Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಯಲಬುರ್ಗಾ ತಾಲೂಕಿನಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಪವನ​ ವಿದ್ಯುತ್ ಯಂತ್ರಗಳ ಅಳವಡಿಕೆ 

 

ಯಲಬುರ್ಗಾ : ತಾಲೂಕಿನ. ಸಂಗನಾಳ. ಬಂಡಿಹಾಳ. ತೊಂಡಿಹಾಳ. ಚಿಕ್ಕೇನಕೊಪ್ಪ. ಹಾಗೂ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಎಲ್ಲಿ ನೋಡಿದ್ರೂ ಪವನ ವಿದ್ಯುತ್ (wind power) ಯಂತ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಆದರೆ ಸರ್ಕಾರದ ಎಲ್ಲ ಕಾನೂನು ಗಾಳಿ ತೂರಿ ವಿಂಡ್ ಫ್ಯಾನ್ ಗಿರ್ ಗಿರ್ ಅಂತ ತಿರುಗುತ್ತಿವೆ. ಆದರೆ ಈ ಕಂಪನಿಗಳು ಸರ್ಕಾರಕ್ಕೂ ಭಾರಿ ಮೋಸ ಮಾಡುತ್ತಿವೆ. NA ಮಾಡದೇ ಕಾನೂನು ಉಲ್ಲಂಘಿಸಿ ಎಗ್ಗಿಲ್ಲದೇ ಅಳವಡಿಕೆ ಮಾಡಲಾಗಿದೆ.

ಅಷ್ಟೇ ಅಲ್ಲ ಗ್ರಾಮ ಪಂಚಾಯತ್ ಅನುಮತಿ‌ಯೂ ಇಲ್ಲ. ಪಂಚಾಯತ್​ಗಳಿಗೂ ತೆರಿಗೆ ಮೋಸ ಮಾಡಿವೆ. ಇದಕ್ಕೆ ಸಂಬಂಧಪಟ್ಟ. ಕಂದಾಯ ಇಲಾಖೆಯ ಗ್ರಾಮ ಲೆಕ್ಕ ಅಧಿಕಾರಿ ಹಾಗೂ. ಕಂದಾಯ ನಿರೀಕ್ಷಕರನ್ನು ಕೇಳಿದರೆ. ಯಲಬರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ. ಒಂದು ಫ್ಯಾನ್. ಬಂಡಿಹಾಳ ಗ್ರಾಮಗಳಲ್ಲಿ ಎರಡು ಫ್ಯಾನುಗಳಿಗೆ ಮಾತ್ರ NA. ಆಗಿದೆ ಇನ್ನೂಳಿದ ಸುಮಾರು 200 ಪವನ್ ವಿದ್ಯುತ್ ಶಕ್ತಿ ವಿಂಡ್ ಫ್ಯಾನುಗಳಿಗೆ. ಭೂ ಪರಿವರ್ತನೆ ಆಗಿಲ್ಲ. ಈಗಾಗಲೇ ನಾವು ಕಂಪನಿಯವರಿಗೆ ನೋಟಿಸ್. ನೀಡಿದ್ದೇವೆ ಆದರೂ ಕೂಡ ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಫ್ಯಾನುಗಳನ್ನು ಅಳವಡಿಕೆ ಮಾಡಿದ್ದಾರೆ. ಇವೆಲ್ಲ ಸರ್ಕಾರದ ಮಟ್ಟದಲ್ಲಿ ಆಗಿವೆ ನಮಗೆ ಯಾವುದೇ ಮಾಹಿತಿ ಇಲ್ಲ. ತಹಸಿಲ್ದಾರ್ ಅವರನ್ನು ಕೇಳಿ. ಎಂದು ಕಂದಾಯ ನಿರೀಕ್ಷಕರು ಹೇಳಿದರು. ತಹಸಿಲ್ದಾರ್ ಅವರನ್ನು ಕೇಳಿದರೆ. ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ನಿಮಗೆ ನಾವು ಮಾಹಿತಿ ಕೊಡುತ್ತೇವೆ ಎಂದು ಹೇಳಿದವರು ತಿಂಗಳಾದರೂ ಮಾಹಿತಿ ಕೊಡುತ್ತಿಲ್ಲ. ಮೇಲೋಟಕ್ಕೆ ನೋಡಿದರೆ ಅಧಿಕಾರಿಗಳ ಜೇಬು‌ ಮಾತ್ರ ಫುಲ್ ಆಗಿವೆ. ಎನ್ನುವ ಮಾತು ಗ್ರಾಮಸ್ಥರು

