Satya Darshana
ಬಿಸಿ ಬಿಸಿ ಸುದ್ದಿ
Other

ವಿಶ್ವ ಬಾಯಿ ಆರೋಗ್ಯ ಕಾರ್ಯಕ್ರಮ ಕುಕನೂರಿನಲ್ಲಿ ಹಮ್ಮಿಕೊಳ್ಳಲಾಯಿತು.

              ವಿಶ್ವ ಬಾಯಿ ಆರೋಗ್ಯ ಕಾರ್ಯಕ್ರಮ                           ಕುಕನೂರಿನಲ್ಲಿ ಹಮ್ಮಿಕೊಳ್ಳಲಾಯಿತು.

 

ಕುಕನೂರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕುಕನೂರ ಇವರುಗಳ ಸಹಯೋಗದಲ್ಲಿ ದಿನಾಂಕ 26.03.2026 ರಂದು ಸರಕಾರಿ ಐಟಿಐ ಕಾಲೇಜ್ ಕುಕನೂರನಲ್ಲಿ (ಗುದ್ನೆನೆಪ್ಪನಮಠ ) ವಿಶ್ವಬಾಯಿ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಮಂಜಪ್ಪ ಸರ್ ಟ್ರೇನಿಂಗ್ ಆಫೀಸರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ. ಸುಷ್ಮಾ ಜಿ ದಂತ ವೈದ್ಯಾಧಿಕಾರಿಗಳು ಮಾತನಾಡಿ ಮನುಷ್ಯನಿಗೆ ಬಾಯಿ ಒಂದು ಮುಖ್ಯ ದ್ವಾರ ಅದು ಬಹಳ ಮುಖ್ಯವಾದ ಅಂಗ ಮತ್ತು ಬಾಯಿ ಸ್ವಚ್ಛತೆ ಹಲ್ಲುಜ್ಜುವ ವಿಧಾನ ಹಾಗೂ ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಹಾಗೂ ಇಂದಿನ ಹದಿ ಹರೆಯದವರಲ್ಲಿ ಹೆಚ್ಚಾಗಿ ತಂಬಾಕು ಹಲೋ, ಪಾನ್ ಪರಾಕ್ ತಿನ್ನುವುದು ಜಾಸ್ತಿ ಆಗಿರೋದ್ರಿಂದ ಅನೇಕ ಯುವಕರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಆದ ಕಾರಣ ತಂಬಾಕು ಸೇವನೆಯಿಂದ ದೂರವಿರಲು ಮಾಹಿತಿ ನೀಡಿದರು.

ನಂತರ ಹದಿಹರೆಯದವರ ಆಪ್ತ ಸಮಾಲೋಚಕ ಶ್ರೀ ಕಳಕಪ್ಪ ಬಂಡಿ ಮಾತನಾಡಿ ಹದಿ ಹರೆಯದವರು ದೈಹಿಕವಾಗಿ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಡವಾಗಿರಲು ಬಾಯಿ ಸ್ವಚ್ಛತೆ ಹಾಗೂ ವಯಕ್ತಿಕ ಸ್ವಚ್ಛತೆ,ಪೌಷ್ಟಿಕ ಆಹಾರ ಸೇವನೆ, ಜೊತೆಗೆ ವಿಶ್ವ ಬಾಯಿ ಆರೋಗ್ಯ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಎನ್ ಸಿ ಡಿ ನರ್ಸಿಂಗ್ ಆಫೀಸರ್ ಶ್ರೀ ಕೃಷ್ಣ ದೇಶಪಾಂಡೆ ಹಾಗೂ ಡಿ ಇ ಓ ಶ್ರೀಮತಿ ರಮ್ಯ ತೊಂಡಿಹಾಳ ಶ್ರೀ ಮಂಜುನಾಥ ದುಗಲದ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Related posts

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ; ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ನೋಡಿ ರೇಪ್​ ಮಾಡಿದ್ರಂತೆ ಬಾಲಕರು!

satyadarshana

ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಮತಗಟ್ಟೆ ಅಧಿಕಾರಿಗಳಿಗೆ ಸಲಹೆ

satyadarshana

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

cradmin

Leave a Comment