Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಉದ್ಯಮಶೀಲತಾಭಿವೃದ್ಧಿ ಪ್ರೇರಣಾ ತರಬೇತಿ ಕಾರ್ಯಕ್ರಮ ಉದ್ಘಾಟನೆ » ಪ್ರಶಾಂತ ವರಗಪ್ಪನವರ

ಗದಗ ( ಸತ್ಯದರ್ಶನ ) ಸೆಪ್ಟೆಂಬರ್ 23: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀನೋಪಾಯ ಇಲಾಖೆ, ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮ ಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸಿ. ಎಮ್. ಕೆ. ಕೆ. ವಾಯ್. ಯೋಜನೆಯಡಿಯಲ್ಲಿ ಕೌಶಲ್ಯ ತರಬೇತಿ ಪಡೆಯುತ್ತಿರುವ ಆಸಕ್ತ ಶಿಬಿರಾರ್ಥಿಗಳಿಗೆ 3 ದಿನದ ಉದ್ಯಮಶೀಲತಾಭಿವೃದ್ಧಿ ಪ್ರೇರಣಾ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು 2 ತಂಡದಲ್ಲಿ ಸೆಪ್ಟೆಂಬರ್ 22 ರಂದು ಬೆಟಗೇರಿಯ ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆ ಯಲ್ಲಿ ಜರುಗಿತು.

        ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉದ್ಯಮ ಕ್ಷೇತ್ರಕ್ಕೆ ಇರುವ ಬೇಡಿಕೆ ಬಗ್ಗೆ ಅಭ್ಯರ್ಥಿಗಳಿಗೆ ವಿವರಿಸಿದರು. ಎಲ್ಲರೂ ಉದ್ಯೋಗ ಸೃಷ್ಠಿಸಿ, ಉದ್ಯೋಗವನ್ನು ನೀಡಿ ಎಂದರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.

      ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ. ಬಸವರಾಜ ಅವರು ಮಾತನಾಡಿ ಕೌಶಲ್ಯಾಭಿವೃದ್ಧಿ ಇಲಾಖೆಯ ಹಲವಾರು ಯೋಜನೆಗಳ ಬಗ್ಗೆ ವಿವರಿಸಿದರು, ಉದ್ಯಮಿದಾರರಾಗಲು ಉದ್ಯಮಶೀಲತಾ ತರಬೇತಿಯು ಅತೀ ಅವಶ್ಯವಾಗಿದೆ. ಎಲ್ಲರೂ ಈ ತರಬೇತಿಯ ಸದುಪಯೋಗಪಡಿಸಿಕೊಳ್ಳಬೇಕೆಂದು ನುಡಿದರು.

ಅನನ್ಯನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಾದಿರಾಜ್ ಟಿ. ಸಿಡಾಕ್ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ, ಮಂಜುನಾಥ. ಮುಳಗುಂದ, ವಿಜಯಲಕ್ಷ್ಮಿ. ನೆಲ್ಲೂರ , 60 ಆಸಕ್ತ ಶಿಭಿರಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರವೀಣ ದೇಶಪಾಂಡೆ, ಶ್ರೀಮತಿ ರಶ್ಮಿ ಛಡಾ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು

Related posts

ಪರಿವರ್ತನಾ ಯುಗದ ಪ್ರತಿ ಮೂರ್ತಿಗಳು 

satyadarshana

ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು

satyadarshana

ಗದಗ ಜಿಲ್ಲಾಡಳಿತ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

satyadarshana

Leave a Comment