ಹುಬ್ಬಳ್ಳಿ: ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ವಾರ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸಿನೆಮಾಗಳಿಗೆ ಯಾವುದೇ ಭಾಷೆಗಳಿಲ್ಲ, ನಟರು ಈ ವಿಚಾರಕ್ಕೆ ಹೋಗಬಾರದು ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನೆಮಾ ಎನ್ನುವುದು ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರ. ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಅದರದೇ ಆದ ಸ್ಥಾನ ಮಾನಗಳು ಇರುತ್ತದೆ. ಆದರೆ ಹಿಂದಿ ಹೆರಿಕೆ ಒತ್ತಡ ತಂತ್ರ ಸರಿಯಲ್ಲ ಎಂದರು.
ಇನ್ನು ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧಿಸಿದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ಅವಳು ರಾಜಕೀಯ ಕೃಪಾ ಕಟಾಕ್ಷದಲ್ಲಿ ಇದ್ದಾಳೋ ಗೊತ್ತಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಯಾರ ಕಣ್ಣಿಗೂ ಸಿಗದೇ ಇರುವುದರಲ್ಲಿಯೇ ಅವರೆಷ್ಟು ಶಕ್ತಿಶಾಲಿ ಅನ್ನೋದು ಗೊತ್ತಾಗುತ್ತದೆ ಎಂದರು.
ದಿನಾಂಕ 28.04.2022 ರಂದು ಹುಬ್ಬಳ್ಳಿ ನಗರದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಗಜೇಂದ್ರಗಡ ಜೆಡಿಎಸ್ ತಾಲ್ಲೂಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಮ್ ವಾಯ್ ಮುಧೋಳ (ಸಾಗರ್) ಅವರು ಭೇಟಿಯಾಗಿ ರೋಣ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಮತ್ತು ಹಲವು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