ಯಲಬುರ್ಗಾ ತಾಲೂಕಿನಲ್ಲಿ ವಿಂಡ್ ಕಂಪನಿಗಳು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಲಗ್ಗೆ ಇಟ್ಟಿವೆ. ತಾಲೂಕಿನ ಸಂಗನಾಳ ಗ್ರಾಮದಲ್ಲಿ ಎತ್ತ ಕಣ್ಣು ಹಾಯಿಸಿದ್ರೂ ವಿಂಡ್ ಫ್ಯಾನ್​ಗಳೇ ಕಣ್ಣಿಗೆ ರಾಚುತ್ತವೆ. ರೇನ್ಯೂ ಎನರ್ಜಿ ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸ ಸಡಲಿಕೆಗಳು ನೀಡಿವೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಬಂಡವಾಳ ಶಾಹಿಗಳು ತಾಲೂಕಿನಲ್ಲಿ ಬೇಕಾಬಿಟ್ಟಿ ಪವನ​ ವಿದ್ಯುತ್ ಯಂತ್ರಗಳನ್ನು ಅಳವಡಿಸಿದ್ದಾರೆ. ವಿಂಡ್ ಫ್ಯಾನ್ ಅಳವಡಿಸಬೇಕಾದರೆ ಮೊದಲು ಗ್ರಾಮ ಪಂಚಾಯತ್​ಗೆ ಟ್ಯಾಕ್ಸ್ ತುಂಬಿ ಅನುಮತಿ ಪಡೆಯಬೇಕು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಬೇಕು. ಬಳಿಕ ಪಂಚಾಯತ್ ಎನ್ಓಸಿ ಪಡೆಯಬೇಕು. ಆದರೆ ಇದ್ಯಾವ ಕೆಲಸ ಮಾಡದ ವಿಂಡ್ ಕಂಪನಿಗಳು ನೂರಾರು ಪವನ ವಿದ್ಯುತ್ ಯತ್ರಗಳು ಈಗಾಗಲೇ ರೈತರ ಜಮೀನುಗಳಲ್ಲಿ ಅಳವಡಿಸಿದ್ದಾರೆ.ಈಗಾಗಲೇ ವಿದ್ಯುತ್ ಉತ್ಪಾದನೆ ಮಾಡೋದಕ್ಕೆ ಎಲ್ಲಾ ಕೆಲಸಗಳು ಪೂರ್ಣ ಆಗಿವೆ. ಇಷ್ಟು ಸರ್ಕಾರದ ನಿಯಮ ಉಲ್ಲಂಘನೆ ಮಾಡಿದರು ಕೂಡ ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ. ನಮಗೂ ಇದುಕ್ಕು ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ಕೈಕಟ್ಟಿ ಕುಂತಿವೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಬಸನಗೌಡ ರಾಮ್ ಶೆಟ್ಟಿ ಅವ್ರನ್ನು ಕೇಳಿದರೆ, ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಎಲ್ಲಾ ತಹಸಿಲ್ದಾರರು ನೋಡಿಕೊಳ್ಳುತ್ತಾರೆ. ಅವರನ್ನು ಕೇಳಿ ಎಂದು ಹೇಳುತ್ತಾರೆ ತಾಲೂಕಿನಲ್ಲಿ ಒಂದಲ್ಲ ಎರಡಲ್ಲ 500ಕ್ಕೂ ಅಧಿಕ ಪವನ ವಿದ್ಯುತ್ ಯಂತ್ರಗಳು ಅಳವಡಿಸಿದ್ದಾರೆ. ಬಹುತೇಕ ಗ್ರಾಮ ಪಂಚಾಯತ್ ಗಳಿಂದ ಅನುಮತಿಯೂ ಪಡೆಯಲ್ಲಿ, ಎನ್ಓಸಿ ಕೂಡ ಪಡೆಯದೇ ಅಳವಡಿಸಲಾಗಿದೆ. ಈ ಕಂಪನಿಗಳು ಆಡಿದ್ದೇ ಆಟವಾಗಿದೆ. ಸರ್ಕಾರದ ಯಾವುದೇ ನಿಯಮ, ಕಾನೂನು ಪಾಲನೆ ಮಾಡುತ್ತಿಲ್ಲ.ಕೃಷಿ ಜಮೀನುಗಳಲ್ಲೇ ಬೃಹತ್ ಯಂತ್ರಗಳು ಸ್ಥಾಪನೆ ಮಾಡಿದ್ದಾರೆ. ಇದ್ರಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಾಂತರ ಟ್ಯಾಕ್ಸ್ ಮೋಸ ಆಗ್ತಾಯಿದೆ. ಈ ವಿಷಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗೋತ್ತಿದ್ರೂ ಮೌನಕ್ಕೆ ಶರಣಾಗಿದ್ದಾರೆ. ಗ್ರಾಮ ಪಂಚಾಯತ್ ಆಡಳಿತಗಳು ಟ್ಯಾಕ್ಸ್ ಮೋಸಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಆದ್ರೆ, ಕಂದಾಯ ಇಲಾಖೆ ಮಾತ್ರ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಅನ್ನೋ ಆರೋಪ ಕೇಳಿ ಬರ್ತಾಯಿದೆ.ಪಂಚಾಯತ್​ಗೆ ಕಟ್ಟಬೇಕಾದ ತೆರಿಗೆ ಕಟ್ಟದೇ ನಮ್ಮ ವ್ಯಾಪ್ತಿಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಒಂದು ಕಡೆ ಸರ್ಕಾರಕ್ಕೆ ಟ್ಯಾಕ್ಸ್ ಮೋಸ ಆಗ್ತಾಯಿದೆ. ಮತ್ತೊಂದೆಡೆ ಅಧಿಕಾರಿಗಳ ಜೇಬುಮಾತ್ರ ಫುಲ್ ಆಗ್ತಾಯಿದ್ದು, ಫ್ಯಾನ್ ಘರ್ ಘರ್ ಅಂತ ತಿರುಗುತ್ತಿಯಂತೆ. ಇನ್ನೂ ಈ ಬಗ್ಗೆ ಶಾಸಕ ಬಸವರಾಜ್ ರಾಯರೆಡ್ಡಿ ಅವರನ್ನು. ಇದರ ಅಭಿಪ್ರಾಯ ಕೇಳಲು. ದೂರವಾಣಿ ಕರೆ ಮಾಡಿದರೆ ಕಳೆದ ಒಂದು ವಾರದಿಂದ ಕರೆ ಸ್ವೀಕರಿಸುತ್ತಿಲ್ಲ

