ಹರಪನಹಳ್ಳಿ. ಕೆ.ಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ. ಹರಪನಹಳ್ಳಿ ದಕ್ಷಿಣ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ 2026-27ನೇ ಸಾಲಿನ ಕ್ರೀಡಾ ಕೂಟವನ್ನು ಮಂಗಳವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. 
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಲೇಪಾಕ್ಷಪ್ಪ ಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳು ಕ್ರೀಡಾಕೂಟ, ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಡರಾಗಿ ಬೆಳೆಯಬೇಕಾದರೆ ಕ್ರೀಡೆ ಅತ್ಯ ಅವಶ್ಯಕ ಎಂದರು ಎಲ್ಲಾ ಮಕ್ಕಳು ಸಕ್ರಿಯವಾಗಿ ಕ್ರೀಡೆಯಲ್ಲಿ ಭಾಗವಹಿಸುದರಿಂದ ದೈಹಿಕ ಮನೋಭಾವ ಸಮತೋಲನ ನಾಯಕತ್ವ ಕೌಶಲ್ಯ ಬೆಳವಣಿಗೆ ಆಗುತ್ತದ್ದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಮಕ್ಕಳು ವಲಯ ಮಟ್ಟ ತಾಲ್ಲೂಕು ಮಟ್ಟ. ಜಿಲ್ಲಾ ಮಟ್ಟ ರಾಜ್ಯ ಮಟ್ಟದಲ್ಲಿ ವಿಜೇತರಾಗಿ ಬರಲಿ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ದೈಹಿಕ ಪರೀವಿಕ್ಷಕರಾದ ಕೆ.ಷಣ್ಮುಖಪ್ಪ ಮಾತನಾಡಿ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಕ್ರೀಡೆಯಲ್ಲಿ ಭಾಗವಸವುದು ಮುಖ್ಯ ದೈಹಿಕ ಶಿಕ್ಷಕರ ತೀರ್ಮಾನವೇ ಅಂತಿಮ ತೀರ್ಪು ಎಲ್ಲಾರು ತೀರ್ಪುಗೆ ಬದ್ದರಗಿರಬೇಕು ಎಂದು ಕಿವಿ ಮಾತು ಹೇಳಿದರು . . . ತಾಲ್ಲೂಕು ಸಮನ್ವಯ ಅಧಿಕಾರಿಗಳಾದ ಹೊನತ್ತೆಪ್ಪ ಗುಂಡು ಎಸೆಯುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಕೆ ಸಿ ಎ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ.ಶ್ರೀದರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಸಿ.ಎ . ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಗುರುಗಳಾದ ಕಾಶೀನಾಥ್ ಎನ್.ಕೊಟ್ರೇಶ್. ಕೆ. ಸಿ. ಎ.ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ ಸಂತೋಷ. ಮನೋಹರ್. ವಿರೇಶ್. ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಣ್ಣ ಪೂಜಾರ್. ಜಿಲ್ಲಾ ಖಜಾoಶಿಯಾದ ದೈಹಿಕ ಶಿಕ್ಷಕರಾದ .ರಾಮಚಂದ್ರಪ್ಪ. ಜಯಪ್ರಕಾಶ್. ದೈಹಿಕ ಶಿಕ್ಷಕರಾದ ಸುರೇಶ ಎಸ್ . ಅಣ್ಣ.ಪ್ಪ. ದಾದಾಪೀರ್. ಪ್ರದೀಪ್. ಪರುಶಪ್ಪ.ಎಸ್ ಆರ್.ಮಾರೇರ. ನಟರಾಜ್. ಅಮೃತಚಾರಿ. ಬಿ.ದೇವರಾಜ್. ಪ್ರದೀಪ್. ಕೊಟ್ರೇಶ್ ಗುಣಿವಿ . ತಿರುಪತಿ ಮಂಜುನಾಥ್ ಎಂ . ಸುಜಾತಾ ಬಡಿಗ್ಯಾರ್. ಜಡೆಯಮ್ಮ. ಸುನೀತಾ. ನಾಗರತ್ನ. ಶೋಭಾಕುಮಾರಿ ಸುಧಾ .ಮಂಗಳಗೌರಮ್ಮ. ಹಾಗೂ .ಶಾಲೆಯ ಹಳೆಯ ವಿದ್ಯಾರ್ಥಿಗಳು. ಸಿಬ್ಬಂದಿಗಳು ಉಪಸ್ಥಿತರಿದ್ದರು.
