Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

9ನೇ ದಿನದಲ್ಲಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ ಹೋರಾಟ 

9ನೇ ದಿನದಲ್ಲಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ ಹೋರಾಟ 

ಕೊಪ್ಪಳ : ತಾಲೂಕಿನಲ್ಲಿ ಹತ್ತಾರು ಸಾವಿರ ಜಾನುವಾರುಗಳನ್ನು ರೈತರು ಸಾಕುತ್ತಾರೆ. ಜಿಲ್ಲಾಧಿಕಾರಿಗಳು ಬಸಾಪುರ ಕೆರೆಗೆ ಕಾಂಪೌಂಡ್ ಕಟ್ಟಿರುವುದನ್ನು ತೆರವು ಮಾಡಿ ಬಲ್ಡೋಟ ಅತಿಕ್ರಮಣದಿಂದ ಬಿಡಿಸಿ ಕೊಡುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಅಸಮಾಧಾನ ವ್ಯಕ್ತಪಡಿಸಿದರು. ದಿ:06.052026 ಬೆಂಗಳೂರಿನಲ್ಲಿ ಕೆರೆ ಪ್ರಾಧಿಕಾರದಲ್ಲಿ ವಿಚಾರಣೆ ನಡೆದು ಕೆರೆ ಮಂಜೂರಿ ಷರತ್ತು ಉಲ್ಲಂಘನೆ ಆಗಿದ್ದರ ಮೇಲೆ ಕೆರೆ ಬಿಡಿಸಿಕೊಡಲು ನಿರ್ದೇಶನ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದು ಬಿಟ್ಟರೆ ಇದುವರೆಗೆ ಕೆರೆ ತೆರವು ಮಾಡಿ ಕೊಡುತ್ತಿಲ್ಲ. ಬೇಸಿಗೆಯಲ್ಲಿ ಕೆರೆ ಸುತ್ತಲಿರುವ ಸಾವಿರಾರು ಕುರಿ, ಹಸುಗಳು ನೀರಿಲ್ಲದೇ, ಮೇವಿಲ್ಲದೆ ಬಡಕಲು ಎಲುಬಿನ ಹಂದರದಂತಾಗಿ ದಾರಿಯಲ್ಲಿ ನಡೆದು ಹೋಗುತ್ತಿರುವಾಗಲೇ ಮಧ್ಯದಲ್ಲಿ ಬಿದ್ದು ಸಾಯುತ್ತಿವೆ. ಇಂಥ ಭೀಕರ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿದಿನಗಳು ನೆರವಿಗೆ ಬಂದು ಬಸಾಪುರ ಕೆರೆ ಮುಕ್ತಗೊಳಿಸಬೇಕು ಎಂದರು.

ಧರಣಿಯಲ್ಲಿ ಮೂಕಪ್ಪ ಮೇಸ್ತ್ರಿ ಬಸಾಪುರ, ಕನಕಪ್ಪ ಪೂಜಾರ ಇಂದರಗಿ, ರೈತ ಮುಖಂಡ ಫಕ್ಕೀರಗೌಡ ಕಾಸನಕಂಡಿ, ಯಂಕಪ್ಪ ಕಾಸನಕಂಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ ಬಸಾಪುರ, ನಾಗಪ್ಪ ಗೋಡೆಕಾರ ಕಿನ್ನಾಳ ಮುಂತಾದವರು ಇದ್ದರು.

Related posts

ಬಾಗಲಕೋಟೆ ಒಟ್ಟು 23 ವಿದ್ಯುತ್ ವಿತರಣಾ ಕೇಂದ್ರ 400 ಕಿ. ವ್ಯಾ. ಸಾಮರ್ಥ್ಯದ ಲೋಕಾಪೂರ ವಿದ್ಯುತ್ ಸ್ವೀಕರಣಾ ಕೇಂದ್ರ

satyadarshana

ಸಾರ್ವಜನಿಕರ ಅರ್ಜಿಗಳನ್ನು ಒಂದು ವಾರದಲ್ಲಿ ಸಕಾರಾತ್ಮಕವಾಗಿ ವಿಲೇವಾರಿ ಮಾಡಿ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್

satyadarshana

ಎಲೆಕ್ಷನ್‌ ಸಿದ್ಧತೆ :ಕಾಂಗ್ರೆಸ್‌ ಟಿಕೆಟ್‌ಗೆ 750 ಅರ್ಜಿ!

satyadarshana

Leave a Comment