Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಮಾಂತೇಶ ಚೊಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ.

ಬಾಗಲಕೋಟೆ: ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ವಕೀಲೆ  ಜಗಳವಾಡಿರುವ ಘಟನೆ ಬಾಗಲಕೋಟೆಯ ವಿನಾಯಕ ನಗರದಲ್ಲಿ ಸಂಭವಿಸಿದೆ. ಜಗಳದಲ್ಲಿ ವಕೀಲೆ, ಕುಟುಂಬಸ್ಥರು ಹಾಗೂ ಇನ್ನೋರ್ವ ವ್ಯಕ್ತಿ ಮಧ್ಯೆ ಮಾರಾಮಾರಿ ನಡೆದಿದೆ. ಈ ವೇಳೆ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಂತೇಶ ಚೊಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ನಡೆಸಿದ್ದಾರೆ.

ನನ್ನ ಪತಿ ಹಾಗೂ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿಸಿದ್ದಾರೆ. ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಕಾಲು ಎದೆ ಭಾಗ, ತಲೆಗೆ ಪೆಟ್ಟಾಗಿದೆ. ನನ್ನ ಪತಿಗೆ ಕಿವಿ ಹಾಗೂ ತಲೆಗೆ ಗಾಯವಾಗಿದೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆ ಎಂದು ವಕೀಲೆ ದೂರಿದ್ದಾರೆ.

ವಿವಾದದಲ್ಲಿ ಇದ್ದ‌ ಮನೆ:

ಬಾಗಲಕೋಟೆಯ ವಿನಾಯಕ ನಗರದ 3 ನೇ ಕ್ರಾಸ್​ನಲ್ಲಿರುವ ವಕೀಲೆ ಸಂಗೀತಾ ಶಿಕ್ಕೇರಿ ಮನೆಯ ಕಂಪೌಂಡ್​ನ ಜೆಸಿಬಿಯಿಂದ ಬೆಳಗಿನ ಜಾವ ಧ್ವಂಸ ಮಾಡಲಾಗಿದೆ. ಸಂಗೀತಾ ದೊಡ್ಡಪ್ಪ ಹನುಮಂತ ಶಿಕ್ಕೇರಿ ಅವರಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಬಂದಿದೆ. ಸಂಗೀತಾ ಶಿಕ್ಕೇರಿ ತಾಯಿ ಶಾರದಾ ಶಿಕ್ಕೇರಿ, ಶುವಿತಾ ಶಿಕ್ಕೇರಿ ಹಾಗೂ ಹನುಮಂತ ಶಿಕ್ಕೇರಿ ಎಂಬುವರ ಮಧ್ಯೆ ವಿವಾದ ಇತ್ತು. ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಹಾಗೂ ದೆಹಲಿ ಸುಪ್ರೀಮ್ ಕೋರ್ಟ್​ನಲ್ಲಿ ಮನೆ ವಿವಾದ ವಿಚಾರಣಾ ಹಂತದಲ್ಲಿತ್ತು. ಬಾಗಲಕೋಟೆ ಹಿರಿಯ ನ್ಯಾಯಾಧೀಶರು ಯಥಾ ಸ್ಥಿತಿ ಕಾಪಾಡುವಂತೆ ಸ್ಟೇ ಇದೆ. ಸ್ಟೇ ಇದ್ದಾಗಲೂ ಕೃತ ಎಸಗಿದ್ದಾರೆ ಎಂದ ಎಂದು ಸಂಗೀತಾ ಆರೋಪಿಸಿದ್ದಾರೆ. ವಿದ್ಯುತ್ ಕಟ್ ಮಾಡಿಸಿ ನೀರು ಸರಬರಾಜು ಬಂದ್ ಮಾಡಿಸಿ ಮನೆ ಕಂಪೌಂಡ್ ಕೆಡವಿದ್ದಾರೆ ಎಂದು ದೊಡ್ಡಪ್ಪ ಹನುಮಂತ ಶಿಕ್ಕೇರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Related posts

ಮಕ್ಕಳ ಜೊತೆಗೂಡಿ ಸರತಿ ಸಾಲಿನಲ್ಲಿ ಕುಳಿತು ಊಟ ಮಾಡಿ ಸರಳತೆ ಮೆರೆದ ಸಿಇಓ ಭರತ ಎಸ್

satyadarshana

ತಂದೆಗೆ ತಕ್ಕ ಮಗ’ ಪುನೀತ್ ರಾಜ್‌ಕುಮಾರ್ ಅಪ್ಪನ ಹೆಸರನ್ನು ಉಳಿಸಿ ಬೆಳೆಸಿ ಹೊರಟ

satyadarshana

ಸಾಮಾಜಿಕ ನ್ಯಾಯದ ಸಮರ್ಥ ಶಕ್ತಿ ಡಾ. ಬಿ.ಆರ್. ಅಂಬೇಡ್ಕರ್

satyadarshana

Leave a Comment