಜಿಲ್ಲಾ ನಿಯಂತ್ರಣ ಅಧಿಕಾರಿಯವರ ಜೊತೆ ದೂರವಾಣಿ ಮುಖಾಂತರ ಹೋರಾಟಗಾರರ ಜೋತೆ ಮಾತನಾಡಿಸಿದರು ಶೀಘ್ರದಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆಯ ಮೇರೆಗೆ ಹೋರಾಟವನ್ನು ಹಿಂತೆಗೆಯಲಾಯಿತು.

     ಈ ಸಂದರ್ಭದಲ್ಲಿ ಶರಣಪ್ಪ ಚೌವ್ಹಾಣ,ಶರಣು ಹಲಗಿ, ವೀರಣ್ಣ ಸಾಕಾ, ಶಂಕರ್ ಚೌಹಾಣ್, ಅಬ್ದುಲ್ ರಜಾಕ್ ಸರ್ಕಾವಸ್, ಶಿವಣ್ಣ ತುಂಬರಗುದ್ದಿ, ಪ್ರಕಾಶ ಚಪ್ಪರದ, ಲಿಂಗರಾಜ ಮೂಗನೂರ, ಉಮೇಶ್ ಕಲಮಶೆಟ್ಟಿ, ಶಿವಪ್ಪ ಹಲಗೇರಿ,ಸುರೇಶ ಚೌಹಾಣ, ಮಹಮ್ಮದ್ ಗೌಸ್ ಅಕ್ಕಿ, ರಮೇಶ ತಳವಾರ, ಮಹಮ್ಮದ ಮೊಮೀನ್,ಶರಣಪ್ಪ ಗೂಳಿ,ಕರಿಯಪ್ಪ ಮಾದರ್ ಸೇರಿದಂತೆ ಹಲವಾರು ಸಂಘಟನೆಯ ಯುವಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

 

Related posts

ವಾಂತಿ ಬೇಧಿ ಪ್ರಕರಣ: ಕರ್ತವ್ಯಲೋಪದಡಿ ಬಸರಿಹಾಳ, ಬಿಜಕಲ್ ಪಿಡಿಓ ಅಮಾನತ್ತು

satyadarshana

ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ

satyadarshana

ಜಿ ಎಸ್ ಪಾಟೀಲ್ ಸಚಿವ ಸ್ಥಾನ ನೀಡಲು ಒತ್ತಾಯ.

satyadarshana

Leave a Comment