Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. -ಪ್ರಾ. ಮಾದಿ.

ಮನುಕುಲದ ಇತಿಹಾಸದಲ್ಲಿ ತಮ್ಮ ಜೀವನವನ್ನು ಆಕರ್ಷಕ ಅಧ್ಯಯನವಾಗಿಸಿಕೊಂಡು ನಿರಂತರ ಸೇವೆಯ ಆಭರಣ ಧರಿಸಿರುವ ರಾಷ್ಟ್ರೀಯ ನಾಯಕರ ಸಂಗಮದೊಂದಿಗೆ ಡಾ. ಬಿ.ಆರ್ ಅಂಬೇಡ್ಕರ್ ವತಿಯಿಂದ ರಚಿಸಲ್ಪಟ್ಟ ಭಾರತದ ಹೆಮ್ಮೆಯ ಹಾಗೂ ಮೂಲಭೂತ ಶಾಸನವೇ ಸಂವಿಧಾನ.

 ಪ್ರತಿಯೊಬ್ಬರ ಪಾಲು 

ಇರುವುದೇ ಪ್ರಜಾಪ್ರಭುತ್ವ. 

ಆಂಗ್ಲ ಭಾಷೆಯಲ್ಲಿ ಇದನ್ನ ಡೆಮೊಕ್ರಸಿ ಎನ್ನುತ್ತೇವೆ. ಇದು ಗ್ರೀಕ್

 ಭಾಷೆಯಾದ ಡೆಮೊಸ್ ಮತ್ತು ಕ್ರೇಟಸ್ ಎಂಬ ಎರಡು ಶಬ್ದಗಳ ಸಮ್ಮಿಲನದಿಂದ ಬಂದಿದೆ. ಇದರರ್ಥ ಜನರ ಅಧಿಕಾರ ಎಂದಾಗುತ್ತದೆ. ಅದಕ್ಕಾಗಿ ಅಬ್ರಾಹಿಂ ಲಿಂಕನ್ ರವರು ಪ್ರಜೆಗಳೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜೆಗಳೇ ಆಳುವ ಸರ್ಕಾರವೇ ಪ್ರಜಾಪ್ರಭುತ್ವ ಎಂದಿದ್ದಾರೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಎಂದರೆ ಜಾಗತಿಕ ಭವಿಷ್ಯಕ್ಕಾಗಿಯೇ ಆಸಕ್ತ ಮನಸ್ಸುಗಳನ್ನು ನಿರ್ಮಾಣ ಮಾಡುವಂತ ವ್ಯವಸ್ಥೆಯಾಗಿದೆ‌ ಅದಕ್ಕಾಗಿಯೇ ಈ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಶ್ವ ಸಂಸ್ಥೆಯು ತನ್ನ ಸಾಮಾನ್ಯ ಸಭೆಯಲ್ಲಿ 2007ರಲ್ಲಿ ಅಂಗೀಕರಿಸಿ ,ಅದೇ ನಂತರದ 2008 ಸೆಪ್ಟೆಂಬರ್ 15ರಂದು ಮೊಟ್ಟಮೊದಲ ಬಾರಿಗೆ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಯಿತು. ಇದರ ಮೂಲ ಉದ್ದೇಶ ಪ್ರತಿಯೊಬ್ಬನ ಜೀವನಕ್ಕೆ ಅನಂತತೆಯನ್ನು ತಂದುಕೊಡಲು ಪೂರ್ಣ ಮನಸ್ಸಿನಿಂದ ಪ್ರತಿಯೊಬ್ಬರು ಪಾಲ್ಗೊಳ್ಳಬೇಕಾದಂತ ಮೂಲ ಉದ್ದೇಶವನ್ನು ಹೊಂದಿರುವಂತಹ ಸುದಿನ ಇಂದಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ ಎಂದು ಪ್ರಾಚಾರ್ಯರು ಬಿ.ಕೆ. ಮಾದಿ ಹೇಳಿದರು. ಅವರು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಶ್ರೀ ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ಬೃಹತ್ ರಾಷ್ಟ್ರ ನಮ್ಮದೆನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯಶಾಸ್ತ್ರ ಉಪನ್ಯಾಸಕರಾದ ಎನ್. ಎಸ್. ಕಲ್ಕೇರಿ ಹೇಳಿದರು .ಈ ದಿನಾಚರಣೆಯಂದು ಭಾರತದ ಸಂವಿಧಾನದ ಹೃದಯ ಭಾಗವಹಿಸಿರುವ ಪ್ರಿಯಾಂಬಲ್, ಪ್ರಸ್ತಾವನೆಯನ್ನು ನಾವೆಲ್ಲರೂ ಓದುವುದರ ಮೂಲಕ

 ಸಂಕಲ್ಪದ ಸಂಗಮವು ,

ಜನ-ಮನದ ಅಂಗಳವೂ, ಮಾನವರ ಬದುಕಿಗೆ ಮಂಗಳವು ಎಂಬುದನ್ನು ಸಾಬೀತುಪಡಿಸಬೇಕಾದಂತ ಸುದಿನವಿದು ಎಂದು ಇತಿಹಾಸ ಉಪನ್ಯಾಸಕರಾದ ಎ. ಬಿ. ಸಂಕನೂರ್ ಹೇಳಿದರು.

