Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ರಾಜಧಾನಿಯಲ್ಲಿ‌ ನಡೆದಿದ್ದ ‘ಬೃಹತ್ ಐಟಿ ದಾಳಿ‌’ಯಲ್ಲಿ ಬಯಲಾದ ಅಕ್ರಮ ಎಷ್ಟು ಗೊತ್ತೇ.?

ಬೆಂಗಳೂರು: ರಾಜಧಾನಿಯಲ್ಲಿ‌ ನಡೆದಿದ್ದ ಬೃಹತ್ ಐಟಿ ದಾಳಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ನಡೆಸಿದ ಐಟಿ ದಾಳಿಯಲ್ಲಿ 750 ಕೋಟಿ ಆಕ್ರಮ‌ ಆದಾಯ ಪತ್ತೆಯಾಗಿದ್ದು ಇದರಲ್ಲಿ ಒಟ್ಟು 487 ಕೋಟಿ ಆಕ್ರಮ‌ ನಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಹೈವೆ ಪ್ರಾಜೆಕ್ಟ್, ಹಾಗೂ ನೀರಾವರಿ ಇಲಾಖೆ ಸಂಬಂಧ ದಾಳಿ ನಡೆದಿತ್ತು.. ದಾಳಿಯಲ್ಲಿ 4.69 ಕೋಟಿ ನಗದು, 8.62 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 29.83 ಕೋಟಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಬೋಕಸ್ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರದ‌ ಗುತ್ತಿಗೆ‌ ಪಡೆಯುತ್ತಿದ್ದ ಕಂಪನಿಗಳು ಕಾರ್ಮಿಕರಿಗೆ ನೀಡಿದ‌ ಹಣದಲ್ಲಿ ಅವ್ಯವಹಾರ ನಡೆಸಿದ್ದವು ಎಂಬ ಆರೋಪ ಕೇಳಿಬಂದಿದೆ. ಒಂದು ಗುತ್ತಿಗೆಯನ್ನು ಕಂಪನಿ 40 ಮಂದಿಗೆ ಸಬ್ ಕಂಟ್ರಾಕ್ಟರ್​ಗಳಿಗೆ ನೀಡಿದೆ ಎನ್ನಲಾಗಿದೆ. ತನಿಖೆ ವೇಳೆ ಪ್ರತಿಯೊಬ್ಬರೂ ದಾಖಲೆಗಳನ್ನು ತಿದ್ದಿ ಗುತ್ತಿಗೆ ಪಡೆದಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಟಿ ಇಲಾಖೆ ಹೇಳಿದೆ.

Related posts

ಅಯೋಧ್ಯೆ ರಾಮಜನ್ಮ ಭೂಮಿ ಮಾದರಿಯಲ್ಲಿ ಸರ್ಕಾರದ ಹೊಸ ತಂತ್ರ​?

satyadarshana

ಸ್ವಗ್ರಾಮ ಫೆಲೋಶಿಪ್ ಲೋಕಾರ್ಪಣೆ ಸಮಾರಂಭ ಗ್ರಾಮಗಳ ವಿಕಾಸ ಸ್ವಾವಲಂಭನೆಯಲ್ಲಿ ಸ್ವಗ್ರಾಮ ಫೆಲೋಶಿಪ್ ಅನುಕೂಲಕರ.ವಿ.ಆರ್.ಎಲ್ ಸಮೂಹದ ಅಧ್ಯಕ್ಷ ವಿಜಯ ಸಂಕೇಶ್ವರ .

satyadarshana

ಅಕ್ರಮ ಮರಂ ಗಣಿಗಾರಿಕೆ ಹೇಳೋರಿಲ್ಲ ಕೇಳೋರಿಲ್ಲ ಕಣ್ಣು ಮುಚ್ಚಿ ಕುಂತ ಅಧಿಕಾರಿಗಳು.

satyadarshana

Leave a Comment