ಯಲಬುರ್ಗಾ : ಹಾಲಪ್ಪ ಆಚಾರ್ ಅವರು 2023 ರ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 30 ಸಾವಿರ ಮತಗಳ ಅಂತರದಿಂದ ಸೋಲು ಖಚಿತ. ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈರಪ್ಪ ಕುಡುಗುಂಟಿ ಆರೋಪಿಸಿದರು.ಕಳೆದ ಚುನಾವಣೆಯಲ್ಲಿ ನಾನು ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಹಾಲಪ್ಪ ಆಚಾರ್ ಅವರ ಗೆಲುವಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಬಿಜೆಪಿ ಪಕ್ಷದಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಅಂತವರನ್ನು ಅಲ್ಲಿ ಗುರುತಿಸುವುದಿಲ್ಲ .
ಆ ಪಕ್ಷದಲ್ಲಿ ಪ್ರಾಮಾಣಿಕ ವ್ಯಕ್ತಿಯ ಬಗ್ಗೆ ಚಾಡಿ ಮಾತು ಹೇಳುವವರಿಗೆ ಮಾತ್ರ ಅಲ್ಲಿ ಬೆಲೆ ಇದೆ ಅದಕ್ಕೆ ನಾನು ಬೇಸತ್ತು ಅವರು ಶಾಸಕರಾಗಿ ಒಂದು ವರ್ಷದಲ್ಲೇ ಅವರಿಂದ ನಾನು ಅಂತರ ಕಾಯ್ದುಕೊಂಡಿದ್ದೆ. ಅವರು ಶಾಸಕರಾಗಿ ಈ ಕ್ಷೇತ್ರಕ್ಕೆ ಒಳ್ಳೆ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ವಿಶ್ವಾಸ ನನಗೆ ಇತ್ತು ಅದು ಇವತ್ತು ಸುಳ್ಳು ಮಾಡಿದ್ದಾರೆ. ಅವರು ಶಾಸಕರಾಗಿ ಮೂರು ಖಾತೆಯ ಮಂತ್ರಿ ಆದರೂ ಕೂಡ ಈ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ನಮ್ಮ ಕ್ಷೇತ್ರದಲ್ಲಿ ಸುಮಾರು ಅಂಗನವಾಡಿ ಕಟ್ಟಡಗಳು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.
ಕೆಲವು ಅಂಗನವಾಡಿ ಕಟ್ಟಡಗಳು ಬೀಳುವ ಹಂತಕ್ಕೆ ತಲುಪಿವೆ. ಅವುಗಳ ದುರಸ್ತಿ ಕಾರ್ಯ ಮಾಡೋದಕ್ಕೆ ಸಚಿವರು ಮುಂದಾಗಲಿಲ್ಲ. ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರು.
ಅದಕ್ಕೆ ಸ್ವಂತ ಕಟ್ಟಡ ಮಂಜೂರು ಮಾಡಿಸೋ ಸಾಮರ್ಥ್ಯ ಇವರಿಗೆ ಆಗಲಿಲ್ಲ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುಮೋದನೆಗೊಂಡ ಕೆರೆ ತುಂಬೋ ಯೋಜನೆಗೆ. ಕಾಂಗ್ರೆಸ್ ಸರ್ಕಾರದ ಯೋಜನೆಯನ್ನು ಇದು ನನ್ನ ಸಾಧನೆ ಎಂದು ಸುಳ್ಳು ಹೇಳಿ ಮತ್ತೆ ಜನರಿಗೆ ಸುಳ್ಳು ಹೇಳಲು ಬರುತ್ತಿದ್ದಾರೆ ಕ್ಷೇತ್ರದ ಜನತೆ ಇವರ ಮಾತಿಗೆ ಮರುಳಾಗಬೇಡಿ ಇವರ ಸುಳ್ಳು ಮಾತನ್ನು ನಂಬಿ ನಾವು ಮೋಸ ಹೋಗಿದ್ದೇವೆ.
