Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ದಮ್ಮೂರ: ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ೩೭೨ ನೇ ಶಿವಾನುಭವ ಗೋಷ್ಠಿ 

 

ಯಲಬುರ್ಗಾ : ಧರ್ಮದ ಕಾರ್ಯದಲ್ಲಿ ಪ್ರತಿನಿತ್ಯ ತೊಡಗಿದಾಗ ಜೀವನದಲ್ಲಿ ಪುಣ್ಯದ ಫಲ ದೊರೆಯಲು ಸಾದ್ಯ ಎಂದು ಶಿಕ್ಷಕ ಸಕ್ರಪ್ಪ ಕುಟ್ರು ಅವರು ದುರಿತ ಕರ್ಮವ ನೊಲ್ಲದಿರು ಪುಣ್ಯವನೆ ಮಾಡು ಎಂಬ ವಿಷಯವಾಗಿ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಮಾ.೨೮ ರಂದು ಹಮ್ಮಿಕೊಂಡಿರುವ ೩೭೨ ನೇ ಶಿವಾನುಭವಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ.

ಧರ್ಮದ ಹಾದಿಯಲ್ಲಿ ಸಾಗಬೇಕು ಎಂದರು. ಧರ್ಮರಮಠದ ಹನುಮಂತಪ್ಪಜ್ಞ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೋತೆಗೆ ಸಂಸ್ಕಾರ ಸಂಸ್ಕೃತಿಯ ಮಾರ್ಗದರ್ಶನ ನೀಡಬೇಕು ಅಂದಾಗ ಮಕ್ಕಳು ನಮ್ಮ ಜೋತೆ ಪ್ರೀತಿಯಿಂದ ಇರಲು ಸಾದ್ಯ ಮತ್ತು ಅವರು ಬದುಕು ಸುಂದರವಾಗಲು ಸಾದ್ಯ ಎಂದು ಚಿಕ್ಕ ಮ್ಯಾಗೇರಿ ಗ್ರಾಮ ಪಂಚಾಯತಿ ಅದ್ಯಕ್ಷ ಶರಣುಕುಮಾರ ಅಮರಗಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಾಪದ ಕೆಲಸಗಳಿಂದ ದೂರವಿದ್ದು ಪುಣ್ಯದ ಕಾರ್ಯದಲ್ಲಿ ಸಾಗಬೇಕು, ಸಿರಿತನ ಬಂದವರು ಹಣ,ಧವಸ ಧ್ಯಾನಗಳನ್ನು ನೀಡಿ ಪುಣ್ಯದ ಕಾರ್ಯ ಮಾಡುತ್ತಾರೆ ಆದರೆ ಹಣ ಇಲ್ಲದವರು ರಕ್ತದಾನ, ಅನ್ನದಾನ,ನೀರಿನದಾನ,ಸಂಗೀತ ಸೇವೆ ದಾನ, ಬೇಸಿಗೆ ದಿನದಲ್ಲಿ ಮೂಕ ಪಶು ಪಕ್ಷಿಗಳಗೆ ನೀರೂಣಿಸುವ ಸಮಾಜ ಸೇವೆ ಮಾಡುವದು ,ಈ ರೀತಿಯಾಗಿ ಸಮಾಜಮುಖಿ ಯಾಗಿ ಮಾಡುವ ಕಾರ್ಯದಿಂದ ಪುಣ್ಯ ಲಭಿಸುತ್ತದೆ ಎಂದು ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ, ದುರಗೇಶ ಹರಿಜನ, ಬಸವರಾಜ ಜಂಬಾಳಿ,ಭೀಮಣ್ಣ ಹವಳಿ, ಮಾತನಾಡಿದರು. ಈ ವೇಳೆ ಶರಣಪ್ಪ ಬಳಿಗೇರಿ, ಈರಪ್ಪ ರಾವಣಕಿ,ಇಬ್ರಾಹಿಂ ಸಾಬ ವಾಲಿಕಾರ, ಶರಣೆಗೌಡ ದ್ಯಾಮನಗೌಡ್ರ,ಗಣೇಶ ನಿಡಗುಂದಿ, ಶಕ್ರಪ್ಪ ಇಟಗಿ ಸೇರಿದಂತೆ ಇತರರು ಇದ್ದರು. ಸಂಗೀತ ಸೇವೆಯನ್ನು ಕಾಳೇಶ ಕಮ್ಮಾರ, ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ,ಯಮನೂರಪ್ಪ ಹಳ್ಳಿಕೇರಿ ಸೇರಿದಂತೆ ಇತರರು ಇದ್ದರು.ನಂತರ ಅನ್ನಸಂತರ್ಪಣೆ ಜರುಗಿತು.

 

Related posts

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ……

satyadarshana

ಗುರು ಮರಸಿದ್ಧ ಪ್ರಭುದೇವರ ಮಹಾಮನೆ ಮಹಾಮಠ ಲಕ್ಕುಂಡಿ ಆಶ್ರಯದಲ್ಲಿ ಹೊತ್ಸಲ ಹುಣ್ಣಿಮೆಯ

satyadarshana

ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ..! ಕಲಬುರಗಿಯ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು..!

satyadarshana

Leave a Comment