Satya Darshana
ಬಿಸಿ ಬಿಸಿ ಸುದ್ದಿ
Otherಕ್ರೀಡೆಜಿಲ್ಲೆಟ್ರೆಂಡ್ದೇಶ-ವಿದೇಶಫೋಟೋಬಿಸಿ ಬಿಸಿ ಸುದ್ದಿರಾಜ್ಯಲೈಫ್ ಸ್ಟೈಲ್ವಿಡಿಯೋಸಿನಿಮಾ

ಡಿಬೇಟ್ : ಎಲ್ಲದಕ್ಕೂ ಕುಮಾರಸ್ವಾಮಿ ಹೈಕಮಾಂಡ್ ಒಪ್ಪಿಗೆ ಪಡೆಯಬೇಕಾ?

Debates

oi-Gururaj

|

Updated: Tuesday, June 19, 2018, 11:22 [IST]

Google Oneindia Kannada News

ಎಚ್ ಡಿ ಕುಮಾರಸ್ವಾಮಿ ಎಲ್ಲದಕ್ಕೂ ರಾಹುಲ್ ಗಾಂಧಿ ಪರ್ಮಿಷನ್ ತೊಗೋಬೇಕಾ?

ಬೆಂಗಳೂರು, ಜೂನ್ 19 : ‘ಕಾಂಗ್ರೆಸ್ ನಾಯಕರ ಬೆಂಬಲದ ಮುಲಾಜಿನಲ್ಲಿ ನಾನು ಸರ್ಕಾರವನ್ನು ರಚನೆ ಮಾಡಿದ್ದೇನೆ ಎನ್ನುವುದು ನನ್ನ ಮಾತು, ಇದು ನಿಜವೂ ಹೌದು’ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಹೇಳಿದ್ದ ಮಾತಿದು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಸಂಸ್ಕೃತಿಗೆ ತಡೆ ಬೀಳಲಿದೆ ಎಂಬುದು ಜನರ ನಿರೀಕ್ಷೆ ಆಗಿತ್ತು. ಆದರೆ, ಮುಖ್ಯಮಮಂತ್ರಿ ಕುಮಾರಸ್ವಾಮಿ ಪದೇ ಪದೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಯಾಗುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಎಚ್‌ಡಿಕೆ-ರಾಹುಲ್ ಭೇಟಿಯಿಂದ ಸಿದ್ದರಾಮಯ್ಯಗೆ ಗುದ್ದು!ಎಚ್‌ಡಿಕೆ-ರಾಹುಲ್ ಭೇಟಿಯಿಂದ ಸಿದ್ದರಾಮಯ್ಯಗೆ ಗುದ್ದು!

‘ನನ್ನ ಮಾತಿನಿಂದ ನಾಡಿನ ಜನರಿಗೆ ಅಗೌರವ ತೋರಿಸಿದಂತೆ ಆಗುವುದಿಲ್ಲ. ಕಾಂಗ್ರೆಸ್‌ ಬೆಂಬಲದ ಮುಲಾಜು ನನಗಿದೆ. ಆದರೆ ಆ ಪಕ್ಷದ ಮುಲಾಜು ನನಗಿಲ್ಲ’ ಎಂದು ಕುಮಾರಸ್ವಾಮಿ ಹೇಳಿದ್ದರು.

Debates : Its necessary to take Rahul Gandhi permission for big decision

ಕರ್ನಾಟಕದಲ್ಲ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಹೈಕಮಾಂಡ್ ನಾಯಕರಿಂದ ಹಸಿರು ನಿಶಾನೆ ಪಡೆದುಕೊಳ್ಳುವುದು ಅನಿವಾರ್ಯ. ಆದರೆ, ಕುಮಾರಸ್ವಾಮಿ?

'ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ' : ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ಡಿಕೆ‘ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ’ : ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ಡಿಕೆ

ಎರಡು ದಿನಗಳ ಕಾಲ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಬಜೆಟ್ ಮಂಡನೆ, ಕಾಂಗ್ರೆಸ್ ನಾಯಕರ ಸಹಕಾರ ಮುಂತಾದ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಗೆ ಭೇಟಿ ನೀಡಿದಾಗಲೆಲ್ಲ ರಾಹುಲ್ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. ಹಾಗಾದರೆ ಈ ಹೈಕಮಾಂಡ್ ಸಂಸ್ಕೃತಿ ಸರಿಯೇ?, ಪ್ರತಿ ವಿಚಾರಕ್ಕೂ ಅವರ ಒಪ್ಪಿಗೆ ಪಡೆಯುವುದು ಅಗತ್ಯವೇ? ಎಂದು ಚರ್ಚೆಗಳು ನಡೆಯುತ್ತಿವೆ.

ಕುಮಾರಸ್ವಾಮಿ, ರಾಹುಲ್ ಗಾಂಧಿ ಭೇಟಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ, ಆರೋಗ್ಯಕರವಾದ ಚರ್ಚೆ ನಡೆಯಲಿದೆ.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

English summary

Karnataka Chief Minister H.D.Kumaraswamy met Congress president Rahul Gandhi and discussed issues related to Karnataka, including budget. It is necessary to take Rahul Gandhi permission before taking big decision.

Related posts

ಆಧುನಿಕ ಭಾರತದ ಶಿಲ್ಪಿ ಪಂಡಿತ್ ನೆಹರು :ಮತ್ತಿಕಟ್ಟಿ 

satyadarshana

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಅ.4ಕ್ಕೆ

satyadarshana

ಕನಸು ನನಸಾಗಿಸಲು ಪೊಲೀಸ್ ಜೀಪ್ ಕದ್ದ ಭೂಪ…

satyadarshana

Leave a Comment