ಬೆಂಗಳೂರಿನ ಬಂಡಿ ಮಹಾಕಾಳಿ ಅಮ್ಮನವರ ದೇವಸ್ಥಾನ.. ಹೊಸ ಸಿನಿಮಾಗಳ ಮುಹೂರ್ತಕ್ಕೆ ಪುಣ್ಯಕ್ಷೇತ್ರ ಇದ್ದಂಗೆ.. ಬೆಳ್ಳಂಬೆಳಗ್ಗೆ ಹೊಸಬರ ಒಂದು ಸಿನಿಮಾ ಮುಹೂರ್ತವಾಯ್ತು.. ಆ ಮುಹೂರ್ತಕ್ಕೆ ಟೈಟಲ್ ಪೋಸ್ಟರ್ ರಿವೀಲ್ಗೆ ಕರ್ನಾಟಕದ ನಗೆವೀರ ನವರಸ ನಾಯಕ ಜಗ್ಗೇಶ್ ಸಾಥ್ ನೀಡಿದ್ರು. ಮನಸಾರೆ ರಾಯರ ಹೆಸರೇಳುತ್ತಾ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ರು.. ಅಷ್ಟಕೂ ಯಾವುದು ಆ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ರಾಜಾ ಸೀಟ್.ಸಿನಿಮಾ ಅನ್ನೋದೆ ಒಂದು ಸುಂದರ ಕನಸು.. ಆ ಕನಸಿನ ಹಿಂದೆ ಬಿದ್ರೆ ಮಾತ್ರ ಆಗೋದು ಸಿನಿಮಾ ನನಸು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದ ಸಿನಿಮಾ ಕನಸು ಮನಸಿನ ವ್ಯಕ್ತಿ ಈಗ ಪ್ರೊಡ್ಯೂಸರ್ ಆಗ್ತಿದ್ದಾರೆ. ಆ ಕನಸಿನ ಸಿನಿಮಾ ಮನಸಿಗೆ ತೋತಾಪುರಿ ನಾಯಕ ನವರಸ ನಾಯಕ ಜಗ್ಗೇಶ್ ಮನಸಾರೆ ಹರಸಿ ಹಾರೈಸಿದ್ದಾರೆ.ರಾಜಾ ಸೀಟ್.. ಮೇಘನಾ ರಾಜ್ ಅವರಿಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ‘ಇರುವುದೆಲ್ಲವ ಬಿಟ್ಟು’ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಕಾಂತ ಕನ್ನಲ್ಲಿ ನಿರ್ದೇಶನ ಮಾಡಲು ಹೊರಟಿರೋ ಸಿನಿಮಾ.. ಇನ್ನು ಸಿನಿಮಾದ ನಿರ್ಮಾಪಕ ಹತ್ತು ವರ್ಷಕ್ಕೂ ಹೆಚ್ಚು ಕಾಲ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಶ್ರೀರಾಮ್ ನಿರ್ಮಾಣದ ಚೊಚ್ಚಲ ಸಿನಿಮಾ.. ಆರ್ವ ಅನ್ನೋ ಕಿರುತೆರೆಯ ಕಲಾವಿದ ಈ ರಾಜಾ ಸೀಟ್ ಸಿನಿಮಾದ ನಾಯಕ ನಟ.. ಶೂಟಿಂಗ್ ಹೊರಡಲು ಸಿದ್ಧವಾಗಿರೋ ರಾಜಾ ಸೀಟ್ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್ ಮಾಡಿ ನವರಸ ನಾಯಕ ಜಗ್ಗೇಶ್ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
