Satya Darshana
ಬಿಸಿ ಬಿಸಿ ಸುದ್ದಿ
Otherದೇಶ-ವಿದೇಶಬಿಸಿ ಬಿಸಿ ಸುದ್ದಿ

ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ

ನವದೆಹಲಿ, ಮಾ.27- ಕರ್ನಾಟಕದ ಕೈಗಾದಲ್ಲಿ 700 ಮೆಗಾವ್ಯಾಟ್ ಪರಮಾಣು ಸಾಮಥ್ರ್ಯದ ಎರಡು ವಿದ್ಯುತ್ ಘಟಕಗಳು ಸೇರಿದಂತೆ ಮುಂದಿನ ಮೂರು ವರ್ಷದಲ್ಲಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ಸ್ಥಾವಗಳ ಸ್ಥಾಪನೆಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ.

ಕೈಗಾದ ಯೋಜನೆಯ ಸ್ಥಳದಲ್ಲಿ ಉತ್ಖನನ ಚಟುವಟಿಕೆಗಳನ್ನು ಒಳಗೊಂಡಿರುವ ಪೂರ್ವ-ಯೋಜನಾ ಹಂತದಿಂದ ಪರಮಾಣು ಶಕ್ತಿ ರಿಯಾಕ್ಟರ್‍ಗಳ ನಿರ್ಮಾಣದ ಪ್ರಾರಂಭವನ್ನು ಮೊದಲ ಕಾಂಕ್ರೀಟ್ ಸುರಿಯುವಿಕೆ (ಎಫ್‍ಪಿಸಿ) ಮೂಲಕ ಆರಂಭಿಸಲಾಗುತ್ತಿದೆ.

ಕೈಗಾ ಘಟಕದ 5 ಮತ್ತು 6 ಘಟಕಗಳಲ್ಲಿ 2023ರ ವೇಳೆಗೆ ಎಫ್‍ಪಿಸಿ ನಡೆಯುವುದನ್ನು ನಿರೀಕ್ಷಿಸಲಾಗಿದೆ. ಗೋರಖ್‍ಪುರ ಹರ್ಯಾಣದ ಅಣು ವಿದ್ಯುತ್ ಪ್ರಯೋಂಜನ್ 3 ಮತ್ತು 4ರ ಘಟಕಗಳಲ್ಲಿ 2024 ರ ವೇಳೆಗೆ, ರಾಜಸ್ಥಾನದ ಮಹಿ ಬನ್ಸ್ವಾರಾ ಅಣುಶಕ್ತಿ ಯೋಜನೆ 1 ರಿಂದ 4 ಘಟಕದವರೆಗೆ, ಮಧ್ಯಪ್ರದೇಶ ಚುಟ್ಕಾ ಪರಮಾಣು ಶಕ್ತಿ ಯೋಜನೆ 1 ಮತ್ತು 2ಘಟಕಗಳಿಗೆ 2025ರ ವೇಳೆಗೆ ಎಫ್‍ಪಿಸಿ ಆರಂಭಿಸುವುದಾಗಿ ಪರಮಾಣು ಶಕ್ತಿ ಇಲಾಖೆ (ಡಿಎಇ) ಅಕಾರಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 2017ರ ಜೂನ್ 2017 ರಲ್ಲಿ 700 ಮೆಗಾವ್ಯಾಟ್‍ನ 10 ಪ್ರೆಶರೈಸ್ ಹೆವಿ ವಾಟರ ರಿಯಾಕ್ಟರ್ (ಪಿಎಚ್‍ಡಬ್ಲ್ಯೂಆರ್) ಸ್ಥಾವರಗಳ ಅಭಿವೃದ್ಧಿಗೆ ಅನುಮೋದನೆ ನೀಡಿದೆ. 1.05 ಲಕ್ಷ ಕೋಟಿ ವೆಚ್ಚದಲ್ಲಿ ದೇಶಿಯ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ.

