ರೋಣ: ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಿ. ಎನ್. ಬಚೇನಹಳ್ಳಿ, ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನಾಗಪ್ಪ ಕೆಂಗಾರ, ಬಿಲ್ ಕಲೆಕ್ಟರ್ ಸೋಮಶೇಖರಯ್ಯ ಓದಿಸೋಮಠ, ಗಣಕಯಂತ್ರ ಆಪರೇಟರ್ ಶಕುಂತಲಾ ನವಲಗುಂದ, ಸಿಪಾಯಿ ಈರಪ್ಪ ಕಾಳಿ, ವಾಟರ್‌ಮ್ಯಾನ್‌ಗಳಾದ ರವಿಕುಮಾರ ಕಮ್ಮಾರ, ಸಂಜು ಕುಮಾರ ತಳವಾರ, ಸ್ವಚ್ಛತಾ ಸಿಬ್ಬಂದಿ ನಿಂಗಬಸಪ್ಪ ಜೋಗಿನ, ರವಿ ತಿಲಗರ, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
