Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಹೊಸ ಮನೆ ಕಟ್ಟಲು ಮಾಡಿದ್ದ ಸುಮಾರು 20 ಲಕ್ಷ ರೂಪಾಯಿ ಸಾಲ ಮತ್ತು ಪತಿ ಕೊರೊನಾದಿಂದ ಮೃತಪಟ್ಟಿದ ಬಳಿಕ ಧೃತಿಗೆಟ್ಟಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಭಾರೀ ದುರಂತ ಸಂಭವಿಸಿದೆ

ಸುದ್ದಿಮೂಲ. ಸತ್ಯದರ್ಶನ

ಗದಗ: ರಾಜ್ಯದಲ್ಲಿ ಸಾಮೂಹಿಕ ಆತ್ಮಹತ್ಯೆಗಳ ಸರಣಿ ಮುಂದುವರಿದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಕುಟುಂಬದಲ್ಲಿ ಭಾರೀ ದುರಂತ ಸಂಭವಿಸಿದೆ. ತನ್ನ ಮೂವರು ಮಕ್ಕಳ ಜತೆ ಮಲಪ್ರಭಾ ನದಿಗೆ ಹಾರಿದ ತಾಯಿ ಆತ್ಮಹತ್ಯೆ ಯತ್ನದಲ್ಲಿ ಸಾವನ್ನು ಕಂಡಿದ್ದಾಳೆ. ಜೊತೆಗೆ ಒಂದು ಮಗೂ ಸಹ ಜಲ ಸಮಾಧಿಯಾಗಿದ್ದು, ತಾಯಿ ಕೈಯಿಂದ ತಪ್ಪಿಸಿಕೊಂಡ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ.

 

ಸಾಮೂಹಿಕ ಆತ್ಮಹತ್ಯೆ ಪ್ರಯತ್ನದಲ್ಲಿ 8 ವರ್ಷದ ಹೆಣ್ಣು ಮಗು, ತಾಯಿ ಉಮಾದೇವಿ(45) ಜಲ ಸಮಾಧಿಯಾಗಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ! ಹೊಳೆಆಲೂರು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

 

ಉಮಾದೇವಿ ₹25 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸುತ್ತಿದ್ದಾರೆ. ಮನೆಗೆ ಅಂತ ₹6-7 ಲಕ್ಷ ಸಾಲ ಮಾಡಿದ್ದಾರೆ. ಮನೆಯಲ್ಲಿ ಗಂಡಸರು ಇಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯದರ್ಶನ ಪತ್ರಿಕೆ ವರದಿ  ಪ್ರವೀಣ್ ಮಾಹಿತಿ ನೀಡಿದ್ದಾರೆ.

 

3 ತಿಂಗಳ ಹಿಂದೆ ಕೊವಿಡ್​ಗೆ ಬಲಿಯಾಗಿದ್ದ ಉಮಾದೇವಿ ಪತಿ:

ಉಮಾದೇವಿ ಕುಟುಂಬ ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. 3 ತಿಂಗಳ ಹಿಂದೆ ಕೊವಿಡ್‌ನಿಂದ ಉಮಾದೇವಿ ಪತಿ, ಹೈಸ್ಕೂಲ್ ಶಿಕ್ಷಕ ಸಂಗಮೇಶ ಚಲ್ಲಿಕೇರಿ ಸಾವಿಗೀಡಾಗಿದ್ದರು. ಇದರಿಂದ ಬೇಸತ್ತು ಮಕ್ಕಳ ಜತೆ ತಾಯಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ 12 ಮತ್ತು 14 ವರ್ಷದ ಇಬ್ಬರು ಮಕ್ಕಳು ಪಾರಾಗಿದ್ದಾರೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

ಬದುಕುಳಿದ ಒಬ್ಬ ಮಗಳು ಗದಗನಲ್ಲಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸ್ಥಳಕ್ಕೆ ದೌಡಾಯಿಸಿದ ರೋಣ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ತಾಯಿ, ಮಗುವಿಗೆ ಶೋಧ ನಡೆಸಿದ್ದಾರೆ.

 

 

Related posts

ಯಲಬುರ್ಗಾ ತಾಲೂಕಿನ ನ್ಯಾಯಾಂಗಕ್ಕೆ ಹೊಸ ಗರಿ; ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ

satyadarshana

ಬೆಳೆ ನಷ್ಟದಿಂದ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ..

satyadarshana

ಉದ್ಯಮಶೀಲತಾಭಿವೃದ್ಧಿ ಪ್ರೇರಣಾ ತರಬೇತಿ ಕಾರ್ಯಕ್ರಮ ಉದ್ಘಾಟನೆ » ಪ್ರಶಾಂತ ವರಗಪ್ಪನವರ

satyadarshana

Leave a Comment