Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕುತೂಹಲ ಕೆರಳಿಸಿದ ನರೇಗಲ ಪಟ್ಟಣ ಪಂಚಾಯತಿ ಚುನಾವಣೆ

ನರೇಗಲ :ಕುತೂಹಲ ಕೆರಳಿಸಿದ ನೆರೆಗಲ್ ಪಟ್ಟಣ ಪಂಚಾಯತಿ ಚುನಾವಣೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಸೆ.2 ರಂದು ನಿಗದಿಯಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಆಡಳಿತಕ್ಕೆ ಬರುವುದು ಖಚಿತ ಎಂದುಕೊಂಡಿದ್ದ ಬಿಜೆಪಿಗೆ ಅವರದೇ ಪಕ್ಷದ ಆರು ಜನ ಸದಸ್ಯರ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವುದು ಹಾಗೂ ನರೇಗಲ್‌ ಪಟ್ಟಣದಲ್ಲಿ ಕಾಣಿಸಿಕೊಳ್ಳದಿರುವುದು ಶಾಕ್‌ ನೀಡಿದೆ.

ಅದರಲ್ಲೂ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಅನುಭವಿಸಿದ್ದ ಸದಸ್ಯರೇ ಕಾಣೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.

ಒಟ್ಟು 17 ಸದಸ್ಯ ಬಲದ ನರೇಗಲ್‌ ಪಟ್ಟಣ ಪಂಚಾಯ್ತಿಯಲ್ಲಿ 12 ಬಿಜೆಪಿ, 3 ಕಾಂಗ್ರೆಸ್‌, ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಪಕ್ಷೇತರರ ಪೈಕಿ ಈ ಹಿಂದೆ ಒಬ್ಬರು ಕಾಂಗ್ರೆಸ್‌, ಒಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದರು. ಇದರಿಂದ ಬಿಜೆಪಿ 13, ಕಾಂಗ್ರೆಸ್‌ 4 ಸದಸ್ಯ ಬಲ ಹೊಂದಿದೆ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಆಡಳಿತಕ್ಕೆ ಬರುವುದು ಬಹುತೇಕ ಖಚಿತವಾಗಿತ್ತು

Related posts

ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ

satyadarshana

ರಾಷ್ಟ್ರೀಯ ಏಕತಾ ದಿವಸ: ಸೈಕಲ ಜಾಥಾ

satyadarshana

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಮುಖಾಮುಖಿ

satyadarshana

Leave a Comment