Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಗ್ರಾಮದ ಕಸ ಸಂಗ್ರಹಣಾ ವಾಹನಕ್ಕೆ ಮಂಜುಳಾ ಡ್ರೈವರ್ ~ ಮಹಿಳೆಯ ಕಾರ್ಯಕ್ಕೆ ಇಓ ಚಂದ್ರಶೇಖರ್ ಕಂದಕೂರ ಶ್ಲಾಘನೆ

ರೋಣ :- ಸಾರಿಗೆ ವಾಹನಗಳನ್ನು ಪುರುಷರಷ್ಟೆ ಚಲಾಯಿಸುವ ಸಂಪ್ರದಾಯ ಕರಗುತ್ತಾ ಬಂದಿದೆ. ಇತ್ತೀಚಿಗೆ ಅಲ್ಲಲ್ಲಿ ಕೆಲವೇ ಕೆಲವು ಮಹಿಳೆಯರು ಬಸ್, ಲಾರಿ ಮೊದಲಾದ ಭಾರಿ ವಾಹನಗಳನ್ನು ವೃತ್ತಿ ಪರವಾಗಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಹಾಗೆಯೇ ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಮಹಿಳೆ ಮಂಜುಳಾ ಸ್ವಚ್ಚ ವಾಹಿನಿ ಚಾಲಕಿಯಾಗಿ ಕೆಲಸ ಮಾಡುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ..

ಹೌದು ಜಕ್ಕಲಿ ಗ್ರಾಮ ಪಂಚಾಯತಿ ಯಲ್ಲಿ ಸ್ವ ಸಹಾಯ ಸಂಘದ ಮೂಲಕ ಚಾಲನಾ ತರಬೇತಿ ಪಡೆದು ಮಂಜುಳಾ ಯಲ್ಲಪ್ಪ ಮಾದರ ಸ್ವಚ್ಚ ವಾಹಿನಿ ಚಾಲಕಿಯಾಗಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದಾಳೆ, ಮಲ್ಲವ್ವ ಭರಮಪ್ಪ ಮಾದರ, ಶಿವವ್ವ ಈರಪ್ಪ ಮಾದರ, ರೇಣುಕಾ ಪ್ರಶಾಂತ ಮಾದರ ಇವರು ಕಸ ವಿಂಗಡನೆ ಕಾರ್ಯ ನಿರ್ವಹಿಸುತ್ತಿದ್ದಾರೆ ಈ ಮೂಲಕ ಮಹಿಳೆಯರೆ ಸ್ವಚ್ಚ ವಾಹಿನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ..

ಗ್ರಾಮ ಪಂಚಾಯತಿ ವತಿಯಿಂದ ಮನೆ ಮನೆಗೆ ತೆರಳಿ ಒಣ ಕಸವಾದ ಪ್ಲಾಸ್ಟಿಕ್ ಬಾಟಲಿ, ಗಾಜಿನ ಬಾಟಲಿ, ಪ್ಲಾಸ್ಟಿಕ್ ಚೀಲ, ಬಳಸಿ ಬಿಸಾಡುವ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಕಸ ವಿಲೇವಾರಿ ಘಟಕದಲ್ಲಿ ವಿಂಗಡಿಸಿ, ವರ್ಷಾಂತ್ಯದಲ್ಲಿ ಅವುಗಳನ್ನು ಹರಾಜು ಹಾಕುವ ಮೂಲಕ ಆದಾಯ ಗಳಿಸುವ ಯೋಚನೆಯಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ತೊಡಗಿದ್ದಾರೆ. ಅಲ್ಲದೆ ಪ್ರತಿ ಮನೆಗೆ ತಿಂಗಳಿಗೆ ರೂ. 30 ಮತ್ತು ಅಂಗಡಿಗಳಿಗೆ ರೂ.100 ಗಳನ್ನು ಸಂಗ್ರಹಿಸಿ ಅದರಲ್ಲೇ ತಮ್ಮ ವೇತನ ಪಾವತಿ ಮಾಡಿಕೊಂಡು, ಉಳಿದ ಹಣವನ್ನು ಉಳಿತಾಯ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಜಕ್ಕಲಿ ಗ್ರಾಮದ ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಇವರ ಕಾರ್ಯಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಸಿಬ್ಬಂದಿಗಳು ಬೆಂಬಲವಾಗಿ ನಿಂತಿದ್ದಾರೆ.

