Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಗದಗ ಅರಣ್ಯ ವಿಭಾಗದ ವತಿಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪರಿಸರ ದಿನ ಆಚರಣೆ

ಪರಿಸರ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ, ಬೀದಿ ನಾಟಕಗಳ ಪ್ರದರ್ಶನದ ಮೂಲಕ ಜಾಗೃತಿ

ಗದಗ: ನಗರದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯ ಗದಗ ವಿಭಾಗದ ವತಿಯಿಂದ ‘ಅವರ್ ಲ್ಯಾಂಡ್ ಅವರ್ ಫ್ಯೂಚರ್’ ಶಿರ್ಷಿಕೆಯಡಿ ಪರಿಸರ ದಿನವನ್ನು ಆಚರಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ಯ ನ್ಯಾಯಾಧೀಶ ಬಸವರಾಜ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿ ಸಿ.ಎಸ್. ಶಿವನಗೌಡ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾ ಪಂಚಾಯತ್ ಸಿಇಒ ಭರತ್ ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ ಅವರು ಸಸಿಗಳನ್ನು ನೆಟ್ಟು, ನೀರುಣಿಸಿದರು.

ನಂತರ 2024-25ನೇ ಸಾಲಿನಲ್ಲಿ ಪರಿಸರ ಪ್ರೇಮಿಗಳಾದ ಲಕ್ಷೆö್ಮÃಶ್ವರದ ಶಂಕರ ಬ್ಯಾಡಗಿ, ನರಗುಂದದ ನಜೀರಸಾಬ್ ಜಮಾದಾರ, ರೋಣದ ಮುತ್ತಣ್ಣ ತಿರ್ಲಾಪುರ, ಗದಗ ಕಿರಣ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ದಿನಗೂಲಿ ನೌಕರರಾದ ಸೊರಟೂರಿನ ಆನಂದ ಮಲ್ಲಾರಿ, ನೆಲ್ಲೂರಿನ ಶಾಂತಯ್ಯ ಬೆಳವಣಕಿ, ಗದಗದ ಹನುಮಂತ ಮಾಚೇನಹಳ್ಳಿ, ಬಿಡ್ನಾಳದ ಚನ್ನಪ್ಪ ಕಿರದಾಳ, ಕಡಕೋಳದ ಚನ್ನವೀರಯ್ಯ ಗೊಳಗೇರಿಮಠ ಅವರನ್ನೂ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾ ಪಂಚಾಯತ್ ಸಿಇಒ ಭರತ್ ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ ಚಾಲನೆ ನೀಡಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿAದ ಆರಂಭವಾದ ಸೈಕಲ್ ಜಾಥಾ ಹಳೇ ಡಿಸಿ ಆಫೀಸ್ ಸರ್ಕಲ್, ಮುಳಗುಂದ ನಾಕಾ ಮಾರ್ಗವಾಗಿ ತಾಲೂಕಿನ ಬಿಂಕದಕಟ್ಟಿಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವರೆಗೆ ಜರುಗಿತು.

ಮಾರ್ಗಮಧ್ಯೆ ಹಳೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಮುಳಗುಂದ ನಾಕಾದಲ್ಲಿ ಪರಿಸರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಪರಿಸರ ಮಹತ್ವದ ಕುರಿತು ಜಗೃತಿ ಮೂಡಿಸಲಾಯಿತು.

Related posts

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

satyadarshana

ಕಲಬುರಗಿಯಲ್ಲಿ ಮೈತ್ರಿಗೆ ಸಿದ್ದರಾಮಯ್ಯ ವಿರೋಧ- ಮಾಜಿ ಸಿಎಂ ಲೆಕ್ಕಾಚಾರ ಏನು?

satyadarshana

ನಾಳೆಯಿಂದ ಕೊಪಣ ಮೀಡಿಯಾ ಫೆಸ್ಟ್-2೦24 ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಾದ್ಯಮ ಹಬ್ಬ

satyadarshana

Leave a Comment