Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಗಂಡಸರನ್ನು ಮೀರಿಸುವ ಹಾಗೆ ಪಡ ಕಡೆಯುವ ಮಂಗಳಮುಖಿ: ಭಿಕ್ಷೆ ಬೇಡಿ ಬದುಕು ಸಾಗಿಸುವವರಿಗೆ ಮಾದರಿ ಈ ಮಾದೇವಿ!

ಗದಗ: ಮಂಗಳಮುಖಿಯೊಬ್ಬರು ಗಂಡಸರನ್ನೂ ಮೀರಿಸುವಂತೆ ಪಡ (ಗುಂಡಿ ತೋಡುವುದು) ಕಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಾದೇವಿ ಅಸೂಟಿ ಗಮನ ಸೆಳೆಯುತ್ತಿರುವ ಮಂಗಳಮುಖಿ.

ರೈಲು ನಿಲ್ದಾಣ, ಬಸ್ ನಿಲ್ದಾಣ, ಜನಜಂಗುಳಿ ಸೇರಿದಂತೆ ಇತರಡೆ ಹಣ ವಸೂಲಿ ಮಾಡಿ ಬದುಕುತ್ತಿರುವ ಅದೆಷ್ಟೋ ಮಂಗಳಮುಖಿಯಾರಿಗೆ ಗ್ರಾಮದ ಮಾದೇವಿ ಅಸೂಟಿ ಮಾದರಿಯಾಗಿದ್ದಾರೆ.

ತನ್ನ ತೋಳು ಬಲ ಹಾಗೂ ಶ್ರಮದಿಂದ ಬದುಕುತ್ತಿರುವ ಮಾದೇವಿ ಅವರ ಈ ಕಾರ್ಯಕ್ಕೆ ಇಡೀ ಗ್ರಾಮವೇ ಸದ್ಯ ಬೆನ್ನು ತಟ್ಟುತ್ತಿದೆ.ಮಂಗಳಮುಖಿಯಾದರೂ ಗಂಡಸರನ್ನೂ ಮೀರಿಸುವಂತೆ ಪಡ ಹಾಕುವುದನ್ನು ನೋಡಿ ಅವರು ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.

ಅಬ್ಬಿಗೇರಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ನರೇಗಾ ಯೋಜನೆಯ ಬದುವು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ಮಾದೇವಿ ಅವರ ಪ್ರಾಮಾಣಿಕ ಕೆಲಸ ನಿರ್ವಹಣೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 

ಬದುವು ನಿರ್ಮಾಣ ಕಾಮಗಾರಿಯಲ್ಲಿ ಫಿಕಾಸಿ ಹಿಡಿದು ನೆಲ ಅಗಿಯುವುದು, ಮಣ್ಣು ಹೊರುವುದು ಸೇರಿದಂತೆ ನರೇಗಾದಲ್ಲಿ ಓರ್ವ ಗಂಡಾಳು ಏನು ಮಾಡುತ್ತಾನೋ ಅದನ್ನು ಅಚ್ಚುಕಟ್ಟಾ ಮಾಡುವ ಮೂಲಕ ಅಲ್ಲಿನ ಅಧಿಕಾರಿ ವರ್ಗವನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

ಓರ್ವ ಗಂಡಾಳು ಮಾಡುವ ಎಲ್ಲಾ ಕೆಲಸವನ್ನು ಮಾದೇವಿ ಅಸೂಟಿ ಮಾಡಿ ಮುಗಿಸುತ್ತಾರೆ. ಕೈಯಲ್ಲಿ ಪಿಕಾಸಿ ಹಿಡಿದು ನಿಂತರೆ ಯಾವುದೇ ಕೆಲಸವಾದರೂ ಸೈ. ಅದನ್ನು ಮಾಡಿ ಮುಗಿಸದೇ ಬರಲಾರಳು. ಅವಳ ಅಚ್ಚುಕಟ್ಟಾದ ಕೆಲಸ ಇತರರಿಗೂ ಮಾದರಿ ಎಂದು ಮಂಗಳಮುಖಿಯ ಕಾರ್ಯಕ್ಕೆ ನರೇಗಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಬ್ಬಿಗೇರಿ ಗ್ರಾಮ ಪಂಚಾಯತಿ ವತಿಯಿಂದ ರೈತರ ಜಮೀನುಗಳಲ್ಲಿ ಕಳೆದು ಹಲವು ದಿನಗಳಿಂದ ಬದು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಭಿಕ್ಷೆ ಬೇಡಿ ಬದುಕುವುದಕ್ಕಿಂತ ಈ ರೀತಿ ದುಡಿದು ಬದುಕು ಸಾಗಿಸುವುದರಲ್ಲಿ ನನಗೆ ಸುಖ ಇದೆ ಎನ್ನುತ್ತಾರೆ ಮಂಗಳಮುಖಿ ಮಾದೇವಿ ಅಸೂಟಿ…

Related posts

ಕಾಣೆಯಾದ ಮಗನನ್ನ ಹುಡುಕಿಕೊಟ್ಟವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ

satyadarshana

ಅಯೋಧ್ಯೆ ರಾಮಜನ್ಮ ಭೂಮಿ ಮಾದರಿಯಲ್ಲಿ ಸರ್ಕಾರದ ಹೊಸ ತಂತ್ರ​?

satyadarshana

ಗದಗ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಆಯೋಜಿಸಿ ಯಶಸ್ವಿಗೊಳಿಸಿ> ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ಅಧಿಕಾರಿಗಳಿಗೆ ಕರೆ

satyadarshana

Leave a Comment