Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮ

ಗದಗನವೆಂಬರ್ 2:  ಕರ್ನಾಟಕ ಲೋಕಾಯುಕ್ತ ನಿಬಂಧಕರ  ಆದೇಶದಂತೆ ಗದಗ ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಯಿತು.  
          ಅಕ್ಟೋಬರ್ 31 ರಂದು  ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಗದಗದಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ  ಜಾಗೃತ ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ  ಪೊಲೀಸ್ ಉಪಾಧೀಕ್ಷಕರಾದ  ಶಂಕರ ಎಂ. ರಾಗಿ  ಅವರು  ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಭೃಷ್ಟಾಚಾರ ವಿರುದ್ದದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
       ಅದೇ ದಿನದಂದು ಬಸವೇಶ್ವರ ಪಿ.ಯು ಕಾಲೇಜಿನಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ  ಜಾಗೃತ ಸಪ್ತಾಹದ ಅಂಗವಾಗಿ ಭೃಷ್ಟಾಚಾರ ವಿರುದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ   ವಾಯ್.ಎಸ್.ಮತ್ತೂರ ರವರು ವಹಿಸಿಕೊಂಡಿದ್ದರು.  ಪೊಲೀಸ್ ಉಪಾಧೀಕ್ಷಕ  ಶಂಕರ ಎಂ. ರಾಗಿ,  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ವಿರುದ್ದ ಜಾಗೃತಿಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.  ಅಜೀಜ್ ಕಲಾದಗಿ ಪ್ರಾಸ್ತಾವಿಕವಾಗಿ ಮಾತನಾಡಿ ಭೃಷ್ಟಾಚಾರ ವಿರುದ್ದದ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.   ರವಿ ಪುರುಶೋತ್ತಮ್ ಅವರು  ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಶ್ರೀಮತಿ ರೇಷ್ಮಾ ಎಚ್.  ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ  ಕಛೇರಿಯ ಸಿಬ್ಬಂದಿ   ಪಿ.ಎಚ್.ಗುಬ್ಬಿ ಸಿಎಚ್‍ಸಿ,   ಎಂ.ಎಸ್.ಗಾರ್ಗಿ ಸಿಎಚ್‍ಸಿ,  ಎಸ್.ಎಸ್.ಅಮರಶೆಟ್ಟಿ ಸಿಎಚ್‍ಸಿ,   ಮುತರಡ್ಡಿ ಬಾರಡ್ಡಿ ಸಿಪಿಸಿ,   ಎಸ್.ವಿ.ನೈನಾಪೂರ, ಎಪಿಸಿ,  .ಎಮ್.ಹಳ್ಳಳ್ಳಿ ಎಪಿಸಿ ರವರು ಹಾಜರಿದ್ದರು.
         ನಂತರ  ಗದಗ ಹಳೇ ಬಸ್ ನಿಲ್ದಾಣದಲ್ಲಿರುವ ಅಟೋ ನಿಲ್ದಾಣಕ್ಕೆ ಭೇಟಿ ನೀಡಿ ಹಾಜರಿದ್ದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಭ್ರಷ್ಟಾಚಾರ ವಿರುದ್ದ ಜಾಗೃತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸದರಿ ಕಾರ್ಯಕ್ರಮದ ಮಾಹಿತಿಯನ್ನು ನೀಡಿ ಜಾಗೃತಿಯನ್ನು ಮೂಡಿಸಿ  ಭ್ರಷ್ಟಾಚಾರ ವಿರುದ್ದದ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಲಾಯಿತು.    ಶ್ರೀ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ “ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ” ಜಾಗೃತ ಸಪ್ತಾಹದ ಅಂಗವಾಗಿ ಭೃಷ್ಟಾಚಾರ ವಿರುದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.    ಕಾರ್ಯಕ್ರಮದಲ್ಲಿ   ರವಿ ಪುರುಶೋತ್ತಮ್   ಎಲ್ಲ ಅಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ, ಮತ್ತು ವಿದ್ಯಾರ್ಥಿಗಳಿಗೆ ಸ್ವಾಗತಿಸಿದರು.   ಶಂಕರ ಎಂ. ರಾಗಿ   ಭ್ರಷ್ಟಾಚಾರ ವಿರುದ್ದದ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು.   ಅಜೀಜ್ ಕಲಾದಗಿ  ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ  ಲಂಚವನ್ನು ಕೊಡುವದು ಮತ್ತು ಪಡೆದುಕೊಳ್ಳುವದು ಅಪರಾಧವಾಗಿದ್ದು, ಯಾರೂ ಸಹ ಲಂಚವನ್ನು ಕೊಡಬಾರದು ಹಾಗೂ ತೆಗೆದುಕೊಳ್ಳಬಾರದು ಎಂದು ಮನವರಿಕೆ  ಮಾಡಿಕೊಟ್ಟರು.  ಗುರುಬಸವ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆಡಳಿತಾಧಿಕಾರಿ ಮಂಜುನಾಥ ಕಂಡಕಿ ಅಧ್ಯಕ್ಷತೆ ವಹಿಸಿದ್ದರು.  ಪ್ರಕಾಶ ಶಿವಶಿಂಪೇರ  ಕಾರ್ಯಕ್ರಮ ನಿರೂಪಿಸಿದರು.   ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿಯ ಸಿಬ್ಬಂದಿ ಪಿ.ಎಚ್.ಗುಬ್ಬಿ ಸಿಎಚ್‍ಸಿ, ಎಂ.ಎಸ್.ಗಾರ್ಗಿ ಸಿಎಚ್‍ಸಿ, ಎಸ್.ಎಸ್.ಅಮರಶೆಟ್ಟಿ ಸಿಎಚ್‍ಸಿ, ಮುತರಡ್ಡಿ ಬಾರಡ್ಡಿ ಸಿಪಿಸಿ, ಸ್.ವಿ.ನೈನಾಪೂರ, ಎಪಿಸಿ, ಆರ್.ಎಮ್.ಹಳ್ಳಳ್ಳಿ ಎಪಿಸಿ ರವರು ಹಾಜರಿದ್ದರು.

Related posts

ನಾಗರೀಕ ಸಮಾಜದ ಸುರಕ್ಷತೆಗೆ ಕಾನೂನಿನ ಅರಿವು ಅಗತ್ಯ

satyadarshana

: ಮಾರಣಬಸರಿ ಟು ಜಕ್ಕಲಿ ರಸ್ತೆ ಎರಡು ವರ್ಷವಾದರೂ ಡಾಂಬರ ಕಾಣದ ರಸ್ತೆ

satyadarshana

ಸ್ವಚ್ಚತಾ ಹೀ ಸೇವಾ ಆಂದೋಲನ: ಪ್ರತಿಜ್ಞಾ ವಿಧಿ ಸ್ವೀಕಾರ

satyadarshana

Leave a Comment