Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಶಾಸಕ ಹಿಟ್ನಾಳ ಅವರಿಂದ ರಸ್ತೆ, ಸೇತುವೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ

ಅಳವಂಡಿ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಹಾಗೂ ಸೇತುವೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಸಮೀಪದ ಕವಲೂರು ಗ್ರಾಮದಲ್ಲಿ ₹19.60 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಕವಲೂರು ಗ್ರಾಮಕ್ಕೆ ಹೊಂದಿ ಕೊಂಡಿರುವ ಹಳ್ಳಕ್ಕೆ 3 ಚೆಕ್ ಡ್ಯಾಮ್ ಗಳ ನಿರ್ಮಾಣದಿಂದ 500-600 ಎಕರೆ ಭೂಮಿ ನೀರಾವರಿ ಪ್ರದೇಶ ಆಗಲಿದೆ. ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ರಸ್ತೆ ಕಾಮಗಾರಿಗೆ ಅಡಿಗಲ್ಲು: ₹1 ಕೋಟಿ ವೆಚ್ಚದಲ್ಲಿ ಕವಲೂರು ಗ್ರಾಮದ ಮುಖ್ಯರಸ್ತೆ (ರಿಂಗ್ ರೋಡ್) ಹಾಗೂ ಕವಲೂರು-ಬನ್ನಿಕೊಪ್ಪನ 1 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.

ಮುಖಂಡರಾದ ಎಸ್.ಬಿ.ನಾಗರ ಹಳ್ಳಿ, ಪ್ರಸನ್ನ ಗಡಾದ, ಗೂಳಪ್ಪ ಹಲಗೇರಿ, ಭರಮಪ್ಪ ನಗರ, ಬಾಲಚಂದ್ರನ್ ಮುನಿರಾಬಾದ್, ತೋಟಪ್ಪ ಶಿಂಟ್ರ, ಹನುಮಂತಪ್ಪ , ಹನುಮಂತ ಅನ್ವರ್ ಗಡದ, ಸುರೇಶ ದಾಸರಡ್ಡಿ, ಅರವಿಂದಪ್ಪ, ಹೊನ್ನಪ್ಪಗೌಡ, ಶಾಹೀದ್ ತಹಶೀಲ್ದಾರ್, ದೇವಪ್ಪ, ಮಹಾಂತೇಶ, ಹೊನ್ನಕೇರಪ್ಪ, ನಾಗರಾಜ್, ಮುತ್ತಣ್ಣ, ಬಾಳಪ್ಪ, ಅಕ್ಬರ್, ಉಮೇಶ, ಅಕ್ಬರ್ ಪಲ್ಟಾನ್, ತಾ.ಪಂ ಇಒ ದುಂಡಪ್ಪ ತುರಾದಿ, ಕೃಷಿ ಇಲಾಖೆಯ ಎಡಿ ಜೀವನಸಾಬ, ಲೋಕೋಪಯೋಗಿ ಇಲಾಖೆಯ ಎಇಇ ವೆಂಕಟೇಶ, ಪಿಎಸ್‌ಐ ಪ್ರಹ್ಲಾದ್ ನಾಯಕ, ಪಿಡಿಒ ಅನಿತಾ ಹಾಗೂ ಇತರರು ಇದ್ದರು.

 

Related posts

ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆ: ಸಮರ್ಪಕ ಅನುಷ್ಠಾನಕ್ಕೆ ಸಲಹೆ

satyadarshana

ಬದಲಾವಣೆಯ ಹಾದಿಯಲ್ಲಿ ಜಕ್ಕಲಿ ಸರ್ಕಾರಿ ಶಾಲೆ: ದಾಖಲಾತಿ ಆಂದೋಲನಕ್ಕೆ ಭರ್ಜರಿ ಚಾಲನೆ

satyadarshana

ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡ ಪ್ರತಿಭಟನೆ- ಬೆಳೆ ವಿಮೆಗೆ ಆಗ್ರಹ

satyadarshana

Leave a Comment