ವೆಚ್ಚವನ್ನು ಕಡಿಮೆ ಮಾಡುವ ಮತ್ತು ನಿರ್ಮಾಣ ಸಮಯವನ್ನು ವೇಗಗೊಳಿಸುವ ಉದ್ದೇಶದಿಂದ ಒಂದೇ ಬಾರಿಗೆ 10 ಪರಮಾಣು ಶಕ್ತಿ ರಿಯಾಕ್ಟರ್‍ಗಳನ್ನು ನಿರ್ಮಿಸಲು ಸರ್ಕಾರವು ಮೊದಲ ಬಾರಿಗೆ ಅನುಮೋದನೆ ನೀಡಿತು.

ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಒಮ್ಮೆಲೆ ಭಾರೀ ಪ್ರಮಾಣದ ಯಂತೋಪಕರಣಗಳಿಗೆ ಖರೀದಿ ಆದೇಶ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಅಕದೊತ್ತಡದ ಸ್ಟೀಮ್ ಜನರೇಟರ್‍ಗಳು, ಎಸ್‍ಎಸ್ 304 ಎಲ್ ಲ್ಯಾಟಿಸ್ ಟ್ಯೂಬ್‍ಗಳು ಮತ್ತು ಎಂಡ್ ಶೀಲ್ಡ್ ಪ್ಲೇಟ್‍ಗಳು, ಪ್ರೆಶರೈಸರ್ ಫೋರ್ಜಿಂಗ್‍ಗಳು, ಬ್ಲೀಡ್ ಕಂಡೆನ್ಸರ್ ಫೋರ್ಜಿಂಗ್‍ಗಳು, ಇಂಕೋಲೈ 800 ಟ್ಯೂಬ್‍ಗಳು, 40 ಸ್ಟೀಮ್ ಜನರೇಟರ್‍ಗಳು, ರಿಯಾಕ್ಟರ್ ಹೆಡರ್ಸ್ ಗಳನ್ನು ವಿದೇಶದಿಂದ ಖರೀದಿಸಬೇಕಿದೆ ಎಂದು ಅಣು ಶಕ್ತಿ ಮಂತ್ರಾಲಯದ ಅಕಾರಿಗಳು ತಿಳಿಸಿದ್ದಾರೆ.

ಗೋರಖ್‍ಪುರದ ಮೂರು ಮತ್ತು ನಾಲ್ಕನೆ ಘಕಟಗಳು, ಕೈಗಾ ಸ್ಥಾವರದ ಐದು ಮತ್ತು ಆರಕ್ಕೆ ಘಕಟನಗಳಿಗೆ ಎಂಜಿನಿಯರಿಂಗ್ ಖರೀದಿ, ಸಂಗ್ರಹಣೆ ಮತ್ತು ನಿರ್ಮಾಣ ಪ್ಯಾಕೇಜ್‍ಗಾಗಿ ಆದೇಶ ನೀಡಲಾಗಿದೆ. ಫ್ಲೀಟ್ ಮೋಡ್ ಅಡಿಯಲ್ಲಿ ಸ್ಥಾವರಗಳ ನಿರ್ಮಾಣ ಆರಂಭವಾಗುತ್ತಿದ್ದು, ಮೊದಲ ಕಾಂಕ್ರೀಟ್ ಸುರಿಯುವಿಕೆಯಿಂದ ಐದು ವರ್ಷಗಳ ಅವಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಪೂರ್ಣಗೊಳ್ಳಲಿದೆ.

ಪ್ರಸ್ತುತ ಭಾರತವು ಒಟ್ಟು 6780 ಮೆಗಾವ್ಯಾಟ್ ಸಾಮಥ್ರ್ಯದ 22 ರಿಯಾಕ್ಟರ್‍ಗಳನ್ನು ಹೊಂದಿದೆ. ಕಳೆದ ವರ್ಷ ಜನವರಿ 10 ರಂದು ಗುಜರಾತ್‍ನ ಕಾಕ್ರಪಾರ್‍ನಲ್ಲಿರುವ 700 ಮೆಗಾವ್ಯಾಟ್ ರಿಯಾಕ್ಟರ್ ಅನ್ನು ಗ್ರಿಡ್‍ಗೆ ಸಂಪರ್ಕಿಸಲಾಗಿದೆ. ಆದರೆ ಇದು ಇನ್ನೂ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ.

ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಮತ್ತು ಭಾರೀ ನೀರನ್ನು ಮಾಡರೇಟರ್ ಆಗಿ ಬಳಸುವ ಪಿಎಚ್‍ಡಬ್ಲ್ಯೂಆರ್ ಭಾರತದ ಪರಮಾಣು ಶಕ್ತಿ ಕಾರ್ಯಕ್ರಮದ ಮುಖ್ಯ ಆಧಾರಗಳಾಗಿವೆ. 1960 ರ ದಶಕದಲ್ಲಿ ಕೆನಡಾದ ಬೆಂಬಲದೊಂದಿಗೆ ರಾಜಸ್ಥಾನದ ರಾವತ್‍ಭಟದಲ್ಲಿ 220 ಮೆಗಾವ್ಯಾಟ್ ಸಾಮಥ್ರ್ಯದ ಭಾರತದ ಮೊದಲ ಎರಡು ಪಿಎಚ್‍ಡಬ್ಲ್ಯೂಆರ್‍ಗಳನ್ನು ಸ್ಥಾಪಿಸಲಾಯಿತು.

1974 ರಲ್ಲಿ ಭಾರತದ ಶಾಂತಿಯುತ ಪರಮಾಣು ಪರೀಕ್ಷೆಗಳ ನಂತರ ಕೆನಡಾ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಎರಡನೇ ರಿಯಾಕ್ಟರ್ ಅನ್ನು ದೇಶೀಯ ಘಟಕಗಳೊಂದಿಗೆ ನಿರ್ಮಿಸಬೇಕಾಯಿತು. ಪ್ರಮಾಣೀಕೃತ ವಿನ್ಯಾಸ ಮತ್ತು ಸುಧಾರಿತ ಸುರಕ್ಷತಾ ಕ್ರಮಗಳೊಂದಿಗೆ ಪ್ರತಿ 220 ಮೆಗಾವ್ಯಾಟ್, 14 ಪಿಎಚ್‍ಡಬ್ಲ್ಯೂಆರ್‍ಗಳನ್ನು ಹಲವು ವರ್ಷಗಳಲ್ಲಿ ನಿರ್ಮಿಸಲಾಗಿದೆ.

ವಿದ್ಯುತ್ ಉತ್ಪಾದನಾ ಸಾಮಥ್ರ್ಯವನ್ನು 540 ಮೆಗಾವ್ಯಾಟ್‍ಗೆ ಹೆಚ್ಚಿಸಲು ಭಾರತೀಯ ಇಂಜಿನಿಯರ್‍ಗಳು ವಿನ್ಯಾಸವನ್ನು ಮತ್ತಷ್ಟು ಸುಧಾರಿಸಿ, ಮಹಾರಾಷ್ಟ್ರದ ತಾರಾಪುರದಲ್ಲಿ ಎರಡು ರಿಯಾಕ್ಟರ್ ಗಳನ್ನು ಸ್ಥಾಪಿಸಿದ್ದಾರೆ. ಸಾಮಥ್ರ್ಯವನ್ನು 700 ಮೆಗಾವ್ಯಾಟ್‍ಗೆ ಹೆಚ್ಚಿಸಲು ಮತ್ತಷ್ಟು ಮೇಲ್ದರ್ಜೆಗೆರಿಸಲಾಗಿದೆ.

 

Related posts

ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಮಗನ ಅಂತ್ಯಸಂಸ್ಕಾರ * ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ

satyadarshana

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಘೋಷಣೆ ಬೆನ್ನಲ್ಲೇ ಸಿ.ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ ಬಿಜೆಪಿ ಟಿಕೆಟ್​ಗಾಗಿ ಕಸರತ್ತು

satyadarshana

ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ

satyadarshana