ಎಲ್ಲಾ ಇಲಾಖೆಯಲ್ಲಿ ಅತ್ಯಂತ ಮಾಹಿತಿ ಇರುವ ರಾಜ್ಯದಲ್ಲಿ ಅತ್ಯಂತ ಬುದ್ಧಿವಂತ ಶಾಸಕ ಬಸವರಾಜ್ ರಾಯರೆಡ್ಡಿ ಅವರು ವಿಂಡ್ ಕಂಪನಿಗಳ ದರ್ಬಾರಕ್ಕೆ ಕಡಿವಾಣ ಹಾಕುತ್ತಾ ಅನ್ನೋದು ಕಾದು ನೋಡಬೇಕಿದೆ

Related posts

ರಾಜ್ಯದ ಬಹುತೇಕ ಕಡೆ ಮುಂಗಾರು ಪೂರ್ವ ಮಳೆಯಿಂದ ಜನಜೀವನ ಅಸ್ತವ್ಯಸ್ತ, ಬೆಳೆಗಳಿಗೆ ಭಾರಿ ಹಾನಿ

satyadarshana

ಸ್ವಗ್ರಾಮ ಫೆಲೋಶಿಪ್ ಲೋಕಾರ್ಪಣೆ ಸಮಾರಂಭ ಗ್ರಾಮಗಳ ವಿಕಾಸ ಸ್ವಾವಲಂಭನೆಯಲ್ಲಿ ಸ್ವಗ್ರಾಮ ಫೆಲೋಶಿಪ್ ಅನುಕೂಲಕರ.ವಿ.ಆರ್.ಎಲ್ ಸಮೂಹದ ಅಧ್ಯಕ್ಷ ವಿಜಯ ಸಂಕೇಶ್ವರ .

satyadarshana

ಪರಿವರ್ತನಾ ಯುಗದ ಪ್ರತಿ ಮೂರ್ತಿಗಳು 

satyadarshana

Leave a Comment