Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ ಗದಗ,ಮುದ್ರಣಾ ಕಾಶಿ, ಸಂಗೀತದ ನಾಡಿಗೆ ಈ ಬಾರಿ 2 ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.

ಸತ್ಯ ದರ್ಶನ
 ಬೆಂಗಳೂರು .2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ಪ್ರಶಸ್ತಿ ಪಡೆಯುತ್ತಿರುವ 66 ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ.
ವಿಶೇಷವೆಂದರೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಹರಿಗೆ ನೀಡುವ ಸಲುವಾಗಿ ರಾಜ್ಯ ಸರಕಾರ ಜನರಿಂದಲೇ ಶಿಫಾರಸು ಆಹ್ವಾನಿಸಿತ್ತು.ಪ್ರತೀ ವರ್ಷ ಐದರಿಂದ ಆರು ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದರೆ ಈ ವರ್ಷ 28 ಸಾವಿರ ಶಿಫಾರಸುಗಳು ಬಂದಿದ್ದು, ಅಳೆದು ತೂಗಿ :65 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿ
ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ  ಗದಗ.
ವೀರೇಶ್ವರ ಪುಣ್ಯಾಶ್ರಮ, ಸಂಗೀತ ಕಾಶಿ ಎಂದೆ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸಂಗೀತ ಗಾನ ಸುಧೆಯು ಪಾವನ ಗಂಗೆಯಾಗಿದ್ದು, ಸಂಗೀತ ಸಾಧಕರಿಗೆ ಇದು ಪುಣ್ಯದ ಸ್ವರ್ಗ ಭೂಮಿ. ಗದುಗಿನ ಪುಣ್ಯಾಶ್ರಮ ಗುರುಕುಲ ಪದ್ಧತಿಯಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಅಂಧ ಮಕ್ಕಳ ಸಂಗೀತ ಸಾಹಿತ್ಯ ಮಹಾವಿದ್ಯಾಲಯ 1914 ರಲ್ಲಿ ಸ್ಥಾಪಿತಗೊಂಡಿತ್ತು. ನಾಡಿನ ಶಿಷ್ಯರು-ಸದ್ಭಕ್ತರ ಸಹಾಯ ಸಹಕಾರಗಳೊಂದಿಗೆ ಪುಣ್ಯಾಶ್ರಮ ಅಭಿವೃದ್ಧಿ ಹೊಂದಿ ಹೆಮ್ಮರವಾಗಿ ಬೆಳೆಯಿತು. ಪ್ರತಿನಿತ್ಯ ನಿರಂತರ ಅನ್ನ ದಾಸೋಹ, ಸಂಗೀತ ದಾಸೋಹ ಹಾಗೂ ಅಕ್ಷರ ದಾಸೋಹದಂತೆ ತ್ರಿವಿಧ ದಾಸೋಹಗಳೊಂದಿಗೆ ಮಾದರಿಯ ಸಂಸ್ಥೆ, ಆಶ್ರಮವಾಗಿ ರೂಪಗೊಂಡಿದೆ. ಇದನ್ನೂ
ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ , ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.
ಕರ್ನಾಟಕ ಹಿಮೋಫೀಲಿಯಾ ಸೊಸೈಟಿ , ದಾವಣಗೆರೆ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರಗಿ
ಶ್ರೀ ರಾಮಕೃಷ್ಣಾಶ್ರಮ ಮಂಗಳೂರು
ಆಲ್ ಇಂಡಿಯಾ ಜೈನ ಯೂಥ್ ಫೆಡರೇಶನ್ ಹುಬ್ಬಳ್ಳಿ
ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ
ಉತ್ಸವ್ ರಾಕ್ ಗಾರ್ಡೆನ್ ಹಾವೇರಿ
ಅದಮ್ಯ ಚೇತನ ಬೆಂಗಳೂರು
ಸ್ಟೆಪ್ ಒನ್ ಬೆಂಗಳೂರು
ಬನಶಂಕರಿ ಮಹಿಳಾ ಸಮಾಜ ಬೆಂಗಳೂರು
ಸಾಹಿತ್ಯ
ಮಹಾದೇವ ಶಂಖನಾಪುರ, ಚಾಮರಾಜನಗರ
ಪ್ರೊ. ಡಿ.ಟಿ. ರಂಗಸ್ವಾಮಿ, ಚಿತ್ರದುರ್ಗ
ಜಯಲಕ್ಷ್ಮೀ ಮಂಗಳ ಮೂರ್ತಿ, ರಾಯಚೂರು
ಅಜ್ಜ೦ಪುರ ಮಂಜುನಾಥ್ , ಚಿಕ್ಕಮಗಳೂರು
ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ವಿಜಯಪುರ
ಸಿದ್ದಪ್ಪ ಬಿದರಿ, ಬಾಗಲಕೋಟೆ
ರಂಗಭೂಮಿ
ಫಕೀರಪ್ಪ ರಾಮಪ್ಪ ಕೊಡಾಯಿ ಹಾವೇರಿ
ಪ್ರಕಾಶ್ ಬೆಳವಾಡಿ, ಚಿಕ್ಕಮಗಳೂರು
ರಮೇಶ್ ಗೌಡ ಪಾಟೀಲ್, ಬಳ್ಳಾರಿ
ಮಲ್ಲೇಶಯ್ಯ ಎನ್, ರಾಮನಗರ
ಸಾವಿತ್ರಿ ಗೌಡರ್, ಗದಗ

