Satya Darshana
ಬಿಸಿ ಬಿಸಿ ಸುದ್ದಿ
Otherಕ್ರೀಡೆಜಿಲ್ಲೆಟ್ರೆಂಡ್ದೇಶ-ವಿದೇಶಫೋಟೋಬಿಸಿ ಬಿಸಿ ಸುದ್ದಿರಾಜ್ಯಲೈಫ್ ಸ್ಟೈಲ್ವಿಡಿಯೋಸಿನಿಮಾ

ಐತಿಹಾಸಿಕ ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ

ಗದಗ. ಫೆಬ್ರುವರಿ 6: ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮಗಳು ಫೆಬ್ರುವರಿ 11 ರಂದು ಸಂಜೆ 6 ಗಂಟೆಗೆ ಲಕ್ಕುಂಡಿಯ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಜರುಗಲಿವೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಲಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಾರ್ಯಕ್ರಮದ ಉಪಸ್ಥಿತಿ ವಹಿಸುವರು. ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಲಕ್ಕುಂಡಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಲಲಿತಾ ಗದಗಿನ, ಉಪಾಧ್ಯಕ್ಷರಾದ ರೇವಣಸಿದ್ಧಪ್ಪ ಮುಳಗುಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.   

 ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರುಗಳು: ಗದಗನ ಶ್ರೀಮತಿ ಪೂಜಾ ಎಂ. ಬೇವೂರ ಮತ್ತು ತಂಡದಿಂದ ಸುಗಮ ಸಂಗೀತ, ಡೋಣಿಯ ನಿಂಗಪ್ಪ ಹಾಲಪ್ಪ ಗುಡ್ಡದ ಮತ್ತು ತಂಡದವರಿಂದ ಡೊಳ್ಳಿನಪದ, ಕಲಬುರಗಿ ಸದಾಶಿವ ಪಾಟೀಲ ಮತ್ತು ತಂಡದವರಿಂದ ವಚನ ಸಂಗೀತ, ಯಾವಗಲ್ ದ ಶ್ರೀ ಶಾಂಭವಿ ದೊಡ್ಡಾಟ ಮೇಳದವರಿಂದ ದೊಡ್ಡಾಟ, ಲಕ್ಕುಂಡಿಯ ಶೇಖಪ್ಪ ಮಲ್ಲಪ್ಪ ಗುಂಡಳ್ಳಿ ಅವರಿಂದ ಗೀಗೀಪದ, ಅಡವಿಸೋಮಾಪುರದ ವೀರಣ್ಣ ಚನ್ನಪ್ಪ ಅಂಗಡಿಯವರಿಂದ ಸುಗ್ಗಿ ಕುಣಿತ, ಲಕ್ಕುಂಡಿಯ ಶಿವಪ್ಪ ದೇವಪ್ಪ ಭಜಂತ್ರಿ ಮತ್ತು ತಂಡದವರಿಂದ ಜನಪದ ಗೀತೆ, ಹೊಂಬಳದ ಬಸವರಾಜ ಅಡವಳ್ಳಿ ಮತ್ತು ತಂಡದವರಿಂದ ವಚನ ಸಂಗೀತ, ಲಕ್ಕುಂಡಿಯ ಶ್ರೀ ಪುಟ್ಟರಾಜ ಸೇವಾ ಸಮಿತಿ ಜನಪದ ಕಲಾತಂಡದವರಿಂದ ಜನಪದ ಸಂಗೀತ, ಕೊತಬಾಳದ ಶ್ರೀ ಶಂಕರಪ್ಪ ಸಂಕಣ್ಣವರ ಮತ್ತು ತಂಡದಿಂದ ಲಾವಣಿ ಪದ, ಲಕ್ಕುಂಡಿಯ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯವರಿಂದ ಸಮೂಹ ನೃತ್ಯ , ಪಾಪನಾಶಿಯ ಶ್ರೀಮತಿ ಸಾವಿತ್ರ ಲಮಾಣಿ ಮತ್ತು ತಂಡದವರಿಂದ ಭಾವಗೀತೆ, ಲಕ್ಕುಂಡಿಯ ಸರಕಾರಿ ಬಾಲಕಿಯರ ಪ್ರೌಢಶಾಲೆಯವರಿಂದ ಕಲಾ ವೈಭವ, ವೀರೇಶ್ವರ ಪುಣ್ಯಾಶ್ರಮದ ಪಂ. ವೆಂಕಟೇಶ ಅಲ್ಕೋಡ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ, ಶಿರಸಿಯ ಕು. ಅಂಜಲಿ ಶ್ರೀಧರ ಮತ್ತು ತಂಡದವರಿಂದ ನೃತ್ಯ, ರೋಣದ ಶ್ರಿಮತಿ ಶಕುಂತಲಾ ಹಾಳಕೇರಿ ಮತ್ತು ತಂಡದವರಿಂದ ದೀಪನೃತ್ಯ , ಗದಗನ ನಟರಂಗ ಸಾಂಸ್ಕøತಿಕ ಕೇಂದ್ರದವರಿಂದ ಅತ್ತಿಮಬ್ಬೆ ನಾಟಕ, ಮುಂಡರಗಿಯ ನಾಟ್ಯಬಿಂದು ಜನಪದ ಕಲಾ ತಂಡದವರಿಂದ ಸಮೂಹ ನೃತ್ಯ , ಸರಿಗಮಪ ತಂಡದ ಜ್ಞಾನೇಶ ಮೆಹಬೂಬಸಾಬ ಅವರಿಂದಜುಗಲ್ ಬಂದಿ, ಬೆಂಗಳೂರಿನ ಪ್ಯೂಜನ್ ಕ್ಲಾಸಿಕ ತಂಡದಿಂದ ಕ್ಲಾಸಿಕಲ್ ಇವೆಂಟ , ವಿಜಯಲಕ್ಷ್ಮೀ ಕಂಪ್ಲಿ ಕಾವೆಂಶ್ರೀ ತಂಡ ದವರಿಂದ ಭಗವದ್ಗೀತೆ ರೂಪಕ, ಮಿಮಿಕ್ರಿ ಗೋಪಿ ಮತ್ತು ಕಾರ್ತಿಕ ಪತ್ತಾರ ಅವರಿಂದ ಹಾಸ್ಯ , ಕು. ಅನನ್ಯ ಭಟ್ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿವೆ.

Related posts

ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ.

satyadarshana

ಸತತ ಪರಿಶ್ರಮದಿಂದಲೇ ಸಾಧನೆ ಸಾಧ್ಯ ಶ್ರೀಮತಿ ಕೊಟಗಿ

satyadarshana

ಶಾಸಕರ ಎದುರೇ ಕಾರ್ಯಕರ್ತನಿಗೆ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು.. 

satyadarshana

Leave a Comment