ಇಂದು ಜಕ್ಕಲಿ ಗ್ರಾಮ ಪಂಚಾಯತಿಗೆ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಶೇಂಗಾ ಎಣ್ಣೆ, ಕುಸುಬೆ ಎಣ್ಣೆ, ಗಾಣದ ಮೂಲಕ ಸಹ ಸ್ವ ಸಹಾಯ ಸಂಘದ ಮಹಿಳೆಯರು ಆದಾಯ ಗಳಿಸುತ್ತಿರುವ ಬಗ್ಗೆ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದರು. ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸ್ವ ಸಹಾಯ ಸಂಘದವರನ್ನು ಪ್ರೋತ್ಸಾಹಿಸಲು ಗ್ರಾಮ ಪಂಚಾಯತಿ ಯೋಜನೆ ರೂಪಿಸಲಾಗುತ್ತಿದೆ. ಗ್ರಾಮದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಹಿನ್ನೆಲೆ ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸಭಲ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯ ಜೊತೆಗೂಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕ ಪಂಚಾಯತಿಯೂ ಕೂಡ ಹಲವು ಯೋಜನೆ ರೂಪಿಸಲಾಗುತ್ತಿದೆ ಅಂತಾ ಮಹಿಳೆಯರ ಜೊತೆಗೆ ಚರ್ಚೆ ನಡೆಸಿದರು..

ಜಕ್ಕಲಿ ಗ್ರಾಮದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದಿಂದ ಗ್ರಾಮದ ಸ್ವಚ್ಚತೆ ಜೊತೆಗೆ ಸ್ವ ಸಹಾಯ ಸಂಘಗಳು ಸಬಲೀಕರಣಗೊಳ್ಳುತ್ತಿವೆ. ಮೇಲಾಧಿಕಾರಿಗಳ ಸಲಹೆ ಮಾರ್ಗದರ್ಶನ ಮೂಲಕ ಇದು ಸಾದ್ಯಾವಾಗಿದೆ

ಶಿವಯೋಗಿ ರಿತ್ತಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಕ್ಕಲಿ

ಸ್ವ ಸಹಾಯ ಸಂಘದ ಮೂಲಕ ಡ್ರೈವಿಂಗ್ ಟ್ರೈನಿಂಗ್ ಪಡೆದುಕೊಂಡು ಕಳೆದ 6 ತಿಂಗಳಿಂದ

ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಮುಂಜಾನೆ ಕಸ ಸಂಗ್ರಹಿಸಿ ಗ್ರಾಮವನ್ನು ಸ್ವಚ್ಚಗೊಳಿಸುವಲ್ಲಿ ಖುಷಿ ಇದೆ ಇದರಿಂದ ಸ್ವಂತ ದುಡಿಮೆ ಮತ್ತು ಆದಾಯ ಗಳಿಸುವ ಖುಷಿ ಇದೆ

ಮಂಜುಳಾ ಯಲ್ಲಪ್ಪ ಮಾದರ, ಸ್ವಚ್ಚ ವಾಹಿನಿ ಚಾಲಕಿ

ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ಗಳಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಈಗಾಗಲೇ ಡ್ರೈವಿಂಗ್ ತರಬೇತಿ ಕೊಡಲಾಗಿದ್ದು, ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾ.ಪಂ.ಗಳಲ್ಲಿ ಮಹಿಳೆಯರು ಸ್ವಚ್ಛ ವಾಹಿನಿಗಳನ್ನು ನಿರ್ವಹಿಸಲಿದ್ದಾರೆ.

*ಚಂದ್ರಶೇಖರ ಬಿ ಕಂದಕೂರ, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ರೋಣ*

 

Related posts

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನ ಅರಿವು ಹಾಗೂ ಮನಸ್ಥಿತಿ ಬದಲಾವಣೆ ಅಗತ್ಯ :ಜಿಲ್ಲಾ ನ್ಯಾ. ಬಸವರಾಜ

satyadarshana

ಚರ್ಚೆ: ಚಿಲ್ಟೂ ಪಕ್ಷಗಳ ಮಾತೆಲ್ಲ ಕೇಳಂಗಾಗಿದೆ ಎಂದ ಪರಮೇಶ್ವರ್

cradmin

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಪ್ರತಿವರ್ಷ ಗೊರವಯ್ಯ ನುಡಿಯುವ ಕಾರಣಿಕವನ್ನು ವರ್ಷದ ಭವಿಷ್ಯವಾಣಿ..

satyadarshana