ಜಾನಪದ
ಆರ್.ಬಿ.ನಾಯಕ, ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್ , ಶಿವಮೊಗ್ಗ
ದುರ್ಗಪ್ಪ ಚೆನ್ನದಾಸರ , ಬಳ್ಳಾರಿ
ಬನ್ನಂಜೆ ಬಾಬು ಅಮೀನ್, ಉಡುಪಿ
ಮಲ್ಲಿಕಾರ್ಜುನ ರಾಚಪ್ಪ ಮುದಕವಿ, ಬಾಗಲಕೋಟೆ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಧಾರವಾಡ
ಮಾಹಾರುದ್ರಪ್ಪ ವೀರಪ್ಪ ಇಟಗಿ, ಹಾವೇರಿ
ಸಂಗೀತ

ತ್ಯಾಗರಾಜು ಸಿ, ನಾದಸ್ವರ , ಕೋಲಾರ

ಹೆರಾಲ್ಡ್ ಸಿರಿಲ್ ಡಿಸೋಜಾ , ದಕ್ಷಿಣ ಕನ್ನಡ

ಶಿಲ್ಪಕಲೆ

ಡಾ.ಜಿ.ಜ್ಞಾನಾನಂದ, ಚಿಕ್ಕಬಳ್ಳಾಪುರ

ವೆಂಕಣ್ಣ ಚಿತ್ರಗಾರ, ಕೊಪ್ಪಳ

ಸಮಾಜ ಸೇವೆ

ಸೂಲಗಿತ್ತಿ ಯಮುನವ್ವ (ಸಾಲಾಮಂಟಪಿ )ಬಾಗಲಕೋಟೆ

ಮದಲಿ ಮಾದಯ್ಯ , ಮೈಸೂರು

ಮುನಿಯಪ್ಪ ದೊಮ್ಮಲೂರು , ಬೆಂಗಳೂರು ನಗರ

ಬಿ.ಎಲ್.ಪಾಟೀಲ್ , ಅಥಣಿ, ಬೆಳಗಾವಿ

ಡಾ.ಜೆ. ಎನ್. ರಾಮಕೃಷ್ಣೇ ಗೌಡ , ಮಂಡ್ಯ

ವೈದ್ಯಕೀಯ

ಡಾ.ಸುಲ್ತಾನ್ ಬಿ ಜಗಳೂರು , ದಾವಣಗೆರೆ

ಡಾ. ವ್ಯಾಸ ದೇಶಪಾಂಡೆ,(ವೇದ ವ್ಯಾಸ ) ಧಾರವಾಡ

ಡಾ. ಎ .ಆರ್. ಪ್ರದೀಪ್ (ದಂತವೈದ್ಯ) ಬೆಂಗಳೂರು ನಗರ

ಡಾ.ಸುರೇಶ ರಾವ್ , ದಕ್ಷಿಣ ಕನ್ನಡ

ಡಾ.ಸುದರ್ಶನ್, ಬೆಂಗಳೂರು

ಡಾ. ಶಿವನಗೌಡ ರುದ್ರಗೌಡ ರಾಮನಗೌಡ , ಧಾರವಾಡ

ಕ್ರೀಡೆ

ರೋಹನ್ ಬೋಪಣ್ಣ , ಕೊಡಗು

ಕೆ.ಗೋಪಿನಾಥ್ (ವಿಶೇಷ ಚೇತನ ) ಬೆಂಗಳೂರು ನಗರ

ರೋಹಿತ್ ಕುಮಾರ್ ಕಟೀಲ್, ಉಡುಪಿ

ಎ. ನಾಗರಾಜ್ , ಕಬ್ಬಡಿ , ಬೆಂಗಳೂರು ನಗರ

