Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ರಾಜ್ಯದ ವಿಧಾನ ಪರಿಷತ್‍ನ 25 ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಭರ್ಜರಿ ಮತದಾನ

ಸತ್ಯದರ್ಶನ
ಬೆಂಗಳೂರು, ಡಿ.10- ರಾಜ್ಯದ ವಿಧಾನ ಪರಿಷತ್‍ನ 25 ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಭರ್ಜರಿ ಮತದಾನವಾಗಿದೆ.

ವಿಧಾನಪರಿಷತ್ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿ ಮಠ್ ಸೇರಿದಂತೆ ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಯಿತು.

ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಿತು.

ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಪುರಸಭೆ, ನಗರಸಭೆ, ಗ್ರಾಪಂ ಸದಸ್ಯರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಬೆಳಗ್ಗೆಯೇ ಮತದಾನ ಮಾಡಿದರು. ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಸೇರಿದಂತೆ ಒಟ್ಟು 98,846 ಮತದಾರರಿದ್ದು, 6073 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಮತದಾನ ಆರಂಭವಾಗಿದೆ.

ಬೆಳಗ್ಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರು, ಸಂಸದರು, ಸಚಿವರು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ಸದಸ್ಯರು ಮತದಾನ ಮಾಡಿದರು. ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ತಾಲ್ಲೂಕಿನ ಮತಗಟ್ಟೆ 297ರಲ್ಲಿ ಮತ ಚಲಾಯಿಸಿದರು. ಯಡಿಯೂರಪ್ಪ ಅವರು ಶಿಕಾರಪುರದ ಪುರಸಭೆಯಲ್ಲಿ ಮತದಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ ಚಲಾಯಿಸಿದರೆ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಮತ ಚಲಾವಣೆ ಮಾಡಿದರು.

ಪ್ರತಿ ಗ್ರಾಪಂನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಮತಗಳು ಅಸಿಂಧುವಾಗದಂತೆ ಪಕ್ಷದ ಕಾರ್ಯಕರ್ತರುಗಳು ಮತದಾರರಿಗೆ ಜಾಗೃತಿ ಮೂಡಿಸಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು. ತಮ್ಮ ಅಭ್ಯರ್ಥಿ ಮುಂದೆ ಒಂದು ಗೆರೆ ಎಳೆಯಬೇಕು ಎಂದು ಮತಗಟ್ಟೆಗೆ ಹೋಗುವವರೆಗೂ ಜಾಗೃತಿ ಮೂಡಿಸುತ್ತಿದ್ದುದು ಕಂಡುಬಂತು.

 

 

 

 

 

Related posts

ಸೌಜನ್ಯಶೀಲ, ಅತ್ಯಂತ ನಿಗರ್ವಿ, ಅಜಾತಶತ್ರು ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭಕ್ಕೆ ಮಾನ್ಯತೆ ತಂದಕೊಟ್ಟಿರುವ ಪತ್ರಕರ್ತ ಮಂಜುನಾಥಗೆ ಮತ್ತೊಂದು ಉನ್ನತ ಹುದ್ದೆ

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.09.04.2023

satyadarshana

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

cradmin

Leave a Comment