 ಈ ಸಂವಿಧಾನದ ಪ್ರಸ್ತಾವನೆ ಅಧ್ಯಯನದಿಂದ ನಮ್ಮ ಅಜ್ಞಾನ ಅಳಿದು ಅರಿವಿನ ಕಿರಣದಿಂದ ನಮ್ಮೆಲ್ಲರ ಆತ್ಮ ಅರಳಿ ಭಾವ ಬೆಳಗಿದಾಗಲೇ ಭಾರತವು ವಿಶ್ವಗುರುವಾಗಿ ಕಂಗೊಳಿಸುವುದು ಎಂಬುದನ್ನು ಎಲ್ಲರೂ ಮೆಲುಕು ಹಾಕಿದರು. ನಮ್ಮ ದೇಶ ಲಿಖಿತ ಸಂವಿಧಾನ ಹೊಂದಿದ್ದು, ಇದು ಇಂಗ್ಲೆಂಡಿನ ಸಂವಿಧಾನದಂತೆ ಅತೀ ಸರಳವು ಅಲ್ಲ, ಅಮೆರಿಕ ಸಂವಿಧಾನದಂತೆ ಅತೀ ಕಠಿಣವು ಆಗಿರದೆ,1/3 ಅಂಶ ಬಹುಮತದಿಂದ ಅವಶ್ಯಕ ಅಂಶಗಳ ತಿದ್ದುಪಡಿಗೆ ನಮ್ಮ ಸಂವಿಧಾನದ ನಿರ್ಮಾತೃಗಳು ಅವಕಾಶ ಕಲ್ಪಿಸಿದ್ದಾರೆ. ಇದರ ಪರಿಣಾಮವಾಗಿ ಕಾಲಾಂತರದ ಕಂದಾಚಾರಗಳು ಕೂಡ ದೂರವಾಗಿವೆ. ಇದರಲ್ಲಿ ನಾಗರಿಕ ಹಕ್ಕುಗಳು, ಸ್ವಾತಂತ್ರ್ಯಗಳು, ಕರ್ತವ್ಯಗಳನ್ನ ಇತರೆ ದೇಶಗಳಿಗಿಂತ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಆದರೆ ನಾವು ನಮ್ಮ ಕೇವಲ ಹಕ್ಕಿಗಾಗಿ ಮಾತ್ರ ಹೋರಾಡುತ್ತಿದ್ದೇವೆ, ನಮ್ಮ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕಾದಂತಹ ಹಂತದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಅದಕ್ಕಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

 ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಮತ್ತು ಅದರ ಮೌಲ್ಯಗಳು ಹಾಗೂ ತತ್ವಗಳನ್ನು ಎತ್ತಿ ಹಿಡಿಯುವ ಸದುದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಈ ವರ್ಷದ ವಿಶೇಷವೆಂದರೆ, ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ 2,500 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ರಚಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸುವ ಪಣತೊಟ್ಟಿದೆ ಎಂಬುವುದನ್ನು ಪ್ರಾಸ್ತಾವಿಕವಾಗಿ ಮೆಲುಕು ಹಾಕಿದರು.

ಕಾವ್ಯ ವಾರಿಕಲ್ ಪ್ರಾರ್ಥಿಸಿದರು, ಕು. ಕಮಲಾಕ್ಷಿ ಸ್ವಾಗತಿಸಿದರು, ಹನುಮಂತ ಆಡಿನ್ ನಿರೂಪಿಸಿದರು, ಕುಮಾರ್ ಲಂಕಟದ್ ವಂದಿಸಿದರು. ಕಾರ್ಯಕ್ರಮದಲ್ಲಿ ಸರ್ವ ಸಿಬ್ಬಂದಿ ವರ್ಗ ,ಆಡಳಿತ ಮಂಡಳಿ ಪಾಲ್ಗೊಂಡಿದ್ದರು.

Related posts

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತದಾರರ ಜಾಗೃತಿಗಾಗಿ ಬೈಕ್ ಏರಿದ ಹಿರಿಯ ಅಧಿಕಾರಿಗಳು

satyadarshana

ಪಿಎಸ್ಐ ಪರೀಕ್ಷೆ ಅಕ್ರಮ ;16 ಆರೋಪಿಗಳ ಮೊಬೈಲ್​​​ ಲ್ಯಾಬ್​​ಗೆ ರವಾನೆ..!

satyadarshana

ನಗರದ ಟ್ಯಾಗೋರ ರಸ್ತೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ

satyadarshana

Leave a Comment