Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸಾಹಿತಿಯೊಂದಿಗೆ ಸಂವಾದ

ಗಜೇಂದ್ರಗಡ “”ಸಾಹಿತ್ಯ ಎಲ್ಲರ ಮನದಲ್ಲಿ ಬೆಳೆಯುವ ಹಿರೇವಲವಲ್ಲ ಕೆಲವರ ಮನದಲ್ಲಿ ಅರಳುವ ಮಂದಾರ ಪುಷ್ಪ”” ಜಾನಪದ ಗಾರುಡಿಗ ಬಾಗಲಕೋಟೆಯ ಸಾಹಿತಿ ಬಸವರಾಜ್ ಕೊಣ್ಣೂರ್ ಹೇಳಿದರು ಮುಕ್ತಿ ವಾಹಿನಿ ಆತ್ಮಕಲ್ಯಾಣ ಅಭಿಯಾನದ ವತಿಯಿಂದ ಜರುಗಿದ ಆಲಯದೊಳ ಅರುವಿನಾಲಯ ಕಾರ್ಯಕ್ರಮದಲ್ಲಿ ಸಾಹಿತ್ಯದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು ಈವರೆಗೂ ತಾವು ಬರೆದಿರುವ ನಾಡಿನ 780 ದೇವಾಲಯದ ಬಗ್ಗೆ ಮಾಡಿರುವ ನಾಡಿನ, ರಾಷ್ಟ್ರದ ಪ್ರತಿಷ್ಠಿತ ಆಡಿಯೋ ಕೇಂದ್ರಗಳಿಂದ ಬಿಡುಗಡೆಗೊಂಡಿರುವ ಅಂಶವನ್ನು ಮೇಲಕ್ಕೂ ಹಾಕಿ 54,000 ಕ್ಕಿಂತಲೂ ಅಧಿಕ ಗೀತೆ ರಚನೆಕಾರಾಗಿದ್ದು ನಾಡಿನ ಹೆಮ್ಮೆಯ ಸಂಗತಿ ಯಾಗಿದೆ ಎಂದು ಶಿಕ್ಷಕ ಸಾಹಿತ್ಯ ಬಾಲಕೃಷ್ಣ ಚೋಪಡ ಹೇಳಿದರು ಸಂವಾದ ಕಾರ್ಯಕ್ರಮದಲ್ಲಿ ಕಾರಟಗಿಯ ಚಿನ್ನನಗೌಡ ಪಾಟೀಲ್, ಡಾ.ಜಯದೇವ್ ಗಂಜಾಳ್, ಡಾ. ಕಳಕೇಶ್ ಉಕ್ಕಿಸಲ್, ಡಾ.ಬಸವರಾಜ.ಕೆ.ಮಾದಿ, ಶ್ರೀಮತಿ ಮಂಜುಳಾ ಇಟಗಿ, ಶ್ರೀಮತಿಜಯಶ್ರೀ ಕುಷ್ಟಗಿ, ಕುಮಾರಿ ಭಾವನ, ಭೂಮಿಕಾ, ರವಿತೇಜ, ಸಂಗಮೇಶ. ಸೇರಿದಂತೆ ಹಲವಾರು ಸಾಹಿತ್ಯಸಕ್ತರು ಪಾಲ್ಗೊಂಡಿದ್ದರು.

ಕವಿಯತ್ರಿ ಭವನಾ ಮಾದಿ ನಾಡು,ನುಡಿ ಕುರಿತು ಕವನವಾಚಿಸಿದರು, ಸಾಹಿತಿ ಬಸವರಾಜ್ ಕೊಣ್ಣೂರವರು ಹಲವಾರು ಶಾಯಿರಿ ಹೇಳಿದರು. ಸಾಹಿತಿ ಡಾ. ಬಿ.ಕೆ.ಮಾದಿ ದೋಹಾ ಹೇಳಿದರು. ಸರಸ್ವತಿ ಪುತ್ರರಾದ ಬಸವರಾಜ್ ಕೋಣ್ಣು ರವರೊಂದಿಗೆ ಇಂದಿನ ಸಾಹಿತ್ಯ ಕುರಿತು ಕ್ರಾಂತಿಕಾರ ವಿಚಾರಗಳನ್ನು ನಾಟಕಕಾರ, ಶಿವಾಜಿ ಹಾಗೂ ಕ್ರಾಂತಿ ಮಾರ್ಗ ಪತ್ರಿಕೆಯ ಸಂಪಾದಕರಾದ ಡಾ. ಕಳಕೇಶ್ ಉಕ್ಕಿಸಲ ಹಂಚಿಕೊಂಡರು ಕಾರ್ಯಕ್ರಮವನ್ನು ಮುಕ್ತಿ ವಾಹಿನಿ ಆತ್ಮಕಲ್ಯಾಣ ಅಭಿಯಾನವು ಅರಿವಿನಾಲಯದಲ್ಲಿ ಸಂಘಟಿಸಿತು.

ಕೊನೆಯಲ್ಲಿ ಅಭಿಯಾನದವತಿಯಿಂದ ಸಾಹಿತಿ ಬಸವರಾಜ್.ಕೊಣ್ಣೂರುರವರನ್ನು ಸನ್ಮಾನಿಸಲಾಯಿತು.

Related posts

ಅಂಗನವಾಡಿ ನೌಕರರಿಗೆ ಶಾಸನಬದ್ಧ ಸವಲತ್ತುಗಳನ್ನು ನೀಡಬೇಕು ಕೊಪ್ಪಳ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ

satyadarshana

ಬೆಳೆ ನಷ್ಟದಿಂದ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ..

satyadarshana

ಕರ್ನಾಟಕ ಈ ಬಾರಿ ಯಾರಿಗೆ ಅಧಿಕಾರ..?

satyadarshana

Leave a Comment