ಕ್ಷೇತ್ರದ ಜನತೆ ನೀವು ಮತ್ತೆ ಮೋಸ ಹೋಗಬೇಡಿ ಅವರು ಮತ್ತೆ ಕ್ಷೇತ್ರದಲ್ಲಿ ಶಾಸಕರಾದರೆ. ಎಲ್ಲಾ ಇಲಾಖೆಗೆ ತಮ್ಮ ಸಮುದಾಯದ ಅಧಿಕಾರಿಗಳನ್ನು ತರುವ ಮೂಲಕ ಎಲ್ಲಾ ಇಲಾಖೆಯನ್ನು ಬಿಜೆಪಿ ಕಚೇರಿ ಮಾಡಿಕೊಳ್ಳುತ್ತಾರೆ. ನೀವು ಯಾವುದೇ ಹಕ್ಕನ್ನು ಕೇಳುವ ಸಾಮರ್ಥ್ಯ ಕಳೆದುಕೊಳ್ಳುತ್ತೀರಿ. ಈ ಸಾರಿ ವಿಚಾರ ಮಾಡಿ ಮತ ನೀಡಿ. ಅವರು ಶಾಸಕರಾದ ನಂತರ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯಗಳ ಮೂಲ ಸೌಕಾರಕ್ಕೆ ಬಂದಂತ ಅನುದಾನವನ್ನು.
ದಲಿತರ ಕಾಲೋನಿಗೆ ಬಳಕೆ ಮಾಡದೆ ಕಾನೂನಿನ ವಿರುದ್ಧವಾಗಿ ದಲಿತ ಸಮುದಾಯ ವಾಸ ಮಾಡದೆ ಇರತಕ್ಕಂತ ಪ್ರದೇಶಗಳಲ್ಲಿ ಕಮಿಷನ್ ಆಸೆಗಾಗಿ. ತಮ್ಮ ಸಮುದಾಯದ ಗುತ್ತಿಗೆದಾರರಿಗೆ ಕೆಲಸ ನೀಡುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದ್ದಾರೆ . ಈ ಚುನಾವಣೆಯಲ್ಲಿ ನಾವು ಜಿದ್ದಿಗೆ ಬಿದ್ದು ಸೋಲಿಸಿ ನಮ್ಮ ಸಾಮರ್ಥ್ಯ ಏನು ಅಂತ ತೋರಿಸುತ್ತೇವೆ ಎಂದರು
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 2018 ರಿಂದ 2020.22 ನೇ ಸಾಲಿನಲ್ಲಿ ವಿವಿಧ ನೀರಾವರಿ ನಿಗಮ. ಹಾಗೂ ಇನ್ನಿತರ ಇಲಾಖೆಗೆ ಬಂದಂತ SCP. ಹಾಗೂ TSP. ಅನುದಾನವನ್ನು ನಾಲ್ಕು ವರ್ಷದಲ್ಲಿ ಸಣ್ಣ ಮತ್ತು ಅತಿ ಸಣ್ಣ ದಲಿತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿದರೇ ಕಮಿಷನ್ ಸಿಗೋದಿಲ್ಲ ಎನ್ನುವ ಉದ್ದೇಶ ಇಟ್ಟುಕೊಂಡು. ದಲಿತರು ಇಲ್ಲದ ಕಾಲೊನಿಯಲ್ಲಿ ಸಂವಿಧಾನದ ವಿರುದ್ಧವಾಗಿ ತಮ್ಮ ಸಮುದಾಯದ ಗುತ್ತಿಗೆದಾರರ ಮೂಲಕ. ದಲಿತರ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ವರ್ಷ ಚುನಾವಣೆ ನೆಪ ಇಟ್ಟುಕೊಂಡು ಎಲ್ಲಿ ನನಗೆ ದಲಿತರ ವಿರೋಧಿ ಪಟ್ಟ ಕಟ್ಟುತ್ತಾರೆ ಎನ್ನುವ ಭಯದಲ್ಲಿ. ತನ್ನ ಸ್ವಂತ ಖರ್ಚಿನಲ್ಲಿ ಸರ್ಕಾರದ ಯೋಜನೆ ಎಂದು ಜನರಿಗೆ ಹೇಳಿ ಕೊಳವೆಬಾವಿ ಕೋರಿಸಿದ್ದಾರೆ. ಅವರಿಗೆ ಮೋಟಾರ್ ಪೈಪು. ವಿದ್ಯುತ್ ಸೌಕರ್ಯ ಸಿಗೋದಿಲ್ಲ . ದಯಮಾಡಿ ದಲಿತರ ವಿರೋಧಿ ಪಟ್ಟ ಕಟ್ಟಿಕೊಂಡ ಹಾಲಪ್ಪ ಆಚಾರ್ ಅವರನ್ನು ಈ ಬಾರಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ
,ಈರಪ್ಪ ಕುಡುಗುಂಟೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ
