Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಜನತಾ ಜಲಧಾರೆಯ ಗಂಗಾ ರಥಗಳಿಗೆ ಹಸಿರು ನಿಶಾನೆ

ರಾಮನಗರ, ಏ.13- ಜೆಡಿಎಸ್ ಪಕ್ಷದ ಮಹತ್ವದ ಜನತಾ ಜಲಧಾರೆ ಕಾರ್ಯಕ್ರಮದ 15 ಗಂಗಾ ರಥಗಳಿಗೆ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರು ಹಸಿರು ನಿಶಾನೆ ತೋರಿದರು. ರಾಮನಗರದ ಗ್ರಾಮ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಈ ಗಂಗಾ ರಥಗಳಿಗೆ ಚಾಲನೆ ನೀಡಿದರು.

ಜನತಾ ಜಲಧಾರೆಯ 15 ರಥಗಳಿಗೆ ಕಳಸ ಪ್ರತಿಷ್ಠಾಪನೆ ಮಾಡಿ, ನೀರಾವರಿ ಯೋಜನೆಯ ವಿವರವನ್ನು ರಥಗಳ ಮೇಲೆ ಪ್ರದರ್ಶಿಸಲಾಗಿದೆ. ರಾಜ್ಯದ 31 ಜಿಲ್ಲಾಗಳ 94 ಸ್ಥಳಗಳಲ್ಲಿ ಇರುವ ಪ್ರಮುಖ ನದಿ ಹಾಗೂ ಉಪ ನದಿಗಳಲ್ಲಿ ನೀರನ್ನು ಈ ರಥಗಳ ಮೂಲಕ ಸಂಗ್ರಹಿಸಲಾಗುತ್ತದೆ

ಎಲ್ಲಾ ರಥಗಳು ಮೇ 8 ರೊಳಗೆ ಬೆಂಗಳೂರಿಗೆ ತಲುಪಲಿವೆ. ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದ ಬಳಿ ಬೃಹತ್ ಕಳಸ ಸ್ಥಾಪನೆ ಮಾಡಿ ಅಲ್ಲಿ ಎಲ್ಲಾ ಜಿಲ್ಲಾಗಳಿಂದ ತರುವ ನೀರನ್ನು ಇಟ್ಟು ಮುಂದಿನ ಚುನಾವಣೆವರೆಗೂ ಪೂಜೆ ಸಲ್ಲಿಸಲಾಗುತ್ತದೆ. ರಾಜ್ಯದ 180 ತಾಲೂಕುಗಳಲ್ಲಿ ಈ ರಥಗಳು ಪ್ರವಾಸ ಮಾಡಲಿವೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ಸಿ.ಎಂ.ಇಬ್ರಾಹಿಂ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಸೇರಿದಂತೆ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts

ಗೌತಮ ಬುದ್ದ ಏಷಿಯಾದ ಬೆಳಕು: ಕೆ ರಾಘವೇಂದ್ರ ಹಿಟ್ನಾಳ

satyadarshana

ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ

satyadarshana

ಅಂತರರಾಷ್ಟ್ರೀಯ ಕ್ರಿಕೆಟಿಗ ಸುನಿಲ್ ಜೋಶಿ ಮನವಿಗೆ ಸಾರಿಗೆ ಸಚಿವ ರಾಮುಲು ಸ್ಪಂದನೆ..

satyadarshana

Leave a Comment