Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸತತ 4ನೇ ಬಾರಿಗೆ ಕಪ್‌ ಮುಡಿಗೆರಿಸಿದ 17ನೇ ವಾರ್ಡನ ತಂಡ.

 

ಗಜೇಂದ್ರಗಡ : ಯುವಕರು ಕ್ರೀಡೆಯೊಂದಿಗೆ ಸಾಮರಸ್ಯದ ಮಹತ್ವವನ್ನು ಅರಿತು ಕ್ರೀಕೆಟ್‌ ಪಂದ್ಯಾವಳಿಯಲ್ಲಿ ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು ಎಂದು ಕರ್ನಾಟಕ ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ನಗರದ ಎಸ್. ಎಮ್.‌ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ದುರ್ಗಾ ಬಾಯ್ಸ ವತಿಯಿಂದ ಆಯೋಜನೆ ಮಾಡಿದ ವಾರ್ಡವೈಸ್‌ ಕ್ರೀಕೆಟ ಟೊರ್ನಾಮೆಂಟ್‌ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಕ್ರೀಡೆಗಳನ್ನು ದೈಹಿಕ ವ್ಯಾಯಾಮದೊಂದಿಗೆ ಆರೋಗ್ಯಕರ ವಾತವರಣದಲ್ಲಿ ಪಂದ್ಯವನ್ನು ಆಯೋಜನೆ ಮಾಡುತ್ತಿದ್ದರು, ಆದರೆ ಇಂದಿನ ಯುವ ಪೀಳಿಗೆಯು ಕ್ರೀಕೆಟ್ ಆಟವನ್ನು ಮೋಜು ಮಸ್ತಿಗಾಗಿ ಆಯೋಜನೆ ಮಾಡದೆ, ಸಾಮರಸ್ಯದೊಂದಿಗೆ ಪಂದ್ಯಾವಳಿಯನ್ನು ಯಶಸ್ಸು ಮಾಡಬೇಕು. ಗಜೇಂದ್ರಗಡದಲ್ಲಿ ಅನೇಕ ಆಟಗಾರರು ರಣಜಿ, ರಾಷ್ಟೀಯ ತಂಡಗಳಲ್ಲಿ ಸೇರುವ ಅವಕಾಶ ಇದೆ ಸತತ ಪ್ರಯತ್ನ ಮಾಡಬೇಕಿದೆ ಎಂದರು.

ಬಳಿಕ ನಿಕಟಪೂರ್ವ ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ, ಶಿವರಾಜ ಘೋರ್ಪಡೆ, ರಾಜೂ ಸಾಂಗ್ಲೀಕರ ಮಾತನಾಡಿದರು.

ಟೋರ್ನಾಮೆಂಟನ ಪ್ರಥಮ ಬಹುಮಾನವನ್ನು 17ನೇ ವಾರ್ಡಿನ ದುರ್ಗಾ ಬಾಯ್ಸ, ದ್ವಿತೀಯ ಬಹುಮಾನ 22ನೇ ವಾರ್ಡಿನ ಶ್ರೀ ದುರ್ಗಾ ಬಾಯ್ಸ, ತೃತೀಯ ಬಹುಮಾನವನ್ನು 3 ನೇ ವಾರ್ಡಿನ ಛತ್ರಪತಿ ಶಿವಾಜಿ ತಂಡ, ಸರಣಿ ಶ್ರೇಷ್ಠ ರಾಕೇಶ ಮಾರನಬಸರಿ, ಉತ್ತಮ ಬ್ಯಾಟರ ಗೋವಿಂದ ಮನೇರಾಳ. ಉತ್ತಮ ಬಾಲರ ಮಂಜುನಾಥ ಘೋರ್ಪಡೆ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬಿಲ್ಲಾ ನಿಡಗುಂದಿ, ಅಮರೇಶ ಬಂಡಿವಡ್ಡರ, ರವಿ ಭಜೇಂತ್ರಿ, ರವಿ ನಿಡಗುಂದಿ, ಚಂದ್ರು ನಿಡಗುಂದಿ, ಗಫರ ಡಾಲಾಯತ, ಗೈಬು ನಿಶಾನದಾರ, ರವಿ ಜರತಾರಿ, ಮಂಜುನಾಥ ಕುದರಿಕೋಟಿ, ನಾಗರಾಜ ಬಂಡಿವಡ್ಡರ, ರಾಜು ನಿಡಗುಂದಿ, ಶ್ರೀನಿವಾಸ ತಿರಕನ್ನವರ, ಅಶೋಕ ಭಜೇಂತ್ರಿ ಸೇರಿದಂತೆ ಅನೇಕರು ಇದ್ದರು.

Related posts

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರಿಗೆ ಗಲ್ಗೇರಿಸಿ.

satyadarshana

ಗಜೇಂದ್ರಗಡ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಚೆಣೆ…

satyadarshana

ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆ ಉದ್ಘಾಟನೆ: ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್

satyadarshana

Leave a Comment