Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗಜೇಂದ್ರಗಡದ ಕಟ್ಟಿಬಸವೇಶ್ವರ ಯುವಕ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಗಜೇಂದ್ರಗಡ: ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ದೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿಯಾಗಿದೆ ಎಂದು ಕಟ್ಟಿಬಸವೇಶ್ವರ ಯುವಕ ಸಂಘದ ಉಪಾಧ್ಯಕ್ಷ ಮಂಜುನಾಥ ಚವ್ಹಾಣ ಹೇಳಿದರು.

ಪಟ್ಟಣದ ಶಿವಾಜಿ ವೃತ್ತದಲ್ಲಿ ಬುಧವಾರ ಕಟ್ಟಿಬಸವೇಶ್ವರ ಯುವಕ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.

ಕಟ್ಟಿಬಸವೇಶ್ವರ ಯುವಕ ಸಂಘದ ಕಾರ್ಯದರ್ಶಿ ಶ್ರೀಧರ ಸರಗಣಾಚಾರಿಮಠ ಮಾತನಾಡಿ, ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶಿವಾಜಿಯವರ ಶ್ರಮ ಅನಿಸ್ಮರಣೀಯವಾದುದಾಗಿದೆ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಗೌರವ ಸಲ್ಲಿಸಿದಂತಾಗಲಿದೆ ಎಂದರು.

ಈ ಸಂದರ್ಭದಲ್ಲಿ ರವಿ ವಡಗೇರಿ, ರಾಘವೇಂದ್ರ ಸೂರ್ಯವಂಶಿ, ವಿನಾಯಕ ಕೊಟಗಿ, ಬಸವರಾಜ ಕರಿಗಾರ, ಬಸವರಾಜ ಹೊಸಮನಿ, ಬಸವರಾಜ ಹಡಪದ, ಪ್ರವೀಣ ಮರಾಠಿ, ಆನಂದ ಮರಾಠಿ, ಸುಜಲ ಕುಷ್ಟಗಿ, ಶಶಿಧರ ಹಾಳಕೇರಿ, ಸಿದ್ದು ಚಿಲಕಾ, ಮಹಾಮಥೇಶ ಮಡಿವಾಳರ, ರವಿ ಹೊಸಮನಿ, ಗಣೇಶ ಹೊಸಮನಿ, ಪ್ರಶಾಂತ ಹೊಸಮನಿ, ಶಿವು ಡುಮ್ಮಾಳ, ತುಳಜಪ್ಪ ಜಾನಾಯಿ ಸೇರಿದಂತೆ ಇತರರು ಇದ್ದರು.

Related posts

ಗುರು ಮರಸಿದ್ಧ ಪ್ರಭುದೇವರ ಮಹಾಮನೆ ಮಹಾಮಠ ಲಕ್ಕುಂಡಿ ಆಶ್ರಯದಲ್ಲಿ ಹೊತ್ಸಲ ಹುಣ್ಣಿಮೆಯ

satyadarshana

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶಿರಹಟ್ಟಿ ತಾಲೂಕಿನ ಸುಮಾರು 17 ಕೀಮಿ ಮಾನವ ಸರಪಳಿ ರಚನೆ

satyadarshana

ಪಿಎಸ್ಐ ಸೇರಿದಂತೆ ಇಬ್ಬರು ಪೇದೆಗಳು ಲೋಕಾಯುಕ್ತ ಬಲೆಗೆ.ಹಣ ಕೊಡುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ

satyadarshana

Leave a Comment