ಸಿನಿಮಾ

ದೇವರಾಜ್, ಬೆಂಗಳೂರು ನಗರ

ಶಿಕ್ಷಣ

ಸ್ವಾಮಿಲಿಂಗಪ್ಪ, ಮೈಸೂರು

ಶ್ರೀಧರ್ ಚಕ್ರವರ್ತಿ, ಧಾರವಾಡ

ಪ್ರೊ. ಪಿ.ವಿ.ಕೃಷ್ಣಭಟ್, ಶಿವಮೊಗ್ಗ

ಸಂಕೀರ್ಣ

ಡಾ. ಬಿ. ಅಂಬಣ್ಣ, ವಿಜಯನಗರ

ಕ್ಯಾಪ್ಟನ್ ರಾಜಾರಾವ್, ಬಳ್ಳಾರಿ

ಗಂಗಾವತಿ ಪ್ರಾಣೇಶ್ , ಕೊಪ್ಪಳ

ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಎಚ್ .ಎ ಸ್.ಸಾವಿತ್ರಿ, ಬೆಂಗಳೂರು ನಗರ

ಪ್ರೊ. ಜಿ.ಯು. ಕುಲಕರ್ಣಿ, ಬೆಂಗಳೂರು

ಕೃಷಿ

ಡಾ.ಸಿ.ನಾಗರಾಜ್, ಬೆಂಗಳೂರು ಗ್ರಾಮಾಂತರ

ಗುರುಲಿಂಗಪ್ಪ ಮೇಲ್ದೊಡ್ಡಿ , ಬೀದರ್

ಶಂಕ್ರಪ್ಪ ಅಮ್ಮನಘಟ್ಟ, ತುಮಕೂರು

ಪರಿಸರ

ಮಹಾದೇವ ವೇಳಿಪಾ, ಉತ್ತರಕನ್ನಡ

ಬೈಕಂಪಾಡಿ ರಾಮಚಂದ್ರ, ದಕ್ಷಿಣ ಕನ್ನಡ

ಪತ್ರಿಕೋದ್ಯಮ

ಪಟ್ನಮ್ ಅನಂತ ಪದ್ಮನಾಭ ಮೈಸೂರು

ಯು.ಬಿ. ರಾಜಲಕ್ಷ್ಮೀ , ಉಡುಪಿ

ನ್ಯಾಯಾಂಗ

ಸಿ.ವಿ.ಕೇಶವ ಮೂರ್ತಿ ಮೈಸೂರು

ಆಡಳಿತ

ಎಚ್.ಆರ್.ಕಸ್ತೂರಿ ರಂಗನ್, ಹಾಸನ

ಸೈನಿಕ

ನವೀನ್ ನಾಗಪ್ಪ, ಹಾವೇರಿ

ಯಕ್ಷಗಾನ

ಗೋಪಾಲ ಆಚಾರ್ಯ, ಶಿವಮೊಗ್ಗ ಜಿಲ್ಲೆ

Related posts

ಸೂಡಿ: ಮಾರುತೇಶ್ವರ ಕಾರ್ತಿಕೋತ್ಸವ ಸಂಭ್ರಮ.

satyadarshana

ಅವೈಜ್ಞಾನಿಕ ಕಾಮಗಾರಿ ಸಾರ್ವಜನಿಕರಿಗೆ ತೊಂದರೆ

satyadarshana

ಕಾರಟಗಿ: ಭೂದಾಖಲೆಗಳ ಗಣಕೀಕರಣಕ್ಕೆ ಸಚಿವರಿಂದ ಚಾಲನೆ

satyadarshana

Leave a Comment