Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಡಾ. ಬಿ. ಆರ್. ಅಂಬೇಡ್ಕರ್ ರವರ ಚಿಂತನೆಗಳು ಮಾನವೀಯತೆ ಜೀವಾಳ – ಡಾ. ಮಾದಿ.

 

ವಿಜಯಪುರ: ಭಾರತ ಸಂವಿಧಾನ ಶಿಲ್ಪಿ ಸಾಮಾಜಿಕ ಸಮಾನತೆ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾ ಚೇತನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಯನ್ನು ಸಹ ಎಚ್ಚರಗೊಳಿಸುತ್ತವೆ .

ಈ ದೇಶದಲ್ಲಿ ದೇವಾಲಯಕ್ಕಿಂತಲೂ ಶಾಲೆಯನ್ನು ತೆರೆದರೆ ದೇಶ ಉದ್ಧಾರವಾಗುತ್ತದೆ ಎಂಬ ವೈಚಾರಿಕ ನಿಲುವನ್ನು ಹೊಂದಿದ್ದರು ಎಂದು ಬಿ.ಕೆ. ಮಾದಿ ಹೇಳಿದರು. ಬಿಜಾಪುರ ತಾಲೂಕಿನ ಸುಕ್ಷೇತ್ರ ಆಹೇರಿಯಲ್ಲಿ ವಿಶ್ವ ರತ್ನ, ಸಂವಿಧಾನ ಶಿಲ್ಪಿ, ಭಾರತ ರತ್ನ

ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ನಿಮಿತ್ಯ ಶೈಕ್ಷಣಿಕ ಹಾಗೂ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಹೇಳಿದರು. ಕೊಡೆಕಲ್ದ ಪ್ರವಚನಕಾರರಾದ ಕೊಡೆಕಲ್ಲದ ಪ್ರವಚನಕಾರರಾದ ಪೂಜ್ಯ ಬಸವರಾಜಯ್ಯ ಮಹಾಸ್ವಾಮಿಗಳು ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಮಾತನಾಡುತ್ತಾ ಅವರ ಚಿಂತನೆಗಳನ್ನ ಮೈಗೂಡಿಸಿಕೊಳ್ಳುವ ಮೂಲಕ ವೈಯಕ್ತಿಕ ಮತ್ತು ಸಾಮಾಜಿಕ ಉದ್ಧಾರಕ ಸಾಗಬೇಕೆಂದರೆ ಅವರ ಶೈಕ್ಷಣಿಕ ವಿಚಾರಧಾರೆಯನ್ನು ಅರಿತು ಅರಿವು ಮೂಡಿಸಬೇಕಿದೆ ಎಂದು ಕಾರ್ಯಕ್ರಮದ ಉದ್ಘಾಟನೆ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ

ಆಹೇರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಸಂಗನಗೌಡ ಪಾಟೀಲ್ ಅಂಬೇಡ್ಕರ್ ಅವರ ಸಾಮಾಜಿಕ ಚಿಂತನ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುತ್ತು ಗೌಡ ಗೊಬ್ಬುರವರು ವಹಿಸಿದ್ದರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಂಥನಾಳ

ವಿರಕ್ತಮಠ ಪೂಜ್ಯರಾದ ಚಿಲ್ಲಲಿಂಗ ಸ್ವಾಮಿಗಳು ಸಮಾಜದ ಉದ್ದಾರಕ್ಕೆ ಶಿಕ್ಷಣವೇ ಬಲವಾದ ಅಸ್ತ್ರವಾಗಿದೆ ನೀವೆಲ್ಲರೂ ಶಿಕ್ಷಣವನ್ನ ನಮ್ಮೆಲ್ಲ ಮಕ್ಕಳಿಗೂ ಕೊಡಿಸಲು ಮುಂದಾಗಬೇಕೆಂದು ಆಶೀರ್ವಚನ ನೀಡಿದರು. ನಿವೃತ್ತ ಏ.ಎಸ್.ಐ ರಾಮಣ್ಣ ಹಡಗಲಿ ಮಿಲೆನಿಯಂ ಕೋಚಿಂಗ್ ಕ್ಲಾಸಿನ ನಿರ್ದೇಶಕರಾದ ಶಿವಾನಂದ ಮೂಲಿಮನೆ, ಸಾಮಾಜಿಕ ಹೋರಾಟಗಾರ ರಘು ಕಣಮೇಶ್ವರ, ಮುಖ್ಯ ಗುರುಗಳಾದ ಐ.ಸಿ.ಸಾರವಾಡ, ಗುರುದೇವ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ

ಬಿ. ಎಂ. ರಾಠೋಡ್ ಮುಂತಾದ ಅತಿಥಿಗಳು ಅಂಬೇಡ್ಕರ್ ಶೈಕ್ಷಣಿಕ ವಿಚಾರ, ಸಾಮಾಜಿಕ ಚಿಂತನೆಯನ್ನು ಕುರಿತು ಮಾತನಾಡುತ್ತಾ ಈ ದೇಶದ ಸಮಾಜದಲ್ಲಿನ ಎಲ್ಲಾ ವಲಯದ ಬಿಕ್ಕಟ್ಟುಗಳಿಗೆ ಅವರ ಚಿಂತನೆಗಳಲ್ಲಿ ಪರಿಹಾರವಿದೆ. ಅಂಬೇಡ್ಕರ್ ಅವರ ಕೃಷಿ ಚಿಂತನೆಗಳು ಕಾರ್ಮಿಕ ಮತ್ತು ಮಹಿಳಾಪರ ನಿಲುವುಗಳು ಅಸಾಧಾರಣವಾದದ್ದು ಎಂದು ಹೇಳಿದರು. ಕಾರ್ಯಕ್ರಮವನ್ನು ವಿಶ್ವ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಮಂಡಳಿ ಆಹೇರಿ ಯುವ ಬಳಗ ಸಂಘಟಿಸಿತು. ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಯಮುನಪ್ಪ ಗು. ಬೂದಿಹಾಳ್ ಕೊನೆಯಲ್ಲಿ ವಂದಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಯುವಕ ಮಂಡಳದ ಯುವಕರು ಅತಿಥಿಗಳನ್ನು ಸನ್ಮಾನಿಸಿದರು.

ವರದಿ ಮಲ್ಲಪ್ಪ ದೊಡ್ಡಮನಿ

Related posts

ಬೆಳ್ಳಂಬೆಳಗ್ಗೆ ಗದಗ, ಹಡಗಲಿ, ಹಾವೇರಿ ಸೇರಿ 6 ಕಡೆಗಳಲ್ಲಿ ದಾಳಿ

satyadarshana

ಗ್ರಂಥಾಲಯ ಶಿಕ್ಷಣ ಕ್ಷೇತ್ರದ ಹೃದಯಭಾಗ; ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ

satyadarshana

ಪಂಚರಾಜ್ಯ ಚುನಾವಣೆಗೆ ದಿನಾಂಕ ಫಿಕ್ಸ್, ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ.

satyadarshana

Leave a Comment