Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ದೀಪಾವಳಿ ಹಬ್ಬದಂದು ದುರಂತ ಒಂದೇ ಕುಟುಂಬದ 4 ತಿಂಗಳ ಮಗು ಸೇರಿ ಮೂವರು ಆತ್ಮಹತ್ಯೆ.

ಸತ್ಯ ದರ್ಶನ
 ಗಜೇಂದ್ರಗಡ ದೀಪಾವಳಿ ಹಬ್ಬದಂದು ದುರಂತ ಘಟನೆಯೊಂದು ನಡೆದಿದ್ದು, ಮೂರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಬೆಳಕಿನ ಹಬ್ಬ ದೀಪಾವಳಿ ಹಬ್ಬದ ದಿನದಂದೇ ರಾಜ್ಯದಲ್ಲಿ ಐದು ಮಂದಿ ಆತ್ಮಹತ್ಯೆಗೆ ಶರಣಾದರೆ, ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹೌದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಮೂವರು ಸಾವಿಗೆ ಶರಣಾದ ಘಟನೆ ಬುಧವಾರ ನಡೆದಿದೆ.
ಗ್ರಾಮದ ಮಲ್ಲಪ್ಪ ಗೋವಿಂದಪ್ಪ ಗಡಾದ್‌(26), ಸುಧಾ ಮಲ್ಲಪ್ಪ ಗಡಾದ್‌(22) ಹಾಗೂ 4 ತಿಂಗಳ ಮಗು ಮೃತರು. ಗ್ರಾಮದ ತಮ್ಮ ಜಮೀನಿನಲ್ಲಿರುವ ಮನೆ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದು ಮಲ್ಲಪ್ಪ ಗಡಾದ್‌ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು, ಪತ್ನಿ ಹಾಗೂ ಮಗು ಶವ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದು, ಪೊಲೀಸ್‌ ತನಿಖೆಯಿಂದಲೇ ಘಟನೆ ವಿವರ ಹೊರಬರಬೇಕಿದೆ. ಸದ್ಯಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಹೇಳಲಾಗಿದೆ.

Related posts

“ಅಪಾಯಕಾರಿ ನ್ಯೂಮೋನಿಯಾ ಬ್ಯಾಕ್ಟೀರಿಯಾ ಲಸಿಕೆಯನ್ನು (ಪಿಸಿವಿ) ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು’ ಸಿಇಒ ಭರತ್‌ ಎಸ್‌. ಮನವಿ

satyadarshana

ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ಅಕ್ರಮ ಮದ್ಯ ಸಾಗಾಣಿಕೆ : ಸಂಪರ್ಕಕ್ಕೆ ಸಿಗದ ಅಬಕಾರಿ ನಿರೀಕ್ಷಿಕರು

satyadarshana

ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂದಲ್ಲಿ ಕೋಟಿ ಕಂಠ ಗಾಯನದ ತಾಲೀಮು

satyadarshana

Leave a Comment