ಕೊಪ್ಪಳ ಡಿಸೆಂಬರ್ 15. ಕೊಪ್ಪಳ ಜೆಸ್ಕಾಂ ವಿಭಾಗ ವ್ಯಾಪ್ತಿಯ ಉಪ-ವಿಭಾಗಗಳಲ್ಲಿ ವಿದ್ಯುಚ್ಛಕ್ತಿ ಬಳಕೆ ಗ್ರಾಹಕರ ಅಹವಾಲು, ದೂರು ಸ್ವೀಕರಿಸುವ ಸಂಬಂಧ ಡಿ.16 ರಂದು ಗ್ರಾಹಕರ ಅಹವಾಲು ಸ್ವೀಕಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಡಿ.16 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ವಿಭಾಗ ಕಚೇರಿ ಸಭಾಂಗಣ ಹಾಗೂ ಮುನಿರಾಬಾದ ಮತ್ತು ಯಲಬುರ್ಗಾ ಉಪ ವಿಭಾಗಗಳ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಛೇರಿಯ ಸಭಾಂಗಣದಲ್ಲಿ ಗ್ರಾಹಕರ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ವಿದ್ಯುತ್ ಗ್ರಾಹಕರು ಪಾಲ್ಗೊಂಡು ಕುಂದು ಕೊರತೆಗಳ ದೂರುಗಳನ್ನು ಸಲ್ಲಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
